CONNECT WITH US  

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಕಾಣಲು ಪರಿಶ್ರಮ ಮುಖ್ಯ

ಚಿತ್ರದುರ್ಗ: ಐಎಎಸ್‌, ಕೆಎಎಸ್‌ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳು ಕಠಿಣವಲ್ಲ. ಆದರೆ ಕಠಿಣ ಪರಿಶ್ರಮ ಇದ್ದರೆ ಹುದ್ದೆ ಗಿಟ್ಟಿಸಿಕೊಳ್ಳಬಹುದು ಎಂದು ಪ್ರೊಬೇಷನರಿ ತಹಶೀಲ್ದಾರ್‌ ಮಹೇಂದ್ರ ಹೇಳಿದರು. 

ನಗರದ ತರಾಸು ರಂಗಮಂದಿರದಲ್ಲಿ ಬೆಂಗಳೂರಿನ ಹರಿಪ್ರಸಾದ್‌ ಸ್ಪರ್ಧಾತ್ಮಕ ಪರೀûಾ ಕೇಂದ್ರದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಐಎಎಸ್‌, ಕೆಎಎಸ್‌, ಪಿಎಸ್‌ಐ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ಓದಿದರೆ ಮಾತ್ರ ದೊಡ್ಡ ಹುದ್ದೆಗಳನ್ನು ಪಡೆಯಲು ಸಾಧ್ಯ. ಓದುವ ಆಸಕ್ತಿಯೇ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಬೇಡಿ ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅಭ್ಯರ್ಥಿಗಳು ಹಾರ್ಡ್‌ವರ್ಕ್‌ ಮತ್ತು ಸ್ಮಾರ್ಟ್‌ ವರ್ಕ್‌ ಮಾಡಬೇಕು. ಆದರೆ ಕೆಲವೊಮ್ಮೆ ಅರ್ಜಿಗಳನ್ನು ಸಲ್ಲಿಸುವಾಗ ಅಗತ್ಯ ದಾಖಲೆಗಳನ್ನು ಲಗತ್ತಿಸದೆ ಎಸಗುವ ಸಣ್ಣಪುಟ್ಟ ತಪ್ಪುಗಳಿಂದ ಅವಕಾಶ
ಕಳೆದುಕೊಳ್ಳುವ ಪ್ರಸಂಗ ಬರಬಹುದು. ಹಾಗಾಗಿ ಮೈಯೆಲ್ಲಾ ಕಣ್ಣಾಗಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು. ಪರೀûಾ ಸಮಯದಲ್ಲಿ ನಿದ್ದೆಗೆಟ್ಟು ಓದುವುದರಿಂದ ಆರೋಗ್ಯದಲ್ಲಿ ಏರುಪೇರಾಗಿ ಭಯ, ಗಾಬರಿಗೆ ಒಳಗಾಗಬೇಡಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದಿನದ 24 ಗಂಟೆಯೂ ಓದುವುದು ಬೇಡ. ಗಮನವಿಟ್ಟು ಹತ್ತು ಗಂಟೆಗಳ ಕಾಲ ಓದಿದರೆ ಸಾಕು. ಐಎಎಸ್‌, ಕೆಎಎಸ್‌ ಮತ್ತು ಪಿಎಸ್‌ಐ ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ಉನ್ನತ
ಅಧಿಕಾರಿಗಳಾಗಹುದು ಎಂದು ತಿಳಿಸಿದರು. 

ನ್ಯಾಷನಲ್‌ ಜಿಯಾಗ್ರμ, ಡಿಸ್ಕವರಿ ಚಾನಲ್‌ಗ‌ಳು ಹಾಗೂ ಹಳೆ ಚಿತ್ರಗಳನ್ನು ನೋಡಿದರೆ ಸಾಕಷ್ಟು ಮಾಹಿತಿಗಳು ಸಿಗುತ್ತವೆ. ನದಿ, ಪರ್ವತ, ಸಮುದ್ರ, ಸಾಗರಗಳು ಎಲ್ಲೆಲ್ಲಿವೆ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಜಿಯಾಗ್ರμ ಪುಸ್ತಕಗಳನ್ನು ಓದಬೇಕು. ಪ್ರತಿ ನಿತ್ಯ ಪಟ್ಟಿ ಮಾಡಿಕೊಂಡು ಅದಕ್ಕನುಗುಣವಾಗಿ ಪುಸ್ತಕಗಳನ್ನು ಓದಿ ಸಿಕ್ಕಿರುವ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಕರೆ ನೀಡಿದರು.

ಒಳ್ಳೆಯ ಪುಸ್ತಕಗಳು ನಿಮ್ಮನ್ನು ಓದುವಂತೆ ಮಾಡುತ್ತವೆ. ಮೊದಲು ಬುಕ್ಸ್‌ಗಳನ್ನು ಕಲೆಕ್ಟ್ ಮಾಡಿಕೊಳ್ಳಿ, ನಂತರ ಕಲೆಕ್ಟರ್‌ ಆಗುತ್ತೀರಿ. ಎಂಟರಿಂದ ಹನ್ನೆರಡನೇ ತರಗತಿವರೆಗಿನ ಪುಸ್ತಕಗಳನ್ನು ಒಮ್ಮೆ ಓದಿ. ಸಾಕಷ್ಟು ಸಾಮಾನ್ಯ ಮಾಹಿತಿಗಳು ದೊರಕುತ್ತವೆ. ಬಯಲುಸೀಮೆ ಚಿತ್ರದುರ್ಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಜಾಗೃತಿ ಕಡಿಮೆಯಿದೆ. ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಓದಿಗೆ ಬಡತನ ಕಾರಣವಾಗಬಾರದು. 

ಉಚಿತ ಹಾಸ್ಟೆಲ್‌ಗ‌ಳಿವೆ, ಗ್ರಂಥಾಲಯಗಳಲ್ಲಿ ಸಾಕಷ್ಟು ಪುಸ್ತಕಗಳು ದೊರಕುತ್ತವೆ. ಸಮಯ ವ್ಯರ್ಥ ಮಾಡದೆ ಪುಸ್ತಕಗಳನ್ನು ಓದಿ ಕಷ್ಟ ಪಟ್ಟರೆ ಮುಂದೊಂದು ದಿನ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಸ್ಪರ್ಧಾತ್ಮಕ ಪರೀûಾ ತರಬೇತಿ ಕೇಂದ್ರದ ಹರಿಪ್ರಸಾದ್‌, ಪ್ರೊಬೇಷನರಿ ತಹಶೀಲ್ದಾರ್‌ ನಾಗರಾಜ್‌, ಗುರುಶಂಕರ್‌, ಕಾಂತರಾಜ್‌, ಕಾರ್ಯಾಗಾರದ ಸಂಘಟಕರಾದ ನ್ಯಾಯವಾದಿ ಪ್ರತಾಪ್‌ಜೋಗಿ, ಅಜಯ್‌ ಇದ್ದರು.

ಐಎಎಸ್‌ ಎಂದರೆ ಕೇವಲ ಶ್ರೀಮಂತರ ಮಕ್ಕಳು ಮಾತ್ರ ಓದುವುದು ಎನ್ನುವ ತಪ್ಪು ಕಲ್ಪನೆ ಬೇಡ. ಕನಿಷ್ಠ ಮೂರು ಸಾವಿರ ರೂ. ಖರ್ಚು ಮಾಡಿದರೆ ಒಳ್ಳೆಯ ಪುಸ್ತಕಗಳು ಸಿಗುತ್ತವೆ. ಅವುಗಳನ್ನು ರೆಫರ್‌ ಮಾಡಿದರೆ ಸ್ಪರ್ಧಾತ್ಮಕ
ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು.
 ಮಹೇಂದ್ರ, ಪ್ರೊಬೇಷನರಿ ತಹಶೀಲ್ದಾರ್‌

ಇಂದು ಹೆಚ್ಚು ಓದಿದ್ದು

ತುಮಕೂರಿನ ಹಳೆ ಸಿದ್ಧಗಂಗಾ ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್

Jan 18, 2019 06:50am

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

Jan 18, 2019 08:19am

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top