ಕಾಯಕ ಪ್ರಜ್ಞೆಯಿಂದ ಸುಖೀ ರಾಜ್ಯ


Team Udayavani, Dec 14, 2018, 4:48 PM IST

cta-3.jpg

ಹೊಸದುರ್ಗ: ಭಾರತೀಯರಾದ ನಾವು ಮಾತನಾಡುವುದು, ನಡೆದಾಡುವುದು, ಮೋಸ ಮಾಡುವುದು ಈ ಮೂರು ವಿಚಾರಗಳಲ್ಲಿ ಮುಂದೆ ಇದ್ದೇವೆ. ಇದರಿಂದ ಕೆಲಸ ಮಾಡುವ ಪ್ರವೃತ್ತಿ ಕಡಿಮೆಯಾಗುತ್ತಿದೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಗುರು ಒಪ್ಪತ್ತಿನಸ್ವಾಮಿ ವಿರಕ್ತಮಠ, ವೀರಶೈವ ಸಮಾಜ ಮತ್ತು ಜಗದ್ಗುರು ಜಯದೇವ ವಿದ್ಯಾರ್ಥಿನಿಲಯ ಟ್ರಸ್ಟ್‌ ವತಿಯಿಂದ ಗುರು ಒಪ್ಪತ್ತಿನಸ್ವಾಮಿ ವಿರಕ್ತಮಠದಲ್ಲಿ ನಡೆದ “ಶರಣ ಸಂಗಮ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.

 ದೇಹ ದಂಡನೆ ಮಾಡದೆ ಹಣ ಗಳಿಸಬೇಕೆನ್ನುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪರಿಶ್ರಮ ಇಲ್ಲದೆ ಸುಖೀ ರಾಜ್ಯ ಕಟ್ಟಲು ಸಾಧ್ಯವಿಲ್ಲ ಎಂದರು. ಆಧುನಿಕ ಮಾನವನಲ್ಲಿ ವ್ಯಾವಹಾರಿಕ ಪ್ರಜ್ಞೆ ಜಾಗೃತವಾಗಿದೆ. ಇದು ಚತುರತೆ, ಚಾಣಕ್ಯತೆಯನ್ನು ಕಲಿಸುತ್ತದೆ. ಇದರೊಟ್ಟಿಗೆ ಮತ್ತೂಬ್ಬರಿಗೆ ಟೋಪಿ ಹಾಕುವಷ್ಟು ಮಾನವ ಚತುರನಾಗಿದ್ದಾನೆ. ಇಂದಿನ ಜನರಿಗೆ ದುಡ್ಡಿನ ದರ್ಶನದ ಆಲೋಚನೆಯಾದರೆ, ಶರಣರಿಗೆ ಕಾಯಕದ ದರ್ಶನ ಮುಖ್ಯವಾಗಿತ್ತು. ವ್ಯಾವಹಾರಿಕ ಪ್ರಜ್ಞೆಯಿಂದ ಕಾಯಕ ಪ್ರಜ್ಞೆಗೆ ಬರಬೇಕು ಎಂದು ಕರೆ ನೀಡಿದರು.

ಭಾರತೀಯರ ಬದುಕು ಭ್ರಮೆಯ ಮೇಲೆ ನಿಂತುಕೊಳ್ಳುತ್ತಿದೆ. ನಾವು ಭ್ರಮೆಗೆ ಒಳಗಾಗದೆ ಸ್ವಾಭಾವಿಕವಾದ ಉತ್ತಮ ಜೀವನವನ್ನು ಕಟ್ಟಿಕೊಳ್ಳಬೇಕು. ಸಂವರ್ಧನೆಯ ಜೊತೆಗೆ ಮೌಲ್ಯವರ್ಧನೆಯಾಗಬೇಕು. ಇದರಿಂದ ನಮ್ಮೊಳಗೆ ಪಾರಮಾರ್ಥ ಪ್ರಜ್ಞೆ ಮೂಡುತ್ತದೆ ಎಂದರು.
 
ನಿವೃತ್ತ ಶಿಕ್ಷಕ ಎಸ್‌. ಶಿವಲಿಂಗಮೂರ್ತಿ ಮಾತನಾಡಿ, ವೀಣೆ ನುಡಿಸಿ ಸಂಗೀತಗಾರ ಸಂಗೀತವನ್ನು ಹೊರಗೆಡಹುತ್ತಾನೆ. ಆದರೆ ನಮ್ಮೊಳಗಿನ ವೀಣೆ ನುಡಿಸಬೇಕು. ಅದೇ ನಿಜವಾದ ಸಂಗಮ. ನಮ್ಮೊಳಗಿನ ಇಂದ್ರಿಯಗಳನ್ನು ಶುದ್ಧಿ ಮಾಡಿಕೊಳ್ಳಬೇಕು. ಎಲ್ಲರಲ್ಲೂ ಅಂತಃಶಕ್ತಿ ಇದ್ದು, ಅದು ಜಾಗೃತವಾಗಬೇಕು.

ಲಿಂಗಾನುಸಂಧಾನವಾಗಬೇಕು. ನಾಡಿಗಳನ್ನು ಶುದ್ಧಿಗೊಳಿಸಬೇಕು. ವಿಜ್ಞಾನ ಮತ್ತು ಯೋಗ ಎರಡೂ ಒಂದೇ. ಶರಣರ ವಿಚಾರಧಾರೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಎಸ್‌.ಎಂ. ಷಡಕ್ಷರಯ್ಯ, ಸಿದ್ಧರಾಮೇಶ್ವರ, ಡಾ| ಜಿ.ಎನ್‌. ಮಲ್ಲಿಕಾರ್ಜುನಪ್ಪ, ಎ.ಜೆ. ಪರಮಶಿವಯ್ಯ, ಎಂ.ಜಿ.ದೊರೆಸ್ವಾಮಿ, ಎ.ಎಸ್‌. ಸಿದ್ಧರಮೇಶ್‌ ಇದ್ದರು. ಅಮೃತವರ್ಷಿಣಿ ಕಲಾ ತಂಡದವರು ಪ್ರಾರ್ಥಿಸಿದರು. ಎಸ್‌. ಕಲ್ಮಠ ಸ್ವಾಗತಿಸಿದರು. ಈ. ಮಂಜುನಾಥ ನಿರೂಪಿಸಿದರು.
ರಾಮಲಿಂಗಯ್ಯ ವಂದಿಸಿದರು.  

ಶರಣರು, ದಾರ್ಶನಿಕರು, ಸಂತರು ಹುಸಿತನದ ಮೇಲೆ ಸೌಧವನ್ನು ಕಟ್ಟಲಿಲ್ಲ. ಅವರದು ಗಟ್ಟಿತನವಾಗಿತ್ತು. ಆದರೆ 21ನೇ ಶತಮಾನ ಹುಸಿತನದ ಕಾಲವಾಗಿದೆ. ಹುಸಿತನವನ್ನು ಬದುಕಿನ ಮೌಲ್ಯ ಎಂದು ಭಾವಿಸಬಾರದು. ಅದು ನಮ್ಮನ್ನೇ ಮೋಸಗೊಳಿಸುತ್ತದೆ.
 ಡಾ| ಶಿವಮೂರ್ತಿ ಮುರುಘಾ ಶರಣರು

ಟಾಪ್ ನ್ಯೂಸ್

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

Minister zameer ahmed khan hospitalized at chitradurga

Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು

ಯಡಿಯೂರಪ್ಪ

Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqwewq

Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.