ಕಾಲೇಜುಗಳ ಸುತ್ತಾಟ, ಸಂಜೆ ಮಿರ್ಚಿ-ಮಂಡಕ್ಕಿ


Team Udayavani, Nov 13, 2018, 3:36 PM IST

dvg-1.jpg

ದಾವಣಗೆರೆ:  ಸಾದಾ ಸೀದಾ ಜುಬ್ಟಾ, ಪೈಜಮಾ,… ಬಗಲಲ್ಲಿ ಒಂದು ಬ್ಯಾಗ್‌…, ಬಾಡಿಗೆ ಸೈಕಲ್‌ನಲ್ಲಿ ಕಾಲೇಜುಗಳ ಸುತ್ತಾಟ…, ಸಂಜೆ ಮಂಡಕ್ಕಿ, ಮೆಣಸಿನಕಾಯಿ ಪಾರ್ಟಿ…, ರಸ್ತೆ ಪಕ್ಕದ ಫುಟ್‌ಪಾತ್‌, ಕಟ್ಟೆ, ಮನೆಯಂಗಳದಲ್ಲಿ ಹರಟೆ…, ರಾತ್ರಿಯಡೀ ಸಂಘಟನೆಯದ್ದೇ ಚರ್ಚೆ… ಚರ್ಚೆ…. ಇದು, ಸೋಮವಾರ ನಿಧನರಾದ ಕೇಂದ್ರದ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್‌.ಎನ್‌. ಅನಂತಕುಮಾರ್‌ ದಾವಣಗೆರೆಯಲ್ಲಿ ಈ ಹಿಂದೆ ಎಬಿವಿಪಿ ಸಂಘಟಿಸಿದ ಸಂದರ್ಭದಲ್ಲಿನ ದಿನಚರಿ.

1982ರಲ್ಲಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ತು (ಎಬಿವಿಪಿ) ರಾಜ್ಯ ಕಾರ್ಯದರ್ಶಿಯಾಗಿದ್ದ ಅನಂತಕುಮಾರ್‌ ಬಾಡಿಗೆ ಸೈಕಲ್‌ನಲ್ಲಿ ಡಿಆರ್‌ಎಂ, ಡಿಆರ್‌ಆರ್‌, ಓಲ್ಡ್‌ ಮುನ್ಸಿಪಲ್‌ ಕಾಲೇಜು… ಹೀಗೆ ದಾವಣಗೆರೆಯ ವಿವಿಧ ಕಾಲೇಜುಗಳಿಗೆ ಸುತ್ತಾಡಿ, ವಿದ್ಯಾರ್ಥಿಗಳನ್ನು ಸಂಘಟಿಸಿ, ಎಬಿವಿಪಿ ಕಟ್ಟಿ ಬೆಳೆಸಿದರು. ಒಂದರ್ಥದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿಗೆ ಒಂದು ಭದ್ರ ಬುನಾದಿ ಹಾಕಿದವರು ಅನಂತಕುಮಾರ್‌ ಎಂದರೆ ಅತಿಶಯೋಕ್ತಿ ಅಲ್ಲ ಎನ್ನುತ್ತಾರೆ ಅವರ ಅಂದಿನ ಕೆಲ ಒಡನಾಡಿಗಳು. ಎಬಿವಿಪಿ ಸಂಘಟನೆ ಕೆಲಸದ ನಿಮಿತ್ತ ದಾವಣಗೆರೆಗೆ ಬಂದ ಸಂದರ್ಭದಲ್ಲಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡುತ್ತಿದ್ದ ಅನಂತಕುಮಾರ್‌, ವಕೀಲ ಜಿ.ಎಸ್‌. ಸುರೇಶ್‌ ಮನೆಯಲ್ಲಿ ತಿಂಡಿ, ಊಟಕ್ಕೆ ಹೋಗುತ್ತಿದ್ದರು.

ಚರ್ಚ್‌ ರಸ್ತೆಯಲ್ಲಿರುವ ಗಾಯತ್ರಿ ಹೋಟೆಲ್‌ ನಲ್ಲಿ ತಿಂಡಿ ತಿಂದು ಸೈಕಲ್‌ ಏರಿ ಕಾಲೇಜುಗಳಲ್ಲಿ ಸುತ್ತಾಡುತ್ತಿದ್ದರು. ಅನಂತಕುಮಾರ್‌ ಬಂದರೆ ನಾನು ಬಾಡಿಗೆ ಸೈಕಲ್‌ ತೆಗೆದುಕೊಂಡು ಊರಿನಲ್ಲಿದ್ದ ಕಾಲೇಜುಗಳನ್ನೆಲ್ಲಾ ಸುತ್ತಾಡಿಸಬೇಕು. ನಾನು ದಪ್ಪ ಇದ್ದ ಕಾರಣಕ್ಕೆ ನಾನೇ ಸೈಕಲ್‌ ತುಳಿಬೇಕಿತ್ತು. ಎಲ್ಲಾ ಕಾಲೇಜು ಸುತ್ತಾಡಿ, ನಂತರ ಸುರೇಶ್‌ ಮನೆಯಲ್ಲಿ ಊಟದ ನಂತರ ಸಾಯಂಕಾಲ ಆಗುತ್ತಿದ್ದಂತೆ ಜಯದೇವ ಸರ್ಕಲ್‌ ಇಲ್ಲ ಅಂದರೆ ರಾಂ ಆ್ಯಂಡ್‌ ಕೋ ಸರ್ಕಲ್‌ನಲ್ಲಿ ಖಾರ-ಮಂಡಕ್ಕಿ ತಿನ್ನುತ್ತಾ ಸಂಘಟನೆಯ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಅವರಂತಹ ಸಂಘಟನಾ ಚತುರನಿಗೆ ಸಾಥ್‌ ನೀಡಿದ್ದೇ…ಎನ್ನುವುದೇ ಈ ಕ್ಷಣಕ್ಕೂ ರೋಮಾಂಚನ ಉಂಟು ಮಾಡುತ್ತದೆ ಎಂದು ನಗರಸಭೆ ಮಾಜಿ ಸದಸ್ಯ ಪಿ.ಸಿ. ಮಹಾಬಲೇಶ್ವರ್‌ ನೆನೆಪಿಸಿಕೊಳ್ಳುತ್ತಾರೆ.

ರಾಜ್ಯ ಮಟ್ಟದ ನಾಯಕರಾಗಿದ್ದರೂ ಯಾವುದೇ ಹಮ್ಮು-ಬಿಮ್ಮು ಇಲ್ಲವೇ ಇಲ್ಲ. ಎಷ್ಟೋ ಸಾರಿ ಫುಟ್‌ಪಾತ್‌ನಲ್ಲೇ ಕುಳಿತು ಸಂಘಟನೆಯ ಬಗ್ಗೆ ಗಂಟೆಗಟ್ಟಲೆ ಮಾತನಾಡಿದ್ದುಂಟು. ರಾತ್ರಿ 1, 2 ಗಂಟೆಯಾದರೂ ಸರಿಯೇ. ಸಂಘಟನೆ, ನಾಯಕರು, ಅವರ ಜೀವನದ ಬಗ್ಗೆ ಮಾತನಾಡುತ್ತಿದ್ದರು. ಬಿಜೆಪಿಯ ಹಿರಿಯ ಮುಖಂಡ ಜಗನ್ನಾಥ ಜೋಷಿ ಬಗ್ಗೆ ಅಧಿಕೃತವಾಗಿ ಮಾತನಾಡುವ ಶಕ್ತಿ ಅನಂತಕುಮಾರ್‌ ಅವರಿಗಿತ್ತು ಎಂದು ಮಹಾಬಲೇಶ್ವರ್‌ ಸ್ಮರಿಸುತ್ತಾರೆ. 

ಎಬಿವಿಪಿ ನಂತರ ಬಿಜೆಪಿಗೆ ಬಂದರು. ರಾಜ್ಯ ಅಧ್ಯಕ್ಷ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, 6 ಬಾರಿ ಸಂಸದ, ಕೇಂದ್ರದಲ್ಲಿ ಸಚಿವರಾದರೂ ಹಿಂದಿನದ್ದನ್ನು ಮರೆತಿರಲಿಲ್ಲ. ಆಗ ಎಷ್ಟು ಅಪ್ಯಾಯತೆಯಿಂದ ಮಾತನಾಡಿಸುತ್ತಿದ್ದರೋ ಯಾವಾಗ ಸಿಕ್ಕಾಗಲೂ ಅದೇ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು. ಅವರ ನೆನಪಿನ ಶಕ್ತಿ ಅಗಾಧ. ನಮ್ಮನ್ನು ಮಾತ್ರವಲ್ಲ, ನಮ್ಮ ಮನೆಯ ಪ್ರತಿಯೊಬ್ಬರ ಹೆಸರು ಹಿಡಿದು ಮಾತನಾಡಿಸುತ್ತಿದ್ದರು. ಏನು ಮಾಡುತ್ತಿದ್ದಾರೆ ಎಂದೆಲ್ಲ ಕೇಳುತ್ತಿದ್ದರು ಎಂದು ನೆನೆಪಿಸಿಕೊಂಡರು.

ಮಂಡಕ್ಕಿ-ಮಿರ್ಚಿ: ಅನಂತ್‌ಕುಮಾರ್‌ಗೆ ದಾವಣಗೆರೆ ಮಂಡಕ್ಕಿ, ಮೆಣಸಿನಕಾಯಿ ಎಂದರೆ ಬಹಳ ಪ್ರಿಯ. ಎಬಿವಿಪಿ ಸಂಘಟನೆ ನಿಮಿತ್ತ ಸುತ್ತಾಟದ ನಂತರ ಸಂಜೆ ಆಗುತ್ತಿದ್ದಂತೆ ಮಂಡಕ್ಕಿ, ಮೆಣಸಿನಕಾಯಿ ತಿನ್ನಲೇಬೇಕು. ಮಂಡಕ್ಕಿ, ಮೆಣಸಿನಕಾಯಿ ತಿನ್ನುತ್ತಾ ಸಂಘಟನೆಯ ಬಗ್ಗೆ ಮಾತನಾಡುತ್ತಿದ್ದರು ಎಂದು ಅವರ ಆತ್ಮೀಯ, ವಕೀಲ ಜಿ.ಎಸ್‌. ಸುರೇಶ್‌ ಸ್ಮರಿಸುತ್ತಾರೆ. 

ಅನಂತಕುಮಾರ್‌ ರಾಜ್ಯ ಕಾರ್ಯದರ್ಶಿಯಾಗಿದ್ದರು. ನಾನಾಗ ದಾವಣಗೆರೆ ನಗರ ಕಾರ್ಯದರ್ಶಿಯಾಗಿದ್ದೆ. ದಾವಣಗೆರೆಯಲ್ಲಿ ಎಬಿವಿಪಿ ಸಮಾವೇಶವನ್ನೂ ನಡೆಸಿದ್ದರು. ಅವರು ಯಾವಾಗಲೂ ಸಂಘಟನೆಯ ಬಗ್ಗೆಯೇ ಚರ್ಚಿಸುತ್ತಿದ್ದರು. 1988ರಲ್ಲಿ ಬಿಜೆಪಿ ಸಂಘಟನೆಯಲ್ಲಿ ತೊಡಗಿಸಿಕೊಂಡರು. 1996ರಿಂದ ನಿರಂತರವಾಗಿ ಸಂಸದರಾಗಿ ಆಯ್ಕೆ ಆದರು. 8 ವರ್ಷದಲ್ಲೇ ಪಕ್ಷದಲ್ಲೇ ಅವರು ಬೆಳೆದ ವೇಗ… ನಿಜಕ್ಕೂ ಆಶ್ಚರ್ಯ ಎಂದು ಅವರು ಹೇಳುತ್ತಾರೆ. 

ಸಮಕಾಲೀನರಾಗಿದ್ದರಿಂದ ಸಾಕಷ್ಟು ಸಲುಗೆಯಿಂದಲೇ ಮಾತನಾಡುತ್ತಿದ್ದರು. ಈಚೆಗೆ 6-7 ತಿಂಗಳ ಹಿಂದೆ ಬೆಂಗಳೂರಿನ ದೇವಸ್ಥಾನವೊಂದಕ್ಕೆ ಅನಂತಕುಮಾರ್‌ ಹೋಗಿದ್ದಾಗ ಅಲ್ಲಿ ನನ್ನ ತಂಗಿ ನೋಡಿದ ಅವರು, ಅಷ್ಟೊಂದು ಜನರ ಮಧ್ಯೆಯೂ ಆಕೆಯನ್ನು ಗುರುತಿಸಿ, ಮಾತನಾಡಿಸಿ, ಜೊತೆಗೆ ಇದ್ದವರಿಗೆ ನನ್ನ ತಂಗಿಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ.

ಒಂದು ವಿಚಾರ ಎಂದರೆ ಅವರು ನನ್ನ ತಂಗಿಯನ್ನು ನೋಡಿ 15-16 ವರ್ಷ ಆಗಿರಬಹುದು. ಆದರೂ, ನನ್ನ ತಂಗಿಯನ್ನು ಗುರುತಿಸಿ, ಮಾತನಾಡಿಸಿದ್ದಾರೆ ಎನ್ನುವುದು ಅವರ ನೆನಪಿನ ಶಕ್ತಿಗೆ ಸಾಕ್ಷಿ. ಅಂತಹ ಮಹಾನ್‌ ನಾಯಕನ ಜೊತೆಗೆ ಕೆಲಸ
ಮಾಡಿದ್ದು ಮರೆಯಲಾಗದ್ದು ಎಂದು ಸುರೇಶ್‌ ನೆನೆಪಿಸಿಕೊಳ್ಳುತ್ತಾರೆ

ಹಮ್ಮುಬಿಮ್ಮಿಲ್ಲದ ವ್ಯಕ್ತಿ….
2017ರ ನ. 28ರಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಸಹೋದರರ ಮಗಳ ಮದುವೆ ಆರತಕ್ಷತೆಗೆ ಅನಂತಕುಮಾರ್‌ ಬಂದಿದ್ದರು. ಆರತಕ್ಷತೆ ಮುಗಿಸಿಕೊಂಡು ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ನಲ್ಲಿ ಬೆಂಗಳೂರಿಗೆ ಹೊರಟಿದ್ದರು. ರೈಲ್ವೆ ಸ್ಟೇಷನ್‌ಗೆ ಅವರ ಜೊತೆಗೆ ಹೋಗಿದ್ದೆ. ರೈಲು ಬರುವುದು ಒಂದೂವರೆ ಗಂಟೆ ತಡವಾಯಿತು. ವೇಟಿಂಗ್‌ ರೂಂನಲ್ಲಿ ನನ್ನೊಂದಿಗೆ ಒಂದೂವರೆ ಗಂಟೆ ಮಾತನಾಡಿದ್ದರು. ಕೇಂದ್ರದ ಸಚಿವರಾಗಿದ್ದವರು ನನ್ನಂತ ಸಾಮಾನ್ಯ ಕಾರ್ಯಕರ್ತನೊಂದಿಗೆ ಅಷ್ಟು ಹೊತ್ತು ಯಾವುದೇ ಹಮ್ಮುಬಿಮ್ಮು ಇಲ್ಲದೆ ಮುಕ್ತವಾಗಿ ಮಾತನಾಡಿದ್ದರು. ಈಚೆಗೆ ಬೆಂಗಳೂರಿನ ಮನೆಗೆ ಹೋಗಿದ್ದಾಗ, ಯಶವಂತ್‌ ನೀನು
ಗೆಲ್ಲಬೇಕಿತ್ತು… ಎಂದಿದ್ದರು. ಒಳ್ಳೆಯ ವ್ಯಕ್ತಿ ಅನಂತ್‌ಕುಮಾರ್‌.
 ಯಶವಂತರಾವ್‌ ಜಾಧವ್‌, ಬಿಜೆಪಿ ಜಿಲ್ಲಾ ಅಧ್ಯಕ

ಆಡಳಿತ ಮಾರ್ಗದರ್ಶಕ ಆಡಳಿತ ಮತ್ತು ಪಕ್ಷ ಸಂಘಟನೆ ಎರಡರಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿ ಪರಿಪೂರ್ಣತೆ ಮತ್ತು ಸೃಜನಶೀಲತೆಯ ಸಂಕೇತವಾಗಿದ್ದ ಕೇಂದ್ರ ಸಚಿವ ಅನಂತಕುಮಾರ್‌ರವರ ಅಗಲಿಕೆ ನಿಜಕ್ಕೂ ರಾಷ್ಟ್ರ, ರಾಜ್ಯದ ಜೊತೆಗೆ ಭಾರತೀಯ ಜನತಾ ಪಾರ್ಟಿಗೂ ಕೂಡ ತುಂಬಲಾರದ ನಷ್ಟ. ನಿಜಕ್ಕೂ ನನಗೆ ಸಹೋದರರಂತಿದ್ದ ಅನಂತಕುಮಾರ್‌ ಆಡಳಿತದ ವಿಷಯದಲ್ಲಿ ಮಾರ್ಗದರ್ಶನ ನೀಡುತ್ತಿದ್ದರು. ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಅವರು ದೆಹಲಿಮಟ್ಟದಲ್ಲಿ ಕರ್ನಾಟಕದ ಸಂಸದರಾಗಿದ್ದ ನಮ್ಮೆಲ್ಲರಿಗೂ ದಾರಿದೀಪವಾಗಿದ್ದರು.

ಜನಸಂಘದ ಕಾಲದಿಂದಲೂ ಯಡಿಯೂರಪ್ಪ ಮತ್ತು ಅನಂತಕುಮಾರ್‌ ರಾಜ್ಯದ ಅನೇಕ ಕಡೆ ಸೈಕಲ್‌ ಮೇಲೆ ಪ್ರವಾಸ ಮಾಡಿ ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಇಬ್ಬರೂ ಬಿಜೆಪಿ ಎರಡು ಕಣ್ಣುಗಳಿದ್ದಂತಿದ್ದರು. ಹಾಸ್ಯ ಸ್ವಭಾವ ಮೈಗೂಡಿಸಿಕೊಂಡಿದ್ದ ಅವರು ಎಂತಹ ಕ್ಲಿಷ್ಟಕರ ಸನ್ನಿವೇಶಗಳನ್ನು ಅತ್ಯಂತ ಚಾಣಾಕ್ಷತೆಯಿಂದ ನಿಭಾಯಿಸುತ್ತಿದ್ದರು. ನೀಮ್‌ ಕೋಟೆಡ್‌ ಯೂರಿಯಾ ಉತ್ಪಾದನೆ, ಕಡಿಮೆ ಬೆಲೆಯಲ್ಲಿ ಹೃದಯದ ಸ್ಟಂಟ್‌, ಗುಣಮಟ್ಟದ ಜನೌಷಧಿ ಪೂರೈಕೆಯಂತಹ ಕಾರ್ಯಕ್ರಮ ಅವರ ಜನಪರ ಕಳಕಳಿಗೆ ಸಾಕ್ಷಿ. ರಾಜ್ಯಕ್ಕೂ ಮತ್ತು ಕೇಂದ್ರಕ್ಕೂ ಸೇತುವೆಯಂತಿದ್ದ ಅವರ ಅಕಾಲಿಕ ಅಗಲಿಕೆ ನಿಜಕ್ಕೂ ಭಾರತೀಯ ಜನತಾ ಪಾರ್ಟಿಯಲ್ಲಿ ಒಂದು ನಿರ್ವಾತವನ್ನೇ ಸೃಷ್ಟಿ ಮಾಡಿದೆ. 
 ಜಿ.ಎಂ. ಸಿದ್ದೇಶ್ವರ್‌, ಸಂಸದರು. 

ಒಳ್ಳೆಯ ನಾಯಕ…
ಅನಂತಕುಮಾರ್‌ ಒಳ್ಳೆಯ ನಾಯಕರಾಗಿದ್ದರು. ಕಳೆದ 30 ವರ್ಷದಿಂದ ಪರಿಚಯವಿದ್ದ ಅವರು ಎಬಿವಿಪಿ ಕಾರ್ಯದರ್ಶಿ, ಯುವ ಮೋರ್ಚಾ, ಬಿಜೆಪಿ ಅಧ್ಯಕ್ಷರಾಗಿ, ಕೇಂದ್ರ ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದರು. 59 ವರ್ಷ ನಿಜಕ್ಕೂ ಸಾಯುವ
ವಯಸ್ಸಲ್ಲ . ಆದರೂ, ನಮ್ಮ ಕೈಯಲ್ಲಿ ಏನೂ ಇಲ್ಲ.ಎಲ್ಲವೂ ಅನಿವಾರ್ಯ. 
 ಎಸ್‌.ಎ. ರವೀಂದ್ರನಾಥ್‌, ದಾವಣಗೆರೆ ಉತ್ತರ ವಿಧಾನಸಭಾ ಶಾಸಕರು.

ತುಂಬಾ ನೋವಿನ ವಿಚಾರ…
ಅನಂತಕುಮಾರ್‌ ಅವರು ಬಿಜೆಪಿಯನ್ನ ಕಟ್ಟಿ ಬೆಳೆಸಿದಂತಹ ಮಹಾನ್‌ ನಾಯಕರು. ಪಕ್ಷದ ಸಂಘಟನೆ, ಆಡಳಿತದಲ್ಲಿ ಅವರ ಕೆಲಸ ಮರೆಯಲಿಕ್ಕೆ ಆಗುವುದೇ ಇಲ್ಲ. ಚಿಕ್ಕ ವಯಸ್ಸಿನಲ್ಲೇ ನಮ್ಮನ್ನ ಅಗಲಿರುವುದು ತುಂಬಾ ನೋವಿನ ವಿಚಾರ. 
 ಪ್ರೊ| ಎನ್‌. ಲಿಂಗಣ್ಣ, ಮಾಯಕೊಂಡ ಶಾಸಕರು.

 ಬ್ರಾಹ್ಮಣ ಸಮಾಜ ಸಂತಾಪ
ದಾವಣಗೆರೆ: ಕೇಂದ್ರ ಸಚಿವ ಅನಂತಕುಮಾರ್‌ ನಿಧನಕ್ಕೆ ಸೋಮವಾರ ಜಿಲ್ಲಾ ಬ್ರಾಹ್ಮಣ ಸಮಾಜ ಸೇವಾ ಸಂಘ ಸಂತಾಪ ಸೂಚಿಸಿದೆ. ನಗರದ ಬ್ರಾಹ್ಮಣ ಸೇವಾ ಸಂಘದ ಕಾರ್ಯಾಲಯದಲ್ಲಿ ಸಮಾಜದ ಅಧ್ಯಕ್ಷ ಡಾ| ಬಿ.ಟಿ. ಅಚ್ಯುತ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಕಾರ್ಯಕಾರಣಿ ಸದಸ್ಯರು, ಹಿರಿಯ ಸಮಾಜ ಬಾಂಧವರು ಸೇರಿ ಕೇಂದ್ರ ಸಚಿವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು ಎಂದು ಸಂಘದ ಕಾರ್ಯದರ್ಶಿ ಎಸ್‌.ಪಿ. ಸತ್ಯನಾರಾಯಣರಾವ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಾವಣಗೆರೆ: ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರ 75ನೇ ಜನ್ಮದಿನದ ಅಂಗವಾಗಿ ಕಳೆದ ಫೆ. 27ರಂದು ನಗರದ ಸರ್ಕಾರಿ ಹೈಸ್ಕೂಲ್‌ ಮೈದಾನದಲ್ಲಿ ಏರ್ಪಡಿಸಿದ್ದ ಅನ್ನದಾತರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾಗವಹಿಸಿದ್ದೇ ಕೇಂದ್ರ ಸಚಿವರಾಗಿದ್ದ ಎಚ್‌.ಎನ್‌. ಅನಂತ್‌ಕುಮಾರ್‌ ದಾವಣಗೆರೆಯ ಕೊನೆಯ ಭೇಟಿ. 

ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಕಾರ್ಯದರ್ಶಿಯಾಗಿದ್ದ ಅನಂತಕುಮಾರ್‌, 1982ರಿಂದಲೂ ದಾವಣಗೆರೆ ಒಡನಾಟ ಹೊಂದಿದ್ದವರು. ಹಳೆ ಮುನ್ಸಿಪಲ್‌ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊಟ್ಟ ಮೊದಲ ಬಾರಿಗೆ ಅನಂತಕುಮಾರ್‌ ಮಾತನಾಡಿದ್ದರು. ಅವರ ದಾವಣಗೆರೆಯ ಕೊನೆಯ ಭೇಟಿ ವೇಳೆ ಸಾರ್ವಜನಿಕ ಸಮಾರಂಭದಲ್ಲಿ ಅವರಿಗೆ ಮಾತನಾಡಲಿಕ್ಕೆ ಅವಕಾಶ ಸಿಗಲಿಲ್ಲ.

ಎಬಿವಿಪಿ ಕಾರ್ಯದರ್ಶಿ, ಬಿಜೆಪಿ ಯುವ ಮೋರ್ಚಾ, ಬಿಜೆಪಿ ರಾಜ್ಯ ಅಧ್ಯಕ್ಷ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಯಾಗಿ, ಕೇಂದ್ರದ ಸಚಿವರಾಗಿದ್ದ ಅನಂತಕುಮಾರ್‌ ದಾವಣಗೆರೆಗೆ ಸಾಕಷ್ಟು ಬಾರಿ ಆಗಮಿಸಿದ್ದಾರೆ. ತಮ್ಮ ಹಾಸ್ಯ ಮಿಶ್ರಿತ ಮೊನಚು ಮಾತುಗಳಿಂದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.
 
ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ 2 ವರ್ಷ ಪೂರೈಸಿದ್ದರ ಹಿನ್ನೆಲೆಯಲ್ಲಿ ದಾವಣಗೆರೆಯ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ನಡೆದ ವಿಕಾಸಪರ್ವ… ಸಮಾವೇಶ (2016ರ ಮೇ. 29) ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಭಾಗವಹಿಸಿದ್ದ ಅವರು ಅತ್ಯದ್ಭುತವಾಗಿ ಮಾತನಾಡಿದ್ದರು.

ಲೋಕಸಭಾ ಚುನಾವಣೆ 2014ರ ಮುನ್ನ ಫೆ.18 ರಂದು ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲೇ ನಡೆದ ಭಾರತ ಗೆಲ್ಲಿಸಿ… ಕಾರ್ಯಕ್ರಮದಲ್ಲಿ ಸಹ ಅನಂತಕುಮಾರ್‌ ಮಾತನಾಡಿದ್ದರು. ಹಲವಾರು ಬಾರಿ ದಾವಣಗೆರೆಯಲ್ಲಿ ತಮ್ಮ ಅತ್ಯದ್ಭುತ ಭಾಷಣ ಮಾಡಿದ್ದ, ಎಬಿವಿಪಿ, ಬಿಜೆಪಿ ಕಟ್ಟಿ ಬೆಳೆಸಿದ್ದ ಅನಂತಕುಮಾರ್‌ ದೇವನಗರಿಗೆ ಭೇಟಿ ನೀಡಿದ್ದಷ್ಟೇ ಇನ್ನು ನೆನಪು. 

ರಾ.ರವಿಬಾಬು

ಟಾಪ್ ನ್ಯೂಸ್

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ

ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ

ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮದ್ ಅಮಾನತು

ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮ್ಮದ್ ಅಮಾನತು

1-dvg

Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ

Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ

Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ

Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ

Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.