CONNECT WITH US  

ಅಶ್ಲೀಲ ಸಂಭಾಷಣೆ ನನ್ನದಲ್ಲ : ಲಮಾಣಿ

ಲಕ್ಷ್ಮೇಶ್ವರ: ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿದರು.

ಲಕ್ಷ್ಮೇಶ್ವರ: ಅಶ್ಲೀಲ ಸಂಭಾಷಣೆಯು ಸಾಮಾಜಿಕ ಜಾಲತಾಣದಲ್ಲಿ ಕಳೆದ 2-3 ದಿನಗಳಿಂದ ಹರಿದಾಡುತ್ತಿದ್ದು, ಇದಕ್ಕೂ ತಮಗೂ ಸಂಬಂಧ ಇಲ್ಲ ಎಂದು ಮಾಜಿ ಶಾಸಕ ರಾಮಣ್ಣ ಲಮಾಣಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ್ದು ಸ್ಪಷ್ಟನೆ ನೀಡಿದ್ದಾರೆ.

ಅದರಲ್ಲಿಯ ಧ್ವನಿ ನನ್ನದಲ್ಲ. ಈ ಕುರಿತಂತೆ ನಾನು ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸುತ್ತೇನೆ. ನನ್ನ ಮೇಲೆ ಬಂದಿರುವ ಈ ಆಪಾದನೆ ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕರು ತಪ್ಪು ತಿಳಿವಳಿಕೆ, ಗೊಂದಲಕ್ಕೊಳಗಾಗಬಾರದು ಎಂದು ಹೇಳಿದ್ದಾರೆ.

ಬಿಜೆಪಿ ತಾಲೂಕು ಅಧ್ಯಕ್ಷವಿರುಪಾ ಕ್ಪಪ್ಪ ಅಣ್ಣಿಗೇರಿ ಮಾತನಾಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂಬಣ್ಣ ಬಾಳಿಕಾಯಿ, ಹಿರಿಯ ಮುಖಂಡರಾದ ಎಂ.ಎಂ.ಅಗಡಿ, ಡಾ.ವೈ.ಎಫ್‌. ಹಂಜಿ, ಅಶೋಕ ಪಲ್ಲೇದ, ಡಿ.ಬಿ. ಬಳಿಗಾರ, ಡಿ.ವೈ. ಹುನಗುಂದ, ಜಾನು ಲಮಾಣಿ, ಸೋಮು ಉಪನಾಳ ಇನ್ನಿತರರು ಇದ್ದರು. ಮಾಜಿ ಶಾಸಕ ರಾಮಣ್ಣ ಲಮಾಣಿ ಅವರು ಮಹಿಳೆಯೊಂದಿಗೆ ನಡೆಸಿದ್ದಾರೆನ್ನಲಾದ ಅಶ್ಲೀಲ ಸಂಭಾಷಣೆಯು ಸಾಮಾಜಿಕ ಜಾಲತಾಣದಲ್ಲಿ ಕಳೆದ 2-3 ದಿನಗಳಿಂದ ಹರಿದಾಡುತ್ತಿರುವ ಕುರಿತು ಸ್ಪಷ್ಟಣೆ ನೀಡಿದ್ದಾರೆ .

Trending videos

Back to Top