CONNECT WITH US  

ವೃದ್ಧನಿಗೆ ಆಸರೆಯಾದ ಮೈತ್ರಿ

ಹುಬ್ಬಳ್ಳಿ: ಅಮೃತ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದವರು ವೃದ್ಧನಿಗೆ ಮೈತ್ರಿ ವೃದ್ಧಾಶ್ರಮದಲ್ಲಿ ಆಶ್ರಯ ಕಲ್ಪಿಸಿದರು.

ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ರಾಧಿಕಾ ಅಪಾರ್ಟ್‌ಮೆಂಟ್‌ ಗೆ ಬಂದಿದ್ದ ನಿರ್ಗತಿಕ ನಿರಾಶ್ರಿತ ವೃದ್ಧರೊಬ್ಬರಿಗೆ ಉಪನಗರ ಠಾಣೆಯ ಅಮೃತ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವು ವೀರಾಪುರ ಓಣಿಯ ವಿಶ್ವಧರ್ಮ ಮಹಿಳಾ ಮತ್ತು ಮಕ್ಕಳ ಶಿಕ್ಷಣ ಸೇವಾಶ್ರಮ ಸಮಿತಿಯ ಮೈತ್ರಿ ವೃದ್ಧಾಶ್ರಮದಲ್ಲಿ ಆಶ್ರಯ ಕಲ್ಪಿಸಿಕೊಟ್ಟಿದೆ.

ಉಡುಪಿ ತಾಲೂಕು ಶಿರಿಹರ ಕಾಳುರಪಾಲ್ಸ್‌ನ ಸದಾಶಿವ ಶೆಟ್ಟಿ(70) ಎಂಬುವರಿಗೆ ಆಶ್ರಯ ಕಲ್ಪಿಸಲಾಗಿದೆ. ಇವರು ಮಂಗಳವಾರ ಮಧ್ಯಾಹ್ನ ರಾಧಿಕಾ ಅಪಾರ್ಟ್‌ಮೆಂಟ್‌ಗೆ ಬಂದು ಏನೂ ಮಾತನಾಡದೆ ಇದ್ದಾಗ, ನಿವಾಸಿಗಳು ಉಪನಗರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದರು. ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಯೋಜನಾ ಸಂಯೋಜಕ ಹನುಮಂತಪ್ಪ ಬಣಗಾರ ಹಾಗೂ ಎಎಸ್‌ಐ ಎಂ.ವಿ. ಕಲ್ಲಗುಂಡಿ, ಎ.ಡಿ. ಸುಂಕದ, ಫಕ್ಕಿರೇಶ ಗಬ್ಬೂರಗುಟ್ಟಿ ಸ್ಥಳಕ್ಕೆ ತೆರಳಿ ವಿಚಾರಿಸಿದರು. ಆಗ ವೃದ್ಧರು ತಮ್ಮ ಹೆಸರು, ವಿಳಾಸ ಹಾಗೂ ಮಕ್ಕಳ ಬಗ್ಗೆ ತಿಳಿಸಿದ್ದಾರೆ. ವಿವಸ್ತ್ರವಾಗಿದ್ದ ಅವರಿಗೆ ಬಟ್ಟೆ ಕೊಡಿಸಿ ನಂತರ ಸೇವಾಶ್ರಮ ಸಂಸ್ಥೆಯ ಅಧ್ಯಕ್ಷ ಐ.ಕೆ. ಲಕ್ಕುಂಡಿ ಮಾರ್ಗದರ್ಶನದಲ್ಲಿ ಮೈತ್ರಿ ವೃದ್ಧಾಶ್ರಮದಲ್ಲಿ ಆಶ್ರಯ ಕಲ್ಪಿಸಲಾಯಿತು.

Trending videos

Back to Top