CONNECT WITH US  
echo "sudina logo";

ಧಾರವಾಡ : ಟಿಪ್ಪರ್‌ ಹರಿದು ಮಹಿಳೆ ದುರ್ಮರಣ, ನಾಲ್ವರಿಗೆ ಗಂಭೀರ ಗಾಯ 

ಧಾರವಾಡ : ಇಲ್ಲಿನ ಅಮೀನ ಬಾವಿ ಬಳಿ ರಸ್ತೆ ಬದಿಯಲ್ಲಿ  ನಿಂತಿದ್ದವರ ಮೇಲೆ ಟಿಪ್ಪರ್‌ ಹರಿದಿದ್ದು  ಮಹಿಳೆ ದಾರುಣವಾಗಿ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡ ಅವಘಡ ಗುರುವಾರ ಬೆಳಗ್ಗೆ ಸಂಭವಿಸಿದೆ. 

ಟಿಪ್ಪರ್‌ ಚಾಲಕ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎನ್ನಲಾಗಿದ್ದು ಘಟನೆಯ ಬಳಿಕ ಟಿಪ್ಪರನ್ನು ಸ್ಥಳದಲ್ಲೇ ಬಿಟ್ಟು  ಪರಾರಿಯಾಗಿದ್ದಾನೆ. 

ಮೂವರು ಪುರುಷರು ಮತ್ತು ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಧಾರವಾಡದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಪೈಕಿ ಓರ್ವ ಮಹಿಳೆ ಚಿಕಿತ್ಸೆ ಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. 

ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Trending videos

Back to Top