CONNECT WITH US  

ಧಾರವಾಡ :ಡಿವೈಎಸ್‌ಪಿ  ಶ್ರವಣ್‌  ಗಾಂವ್ಕರ್‌ ಹೃದಯಾಘಾತದಿಂದ ನಿಧನ 

ಧಾರವಾಡ: ಜಿಲ್ಲಾ ಮೀಸಲು ಪೊಲೀಸ್‌ ಪಡೆಯ ಡಿವೈಎಸ್‌ಪಿ ಶ್ರವಣ್‌ ಗಾಂವ್ಕರ್‌ ಅವರು ಮಂಗಳವಾರ ಬೆಳಗಿನ ಜಾವ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ 42 ವರ್ಷ ಪ್ರಾಯವಾಗಿತ್ತು. 

ಧಾರವಾಡದ ರಜತಗಿರಿ ಬಡಾವಣೆಯ ನಿವಾಸದಲ್ಲಿದ್ದ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೆ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯದಲ್ಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. 

ಗಾಂವ್ಕರ್‌ ಅವರಿಗೆ ಇಬ್ಬರು ಪುಟ್ಟ ಮಕ್ಕಳಿದ್ದು, ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ. 

ಪೊಲೀಸ್‌ ಅಧಿಕಾರಿಗಳು, ಸಹುದ್ಯೋಗಿಗಳು ನೆಚ್ಚಿನ ಅಧಿಕಾರಿಯ ನಿಧನಕ್ಕೆ ತೀವ್ರ ಕಂಬನಿ ಮಿಡಿದಿದ್ದಾರೆ. 

Trending videos

Back to Top