CONNECT WITH US  

ಶರಣರ ವಚನ ಕಟ್ಟುಗಳ ಭವ್ಯ ಮೆರವಣಿಗೆ 

ರಾಜ್ಯದಲ್ಲಿ ಮೊದಲ ಬಾರಿ ವಚನ ಕಟ್ಟು ಮೆರವಣಿಗೆ, ಪ್ರಸಾದ ನಿಲಯ ಶತಮಾನೋತ್ಸವ ನಿಮಿತ್ತ ಕಾರ್ಯಕ್ರಮ

ಧಾರವಾಡ: ನಗರದ ಕಲಾಭವನದಿಂದ ವಚನ ಕಟ್ಟುಗಳ ಭವ್ಯ ಮೆರವಣಿಗೆಗೆ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು.

ಧಾರವಾಡ: ಮುರುಘಾ ಮಠದ ಮುರುಘ ರಾಜೇಂದ್ರ ಪ್ರಸಾದ ನಿಲಯ ಶತಮಾನೋತ್ಸವ ಪ್ರಯುಕ್ತ ಬಸವಾದಿ ಶರಣರ ವಚನ ಕಟ್ಟುಗಳ ಭವ್ಯ ಮೆರವಣಿಗೆ ನಗರದ ಕಲಾಭವನದಿಂದ ಮುರುಘಾ ಮಠದವರೆಗೆ ಶುಕ್ರವಾರ ಜರುಗಿತು.

ಸಹಸ್ರಾರು ವಚನಗಳ ಕಟ್ಟುಗಳನ್ನು ಹೊತ್ತು ಬಸವಾದಿ ಶರಣರ ಅನುಯಾಯಿಗಳು, ವಿವಿಧ ಮಠಾಧೀಶರು, ಮಹಿಳೆಯರು, ಶ್ರೀಮಠದ ವಿದ್ಯಾರ್ಥಿಗಳು ನಗರದ ರಸ್ತೆಗಳಲ್ಲಿ ಹೆಜ್ಜೆ ಹಾಕಿದರು. ಕಲಾಭವನದಿಂದ ಮಹಾರಾಣಾ ಪ್ರತಾಪ ಸಿಂಹ ವೃತ್ತ, ಟಿಪ್ಪು ಸುಲ್ತಾನ್‌ ವೃತ್ತ ಹಾಗೂ ಶಿವಾಜಿ ವೃತ್ತದ ಮೂಲಕ ಮುರುಘಾ ಮಠಕ್ಕೆ ಮೆರವಣಿಗೆ ಸಾಗಿತು. ಆನೆ ಹೊತ್ತ ಅಂಬಾರಿ ಒಳಗೆ ಲಿಂಗೈಕ್ಯ ಮೃತ್ಯುಂಜಯ ಸ್ವಾಮಿಗಳ ಭಾವಚಿತ್ರವಿರಿಸಿ ಮೆರವಣಿಗೆ ಮಾಡಲಾಯಿತು. ಜಾನಪದ ಕಲಾತಂಡಗಳು ಮೆರವಣಿಗೆಗೆ ರಂಗು ತುಂಬಿದವು. ನಗರ ಮಾತ್ರವಲ್ಲದೆ ಗ್ರಾಮೀಣ ಪ್ರದೇಶದಿಂದಲೂ ಜನರು ಪಾಲ್ಗೊಂಡಿದ್ದರು.

ಮನುಕುಲಕ್ಕೆ ವಚನಗಳೇ ದಾರಿ: ಮೆರವಣಿಗೆಗೆ ಚಾಲನೆ ನೀಡಿದ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಸಹಸ್ರಾರು ಸಂಖ್ಯೆಯಲ್ಲಿ ಬಸವಾದಿ ಶರಣರ ಅನುಯಾಯಿಗಳು ವಚನಗಳನ್ನು ಹೊತ್ತು ಖುಷಿಯಿಂದ ಕುಣಿದಾಡಿದ್ದಾರೆ. ವಚನಗಳು ಮನುಕುಲಕ್ಕೆ ದಾರಿ ತೋರಿದ ಶ್ರೇಷ್ಠ ಬೆಳಕು. 12ನೇ ಶತಮಾನದಿಂದ ನೂರಾರು ಬಸವಾದಿ ಶರಣರು ಕೊಡುಗೆಯಾಗಿ ಕೊಟ್ಟ ವಚನಗಳನ್ನು ರಕ್ಷಿಸಿಕೊಂಡು ಬಂದಿದ್ದು ನಮ್ಮೆಲ್ಲರ ಭಾಗ್ಯ ಎಂದು ಹೇಳಿದರು.

ಶರಣರ ವಚನಗಳು ಮುಂದಿನ ಪೀಳಿಗೆಗೆ ತಲುಪಲಿ. ಅವುಗಳ ಮೌಲ್ಯ ಜನಸಾಮಾನ್ಯರಿಗೂ ತಿಳಿಯಲಿ. ವಚನಗಳ ಸಾರ ಅರಿತು ಜನ ಜೀವಿಸಲಿ ಎಂಬ ಸದುದೇªಶದಿಂದ ವಚನಗಳ ಕಟ್ಟುಗಳನ್ನು ತಲೆ ಮೇಲೆ ಹೊತ್ತು ಸಾಂಕೇತಿಕ ಮೆರವಣಿಗೆ ನಡೆಸಿದ್ದೇವೆ. ನಮ್ಮ ನಿರೀಕ್ಷೆಗೂ ಮೀರಿ ಜನ ಭಾಗವಹಿಸಿದ್ದು ಹರ್ಷ ತಂದಿದೆ ಎಂದರು. ಮಾಜಿ ಸಚಿವ ಹಾಗೂ ಮುರುಘಾ ಮಠ ಪ್ರಸಾದ ನಿಲಯದ ಅಧ್ಯಕ್ಷ ವಿನಯ ಕುಲಕರ್ಣಿ, ಮುರಗೋಡ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಮೊದಲಾದವರಿದ್ದರು.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top