CONNECT WITH US  

ಹುಬ್ಬಳ್ಳಿ: ಒಬ್ಬ ಹುಡುಗನಿಗಾಗಿ 3 ವಿದ್ಯಾರ್ಥಿನಿಯರ ನಡುರಸ್ತೆ  ಕಾಳಗ!

ಹುಬ್ಬಳ್ಳಿ : ನಗರದ ಗೋಕುಲ್‌ ರಸ್ತೆಯಲ್ಲಿ  ಮೂವರು ಇಂಜಿನಿಯರಿಂಗ್‌ ವಿದ್ಯಾರ್ಥಿನಿಯರು ವಿದ್ಯಾರ್ಥಿಯೊಬ್ಬನಿಗಾಗಿ ಪರಸ್ಪರ ಹೊಡೆದಾಡಿಕೊಂಡಿದ್ದು, ವಿಡಿಯೋ ವೈರಲ್‌ ಆಗಿದೆ. 

ವಿದ್ಯಾರ್ಥಿಯೊಬ್ಬನೊಂದಿಗೆ ಹೊಟೇಲ್‌ಗೆ ಆಗಮಿಸಿದ್ದ ವಿದ್ಯಾರ್ಥಿನಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಇನ್ನೊಬ್ಬಳು ವಿದ್ಯಾರ್ಥಿನಿ ಜಗಳ ಆರಂಭಿಸಿದ್ದು, ಹೊಡೆದಾಟಕ್ಕೆ ತಿರುಗಿದೆ. ಇಬ್ಬರ ನಡುವೆ ಹೊಡೆದಾಟ ನಡೆಯುವಾಗ ಇನ್ನೊಬ್ಬ ವಿದ್ಯಾರ್ಥಿನಿ ಬಂದು ಹೊಡೆಯಲು ಆರಂಭಿಸಿದ್ದಾಳೆ. ಮೂವರನ್ನು ನಿಯಂತ್ರಿಸುವಲ್ಲಿ ಯುವಕ ಹೈರಾಣಾಗಿ ಹೋಗಿದ್ದಾನೆ.ಜಗಳ ಜೋರಾಗುತ್ತಿದ್ದಂತೆ ಸ್ಥಳೀಯರು ಬಂದು ಬಿಡಿಸಿದ್ದಾರೆ. 

ಲವ್‌ ವಿಚಾರದಲ್ಲಿ ಮೂವರ ನಡುವೆ ಗಲಾಟೆ ನಡೆದಿದೆ ಎನ್ನಾಲಾಗಿದೆ. ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಗಲಾಟೆ ವಿಡಿಯೋ ಚಿತ್ರೀಕರಿಸಿದ್ದು ಇದೀಗ ವೈರಲ್‌ ಆಗಿದೆ. 

ವಿದ್ಯಾರ್ಥಿಗಳು ಪ್ರತಿಷ್ಠಿತ ಕಾಲೇಜೊಂದರ ಸಹಪಾಠಿಗಳು ಎಂದು ಹೇಳಲಾಗಿದೆ. 


Trending videos

Back to Top