ಪೊಲೀಸ್‌ ಬ್ಯಾರಿಕೇಡ್‌ಗಳ ಬೇಕಾಬಿಟ್ಟಿ ಬಳಕೆ!


Team Udayavani, Dec 12, 2018, 5:15 PM IST

12-december-23.gif

ಹುಬ್ಬಳ್ಳಿ: ಸುಗಮ ಸಂಚಾರ, ಸುರಕ್ಷತೆಗೆ ಬಳಕೆಯಾಗಬೇಕಾದ ಬ್ಯಾರಿಕೇಡ್‌ಗಳು ಮ್ಯಾನ್‌ ಹೋಲ್‌ಗ‌ಳಿಗೆ ಮುಚ್ಚಳಿಕೆಯಾಗಿ, ಗಟಾರ ದಾಟಲು ಸಂಕವಾಗಿ, ಕೆಲವೊಂದು ಕಡೆ ಗುಜರಿ ಸಾಮಗ್ರಿ ರೂಪದಲ್ಲಿ ರಸ್ತೆ ಪಕ್ಕದಲ್ಲಿ ಬಿದ್ದಿವೆ.

ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ, ಅತಿಗಣ್ಯರು ನಗರಕ್ಕೆ ಆಗಮಿಸಿದರೆ, ಯಾವುದಾದರೂ ಸಭೆ-ಸಮಾರಂಭಕ್ಕೆ ಹೆಚ್ಚಿನ ಜನ ಸೇರಿದರೆ, ಹಬ್ಬಗಳ ಆಚರಣೆ, ಮೆರವಣಿಗೆ ಸಂದರ್ಭದಲ್ಲಿ ಪೊಲೀಸ್‌ ಇಲಾಖೆಯಿಂದ ಬಳಕೆಯಾಗಬೇಕಾದ ಬ್ಯಾರಿಕೇಡ್‌ ಗಳು ಅನ್ಯ ಕಾರ್ಯಗಳಿಗೆ ಬಳಕೆ ಆಗುತ್ತಿವೆ. ಇತ್ತೀಚೆಗೆ ಆರಂಭವಾದ ಬಿಆರ್‌ಟಿಎಸ್‌ ಬಸ್‌ಗಳ ಸಂಚಾರಕ್ಕೆ ಕೆಲವು ನಿಲ್ದಾಣಗಳಲ್ಲಿ ದ್ವಾರದ ರೂಪದಲ್ಲಿ ಬಳಕೆ ಆಗುತ್ತಿವೆ. ಬೆಳಗಾವಿ ಜಿಲ್ಲಾ ಪೊಲೀಸ್‌ ಹೆಸರಲ್ಲಿರುವ ಬ್ಯಾರಿಕೇಡ್‌ವೊಂದು ಇಲ್ಲಿ ಬಳಕೆಯಾಗುತ್ತಿದ್ದು, ಅಲ್ಲಿಯದು ಇಲ್ಲಿಗೆ ಬಂದಿದೆಯೋ ಅಥವಾ ಇಲ್ಲಿಯದ್ದು ತಾತ್ಕಾಲಿಕವಾಗಿ ಹೋಗಿದ್ದಾಗ ಅಂಟಿಸಿದ ಸ್ಟಿಕರ್‌ ಇನ್ನು ತೆಗೆದಿಲ್ಲವೋ ಎಂಬ ಗೊಂದಲ ಮೂಡಿಸುವಂತಿದೆ.

ನಗರದಲ್ಲಿ ಕಾಮಗಾರಿ ಕೈಗೊಳ್ಳುವವರು, ರಸ್ತೆ ದುರಸ್ತಿ ಮಾಡುವವರು ಅವುಗಳನ್ನು ತಮ್ಮ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅವರು ರಸ್ತೆ ಕಾಮಗಾರಿ ಕೈಗೊಳ್ಳುವಾಗ ಗುಂಡಿ ಬಿದ್ದಿರುವ ಸುತ್ತಲೂ ಸುರಕ್ಷತಾ ಕ್ರಮಕೈಗೊಳ್ಳಲು ತಮ್ಮದೆಯಾದ ಸಲಕರಣೆ ಬಳಸಿಕೊಳ್ಳದೆ ಪೊಲೀಸ್‌ ಇಲಾಖೆಯ ಬ್ಯಾರಿಕೇಡ್‌ ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಚರಂಡಿಯ ಬಾಯಿ ತೆರೆದುಕೊಂಡಿದ್ದರೆ ಅದರ ಮುಚ್ಚಳವಾಗಿ ಬ್ಯಾರಿಕೇಡ್‌ ಗಳನ್ನೆ ಬಳಸಲಾಗುತ್ತಿದೆ. ಅಂಗಡಿಯ ಮುಂದಿನ ಗಟಾರ ದಾಟಲು ಸಂಕವಾಗಿಯೂ ಕೆಲವೆಡೆ ಬಳಕೆಯಾಗುತ್ತಿದೆ. ಇನ್ನು ರಸ್ತೆಯಲ್ಲಿ ಹಾಳಾಗಿ ಬಿದ್ದಿರುವ ಬ್ಯಾರಿಕೇಡ್‌ಗಳು ಹಳೆಯ ಕಬ್ಬಿಣದ ಸಾಮಾನುಗಳನ್ನು ಆಯ್ದುಕೊಂಡು ಹೋಗುವವರ ಆಹಾರವಾಗುತ್ತಿದೆ.

ನಗರದ ಕಿತ್ತೂರು ಚನ್ನಮ್ಮ ವೃತ್ತ, ನಿಲಿಜಿನ್‌ ರಸ್ತೆ, ಕಾಟನ್‌ ಮಾರ್ಕೆಟ್‌, ಹಳೇ ಬಸ್‌ನಿಲ್ದಾಣ ಮಾರ್ಗ, ಕಾರವಾರ ರಸ್ತೆ, ಹೊಸೂರ ವೃತ್ತ, ಭಗತಸಿಂಗ್‌ ವೃತ್ತ, ಶಿರೂರ ಪಾರ್ಕ್‌, ಬಂಕಾಪುರ ಚೌಕ್‌, ನ್ಯೂ ಇಂಗ್ಲಿಷ್‌ ವೃತ್ತ, ಇಂಡಿ ಪಂಪ್‌, ದೇಸಾಯಿ ವೃತ್ತ, ಕೇಶ್ವಾಪುರ ಸರ್ವೋದಯ ವೃತ್ತ, ಸ್ಟೇಶನ್‌ ರಸ್ತೆ, ಪಿಂಟೋ ರಸ್ತೆ, ದೇಶಪಾಂಡೆ ನಗರ, ವಿದ್ಯಾನಗರ, ಶಿರೂರ ಪಾರ್ಕ್‌ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಇಡಲಾಗಿದ್ದ ಬ್ಯಾರಿಕೇಡ್‌ಗಳನ್ನು ರಸ್ತೆ ಕಾಮಗಾರಿ ವೇಳೆ ಹಾಳು ಮಾಡಲಾಗಿದೆ. ಉರುಳು ಗಾಲಿಗಳು ಕಿತ್ತುಕೊಂಡು ಹೋಗಿವೆ. ಕೆಲವೊಂದು ಪೂರ್ಣ ಕತ್ತರಿಸಿ ಹೋಗಿದ್ದು, ಗುಜರಿ ಸಾಮಾನುಗಳನ್ನಾಗಿ ಮಾಡಿ ಬಿಸಾಕಲಾಗಿದೆ. 

ಪೊಲೀಸ್‌ ಇಲಾಖೆಗೆ ಇತ್ತೀಚೆಗೆ ಎಸ್‌ಬಿಐ ಹಾಗೂ ದಾಲ್ಮಿಯಾ ಸಿಮೆಂಟ್‌ ಕಂಪನಿಯವರು 400ಕ್ಕೂ ಅಧಿಕ ಬ್ಯಾರಿಕೇಡ್‌ಗಳನ್ನು ಕೊಡುಗೆಯಾಗಿ ನೀಡಿದ್ದರು. ಅವುಗಳಲ್ಲಿ ಕೆಲವಷ್ಟರ ತಳಪಾಯ ಹೋಗಿದ್ದು, ರಸ್ತೆಯಲ್ಲಿ ಅಂಗಾತವಾಗಿ ಇಡಲಾಗಿದೆ. ಗಟಾರಗಳ ಮೇಲೆ, ಮುಚ್ಚಲು ಹೋದ ಒಳಚರಂಡಿಗಳ ಮೇಲೆ ಇಡಲಾಗಿದೆ. ಪೊಲೀಸ್‌ ಇಲಾಖೆ ಇತ್ತ ಗಮನ ಹರಿಸುತ್ತಿಲ್ಲವೆಂಬ ಮಾತುಗಳು ಕೇಳಿಬರುತ್ತಿವೆ.

ಪಾಲಿಕೆಗಿಲ್ಲ ಸ್ವಂತ ಬ್ಯಾರಿಕೇಡ್‌
ಬೆಂಗಳೂರಿನಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಬೆಂಗಳೂರು ಮೆಟ್ರೋದವರು ತಮ್ಮದೇ ಸ್ವಂತ ಬ್ಯಾರಿಕೇಡ್‌ಗಳನ್ನು ಹೊಂದಿದ್ದಾರೆ. ತಮಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಳ್ಳುವಾಗ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಅವನ್ನು ಬಳಸಿಕೊಳ್ಳುತ್ತಾರೆ. ಆದರೆ ಹು-ಧಾ ಮಹಾನಗರ ಪಾಲಿಕೆ ಹಾಗೂ ಎಚ್‌ಡಿಬಿಆರ್‌ ಟಿಎಸ್‌ ಸ್ವಂತ ಬ್ಯಾರಿಕೇಡ್‌ ಹೊಂದಿಲ್ಲ. ಹೀಗಾಗಿ ಪಾಲಿಕೆಯಿಂದ ರಸ್ತೆ ಕಾಮಗಾರಿ ಸೇರಿದಂತೆ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳುವಾಗ ಹಾಗೂ ಕಾಮಗಾರಿ ಗುತ್ತಿಗೆ ನೀಡಿದಾಗಲು ಸಹ ಪೊಲೀಸ್‌ ಇಲಾಖೆ ಬ್ಯಾರಿಕೇಡ್‌ಗಳನ್ನು ಬಳಸುವುದು ಸಾಮಾನ್ಯವಾಗಿದೆ. ಅಲ್ಲದೆ ಎಚ್‌ಡಿಬಿಆರ್‌ಟಿಎಸ್‌ ಕಾಮಗಾರಿಯಲ್ಲೂ ಪೊಲೀಸ್‌ ಇಲಾಖೆ ಬ್ಯಾರಿಕೇಡ್‌ಗಳೇ ಬಳಕೆಯಾಗುತ್ತಿವೆ.

ನಗರದಲ್ಲಿ ರಸ್ತೆ ಸೇರಿದಂತೆ ಯಾವುದೇ ಕಾಮಗಾರಿ ಕೈಗೊಳ್ಳುವಾಗ ಸುರಕ್ಷತಾ ಕ್ರಮಕ್ಕಾಗಿ ಗುತ್ತಿಗೆದಾರರು ಹಾಗೂ ಸಂಬಂಧಿಸಿದವರು ಆಯಾ ಪ್ರದೇಶದಲ್ಲಿನ ಸ್ಥಳೀಯ ಪೊಲೀಸ್‌ ಅಧಿಕಾರಿಗಳ ಅನುಮತಿ ಪಡೆದು ಇಲಾಖೆಯ ಬ್ಯಾರಿಕೇಡ್‌ಗಳನ್ನು ಬಳಕೆ ಮಾಡಿಕೊಳ್ಳುವುದು ಸಾಮಾನ್ಯ. ಒಂದು ವೇಳೆ ಯಾರಾದರೂ ಅನುಮತಿ ಪಡೆಯದೆ ಇಲಾಖೆ ಬ್ಯಾರಿಕೇಡ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಕಂಡುಬಂದರೆ ಅಂಥವರ ಮೇಲೆ ಕ್ರಮಕೈಗೊಳ್ಳಲಾಗುವುದು. ಸಂಪೂರ್ಣ ಹಾಳಾದ ಬ್ಯಾರಿಕೇಡ್‌ ಗಳನ್ನು ನಿಷ್ಕ್ರಿಯಗೊಳಿಸಲಾಗುವುದು. ಸಣ್ಣ-ಪುಟ್ಟ ಹಾಳಾಗಿದ್ದರೆ ಅವನ್ನು ದುರಸ್ತಿಗೊಳಿಸಲಾಗುವುದು.
. ಬಿ.ಎಸ್‌. ನೇಮಗೌಡ,
ಡಿಸಿಪಿ, ಅಪರಾಧ ಮತ್ತು ಸಂಚಾರ ವಿಭಾಗ

 ಶಿವಶಂಕರ ಕಂಠಿ

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.