ಹುಬ್ಬಳ್ಳಿಗೂ ಬಂತು ಬಾಡಿಗೆ ವಾಹನ ಸೇವಾ ಸಂಸ್ಥೆ ಡ್ರೈವ್‌ಜಿ

Team Udayavani, Jan 30, 2019, 11:12 AM IST

30-january-23.jpg

ಹುಬ್ಬಳ್ಳಿ: ದ್ವಿತೀಯ ಸ್ತರದ ನಗರವಾಗಿರುವ ಹುಬ್ಬಳ್ಳಿ-ಧಾರವಾಡ ತ್ವರಿತಗತಿಯಲ್ಲಿ ಬೆಳೆಯುತ್ತಿದೆ. ಒಂದೆಡೆ ವಿಮಾನ ನಿಲ್ದಾಣಕ್ಕೆ ಬಂದು ಹೋಗುವ ವಿಮಾನಗಳ ಸಂಖ್ಯೆ ಹೆಚ್ಚುತ್ತಿದ್ದರೆ ಇನ್ನೊಂದೆಡೆ ನಗರದ ರಸ್ತೆಗಳು ಅಭಿವೃದ್ಧಿಯಾಗುತ್ತಿವೆ. ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಬಾಡಿಗೆ ವಾಹನಗಳನ್ನು ನೀಡುವ ಉದ್ಯಮದಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಗಳಿಸಿಕೊಂಡಿರುವ ಡ್ರೈವಜಿ ಇಂಡಿಯಾ ಟ್ರಾವೆಲ್ಸ್‌ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆ ಸೇವೆ ನೀಡಲು ಸಜ್ಜಾಗಿದೆ.

ಅವಳಿ ನಗರದಲ್ಲಿ ಡ್ರೈವ್‌ಜಿ ಇಂಡಿಯಾ ಟ್ರಾವೆಲ್ಸ್‌ ಪ್ರೈವೇಟ್ ಲಿಮಿಟೆಡ್‌ ಬಾಡಿಗೆ ಬೈಕ್‌ಗಳು ಹಾಗೂ ಬಾಡಿಗೆ ಕಾರುಗಳನ್ನು ಸೇವೆ ಒದಗಿಸಲಿದೆ. ಫೆ. 1ರಿಂದ ಅವಳಿ ನಗರದ ಜನರು ತಮ್ಮಿಷ್ಟದ ವಾಹನವನ್ನು ಚಾಲನೆ ಮಾಡುವ ಅವಕಾಶ ಲಭ್ಯವಾಗಲಿದೆ. ನಗರದ ಗಣೇಶಪೇಟ ವೃತ್ತ ಸಮೀಪದ ಲಕ್ಷ್ಮೀ ಬಾಲಕೃಷ್ಣ ಸ್ಕ್ವೇರ್‌ (ಹರ್ಷ ಕಾಂಪ್ಲೆಕ್ಸ್‌)ನಲ್ಲಿ ಸಂಸ್ಥೆಯ ಶಾಖಾ ಕಚೇರಿ ಆರಂಭಗೊಳ್ಳಲಿದೆ. ಈಗಾಗಲೇ 100 ಹೊಂಡಾ ಆಕ್ಟಿವಾ 5ಜಿ ಸ್ಕೂಟರ್‌ಗಳು ಬಂದಿದ್ದು, ನಗರದ ಜನರ ಬೇಡಿಕೆಗೆ ಅನುಗುಣವಾಗಿ ವಿವಿಧ ವಾಹನಗಳನ್ನು ರಸ್ತೆಗಿಳಿಸಲು ಸಂಸ್ಥೆ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ ಸಂಸ್ಥೆ ಈಗಾಗಲೇ ದೊಡ್ಡ ನಗರಗಳಲ್ಲದೇ ದೇಶದ ಪ್ರಮುಖ ದ್ವಿತೀಯ ಸ್ತರದ ನಗರಗಳಲ್ಲಿ ಸೇವೆ ಒದಗಿಸುತ್ತಿದೆ. ಬೆಂಗಳೂರು, ಮುಂಬೈ, ಪುಣೆ, ನಾಗಪುರ, ಕೊಚ್ಚಿ, ಮಂಗಳೂರು, ಮೈಸೂರು, ಹೈದರಾಬಾದ್‌ನಲ್ಲಿ ಈಗಾಗಲೇ ವಾಹನಗಳನ್ನು ಬಾಡಿಗೆ ನೀಡುವ ಉದ್ಯಮದಲ್ಲಿ ಜನಮನ್ನಣೆ ಗಳಿಸಿದೆ.

ಎಚ್-ಡಿ ಬಿಆರ್‌ಟಿಎಸ್‌ ಅನುಷ್ಠಾನದಿಂದಾಗಿ ಅವಳಿ ನಗರದ ಮಧ್ಯೆ ರಸ್ತೆ ಅಗಲೀಕರಣಗೊಂಡಿದೆ. ಅವಳಿ ನಗರದ ಮಧ್ಯೆ ಸಹಸ್ರಾರು ಜನರು ಸಂಚರಿಸುತ್ತಾರೆ. ಹಲವಾರು ಕಾರಣಗಳಿಂದಾಗಿ ತಮ್ಮ ಬೈಕ್‌ ಅಥವಾ ಕಾರು ಬಳಕೆ ಮಾಡಲು ಸಾಧ್ಯವಾಗದವರು ಸಾರ್ವಜನಿಕ ಸಾರಿಗೆ ಅವಲಂಬಿಸುವುದು ಅನಿವಾರ್ಯವಾಗುತ್ತದೆ. ಬಸ್‌ಗಳಿಗೆ ಕಾಯುತ್ತ ನಿಲ್ಲಬೇಕಾಗುತ್ತದೆ. ಇದನ್ನು ಮನಗಂಡು ಡ್ರೈವ್‌ಜಿ ಸಂಸ್ಥೆ ಹುಬ್ಬಳ್ಳಿ-ಧಾರವಾಡಕ್ಕೂ ಸೇವೆ ವಿಸ್ತರಿಸಲು ನಿರ್ಧರಿಸಿದೆ.

ಏನಿದು ಬಾಡಿಗೆ ವಾಹನ ಉದ್ಯಮ
ಗಂಟೆಗಳ ಆಧಾರದ ಮೇಲೆ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ಬಾಡಿಗೆಗೆ ನೀಡಲಾಗುತ್ತದೆ. 18 ವರ್ಷಕ್ಕಿಂತ ಹೆಚ್ಚಿನ ವಯೋಮಿತಿಯ ಹಾಗೂ ಚಾಲನಾ ಲೈಸೆನ್ಸ್‌ ಹೊಂದಿರುವವವರು ವಾಹನ ಬಾಡಿಗೆ ಪಡೆದುಕೊಳ್ಳಬಹುದಾಗಿದೆ. ಡ್ರೈವ್‌ಜಿ ವಾಹನ ಬಾಡಿಗೆ ಪಡೆಯುವ ಪ್ರಕ್ರಿಯೆ ಸರಳೀಕರಿಸಿದೆ. ವಾಹನಗಳಿಗಾಗಿ ಕಾಯಬೇಕಾಗಿಲ್ಲ. ಸ್ಮಾರ್ಟ್‌ ಫೋನ್‌ನಿಂದ ಡ್ರೈವಜಿ ಅಪ್ಲಿಕೇಶನ್‌ ಮೂಲಕ ವಾಹನ ಪಡೆದುಕೊಳ್ಳಬಹುದು. ಇಲ್ಲವೇ ವೆಬ್‌ಸೈಟ್ ಮೂಲಕವೂ ಬುಕ್‌ ಮಾಡಬಹುದು. ಅಗತ್ಯ ದಾಖಲೆ ಒದಗಿಸಿದರೆ ಬಳಕೆದಾರರಿರುವ ಸ್ಥಳಕ್ಕೆ ಬಂದು ವಾಹನ ನೀಡಲಾಗುತ್ತದೆ. ಒಮ್ಮೆ ಹೆಸರು ನೋಂದಣಿಯಾದರೆ ವಾಹನ ಬಾಡಿಗೆ ಪಡೆಯುವುದು ಅತ್ಯಂತ ಸುಲಭ. ಇದೇ ಕಾರಣಕ್ಕೆ ಡ್ರೈವ್‌ಜಿ ಸಂಸ್ಥೆ ಸೇವೆ ಒದಗಿಸುವ ನಗರಗಳಲ್ಲಿ ಮನ್ನಣೆ ಪಡೆದುಕೊಂಡಿದೆ.

ದರಪಟ್ಟಿ ಹೀಗಿದೆ
ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು ಕನಿಷ್ಟ 6 ಗಂಟೆ ಬಾಡಿಗೆ ಪಡೆಯಬೇಕಾಗುತ್ತದೆ. ಪ್ರತಿ ಗಂಟೆಗೆ 15 ರೂ. ಬಾಡಿಗೆ ನಿಗದಿಪಡಿಸಲಾಗಿದೆ. ವಾರದ ದಿನಗಳಲ್ಲಿ 10ರೂ.ನಿಂದ 130ರೂ.ವರೆಗೆ ಪ್ರತಿ ಗಂಟೆಗೆ ಬೈಕ್‌ ಹಾಗೂ ಎಸ್‌ಯುವಿ ಕಾರುಗಳವರೆಗೆ ವಿವಿಧ ವಾಹನ ಬಾಡಿಗೆ ಪಡೆದುಕೊಳ್ಳಬಹುದು. ವಾಹನ ಪಡೆಯಲು ಯಾವುದೇ ಭದ್ರತಾ ಠೇವಣಿ ಇಡಬೇಕಾಗಿಲ್ಲ. ವಾರಾಂತ್ಯದಲ್ಲಿ ವಾಹನಗಳ ಬಾಡಿಗೆ ದರ ಹೆಚ್ಚಾಗುತ್ತದೆ. ಇಬ್ಬರು ಶೇರಿಂಗ್‌ ಮೂಲಕ ವಾಹನ ಬಾಡಿಗೆ ಪಡೆಯಬಹುದು.

ಟಾಪ್ ನ್ಯೂಸ್

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.