ಅನಧಿಕೃತ ವರ್ಗಾದೇಶಗಳು ಸೃಷ್ಟಿಯಾಗಿದೆಲ್ಲಿ?


Team Udayavani, Feb 18, 2019, 9:14 AM IST

18-february-14.jpg

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಡೆದಿರುವ ಅನಧಿಕೃತ ವರ್ಗಾವಣೆಯ ಬಹುತೇಕ ಆದೇಶಗಳನ್ನು ಆವಕ-ಜಾವಕ (ಇನ್‌ವರ್ಡ್‌-ಔಟ್‌ ವರ್ಡ್‌) ಪುಸ್ತಕದಲ್ಲಿ ದಾಖಲೆ ಮಾಡದಿರುವ ದಂಧೆಕೋರರ ಕಳ್ಳಾಟ ಬೆಳಕಿಗೆ ಬಂದಿದೆ. ಈ ಆದೇಶಗಳು ಸೃಷ್ಟಿಯಾಗಿದ್ದಾದರೂ ಎಲ್ಲಿ ಎನ್ನುವ ಪ್ರಶ್ನೆಗಳು ತನಿಖಾಧಿಕಾರಿಗಳ ಮುಂದಿವೆ.

ವರ್ಗಾವಣೆ ದಂಧೆಯನ್ನು ಹಿಂದಿನಿಂದಲೂ ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ ಎನ್ನುವುದನ್ನು 55 ಆದೇಶಗಳ ಮೂಲಕ 148 ಸಿಬ್ಬಂದಿ ವರ್ಗಾವಣೆ ಪ್ರಕರಣ ತೆರೆದಿಟ್ಟಿದೆ. ಸುಮಾರು 50 ಲಕ್ಷಕ್ಕೂ ಹೆಚ್ಚು ಹಣ ಹರಿದಾಡಿರುವುದನ್ನು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ. ಆದರೆ ಈ ಆದೇಶಗಳು ಸೃಷ್ಟಿಯಾಗಿದ್ದಾದರೂ ಎಲ್ಲಿ ಎನ್ನುವ ಪ್ರಶ್ನೆ ಇದೀಗ ಎದುರಾಗಿದೆ.

ಸಂಚಾರ ವಿಭಾಗದ ಸಿಬ್ಬಂದಿಯ ವರ್ಗಾವಣೆ ಆದೇಶಗಳು ಕೇಂದ್ರ ಕಚೇರಿಯ ಸಂಚಾರ ಶಾಖೆಯಿಂದ ಹೊರಡಿಸಲಾಗುತ್ತಿದೆ. ಇಲ್ಲಿ ಸಿದ್ಧಗೊಂಡ ಆದೇಶಗಳನ್ನು ಸಿಬ್ಬಂದಿ ಶಾಖೆಯ ಪತ್ರ ಶಾಖೆ (ಆವಕ-ಜಾವಕ) ಮೂಲಕ ಸಂಬಂಧಿಸಿದ ವಿಭಾಗಗಳಿಗೆ ರವಾನಿಸಲಾಗುತ್ತಿದೆ. ಸಿಬ್ಬಂದಿ ಶಾಖೆ ಮೂಲಕ ಕಳುಹಿಸುವ ಎಲ್ಲಾ ಪತ್ರಗಳ ಮಾಹಿತಿಯನ್ನು ಸಂಚಾರ ಶಾಖೆಯ ಆವಕ-ಜಾವಕ ಸಿಬ್ಬಂದಿ ದಾಖಲೆ ಪುಸ್ತಕದಲ್ಲಿ ನಮೂದಿಸುತ್ತಾರೆ. ಯಾವುದೇ ಕಾರಣಕ್ಕೂ ಸಿಬ್ಬಂದಿ ಶಾಖೆಯ ಅಧೀನದಲ್ಲಿರುವ ಪತ್ರ ಶಾಖೆ ಹೊರತುಪಡಿಸಿ ನೇರವಾಗಿ ಕಳುಹಿಸಲು ಸಾಧ್ಯವಿಲ್ಲ.

ಲೆಸ್‌ ಪೇಪರ್‌ ಕಚೇರಿ ಮೂಲೆಗುಂಪು
ಅಕ್ರಮಗಳಿಗೆ ಕಡಿವಾಣ, ನಿಖರತೆಗಾಗಿ ಕೇಂದ್ರ ಕಚೇರಿಯಲ್ಲಿ ಲೆಸ್‌ ಪೇಪರ್‌ ವ್ಯವಸ್ಥೆ ಜಾರಿಗೆ ತಂದು ಪ್ರತ್ಯೇಕ ತಂತ್ರಾಂಶ ಅಭಿವೃದ್ಧಿಪಡಿಸಿ ಅನುಷ್ಠಾನಕ್ಕೆ ತರಲಾಗಿತ್ತು. ಒಂದು ಶಾಖೆಯಲ್ಲಿ ಫೈಲ್‌ ಸಿದ್ಧಪಡಿಸಿ ಶಾಖೆ ಮುಖ್ಯಸ್ಥರ ಸಹಿ ಅಥವಾ ಇನ್ನೊಂದು ಶಾಖೆಗೆ ರವಾನಿಸಬೇಕಾದರೆ ಈ ತಂತ್ರಾಂಶದಲ್ಲಿ ನಮೂದಿಸಿಯೇ ಫೈಲ್‌ ವರ್ಗಾಯಿಸುವ ಪದ್ಧತಿ ಜಾರಿಗೆ ತರಲಾಗಿತ್ತು. ಈ ತಂತ್ರಾಂಶದಲ್ಲಿ ನಮೂದಿಸದ ಪತ್ರಗಳ ಪರಿಶೀಲಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ, ಈ ವ್ಯವಸ್ಥೆ ಮೂಲೆಗುಂಪಾಗಿದ್ದರಿಂದ ಅವ್ಯವಹಾರಕ್ಕೆ ಆಸ್ಪದ ನೀಡಿದಂತಾಗಿದೆ.

ಹೀಗೂ ಮಾಡಿರಬಹುದಾ?
ಕಳ್ಳಾಟದ ದಂಧೆಕೋರರು ವರ್ಗಾವಣೆಗಾಗಿಯೇ ಪ್ರತ್ಯೇಕ ದಾಖಲೆ ಪುಸ್ತಕ ನಿರ್ವಹಿಸುತ್ತಿರಬಹುದಾ ಎನ್ನುವ ದಟ್ಟ ಶಂಕೆಯೂ ಇದೆ. ಕೆಲ ಪತ್ರಗಳನ್ನು ಮಾಮೂಲಾಗಿ ನಿತ್ಯ ಬಳಸುವ ದಾಖಲೆಯಲ್ಲಿ ನಮೋದಿಸಿ, ಕೆಲ ಆದೇಶಗಳನ್ನು ಕಳ್ಳಾಟಕ್ಕೆ ಬಳಸುತ್ತಿರಬಹುದಾದ ದಾಖಲೆ ಪುಸ್ತಕದಲ್ಲಿ ನಮೋದಿಸಿರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಇದೀಗ ನಿತ್ಯ ಬಳಸುತ್ತಿದ್ದ
ಜಾವಕ ದಾಖಲೆ ಪುಸ್ತಕ ಮಾತ್ರ ತನಿಖಾಧಿಕಾರಿಗಳಿಗೆ ದೊರೆತಿದೆ ಎನ್ನಲಾಗಿದೆ.

ಈಗಲಾದರೂ ಎಚ್ಚೆತ್ತುಕೊಳ್ತಾರಾ?
ಅಕ್ರಮಗಳಿಗೆ ಕಡಿವಾಣ, ಕಚೇರಿ ಕರ್ತವ್ಯದಲ್ಲಿ ವ್ಯವಸ್ಥೆ ಹಾಗೂ ನಿಖರತೆ ಉದ್ದೇಶದಿಂದ ಜಾರಿಗೆ ತಂದಿದ್ದ ಲೆಸ್‌ ಪೇಪರ್‌ ಕಚೇರಿ ವ್ಯವಸ್ಥೆ ಅಗತ್ಯವಾಗಿದೆ. ಈ ತಂತ್ರಾಂಶದ ಪೂರ್ಣ ಹತೋಟಿಯನ್ನು ವ್ಯವಸ್ಥಾಪಕರಿಗೆ ನೀಡಲಾಗಿತ್ತು. ಪ್ರತಿಯೊಂದು ಶಾಖೆಯ ಕೆಲಸ ಕಾರ್ಯಗಳನ್ನು ಇದರಲ್ಲೇ ವೀಕ್ಷಿಸಬಹುದಾಗಿತ್ತು. ಅಕ್ರಮಗಳಿಗೆ ಇದು ಅಡ್ಡಿಯಾಗುತ್ತದೆ ಎನ್ನುವ ಕಾರಣಕ್ಕೆ ಕೆಲವರು ಈ ವ್ಯವಸ್ಥೆಯನ್ನು ಮೂಲೆಗುಂಪು ಮಾಡಿ ಓಬೇರಾಯನ ಕಾಲದ ಪದ್ಧತಿಯನ್ನೇ ಪುನಃ ರೂಢಿಸಿಕೊಂಡಿರುವುದು ಅವ್ಯವಹಾರಗಳಿಗೆ ಎಡೆ ಮಾಡಿಕೊಟ್ಟಂತಾಗಿದೆ. ಅವ್ಯವಸ್ಥೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ಲೆಸ್‌ ಪೇಪರ್‌ ವ್ಯವಸ್ಥೆ ಅನುಷ್ಠಾನಗೊಳಿಸುವ ಕುರಿತು ಚಿಂತಿಸಬೇಕು ಎನ್ನುವುದು ಸಿಬ್ಬಂದಿ ಅಭಿಪ್ರಾಯವಾಗಿದೆ.

ಕಳ್ಳಾಟದ ಕರಾಮತು
ಇದೀಗ 55ರಲ್ಲಿ ಬಹುತೇಕ ಆದೇಶಗಳು ಸಂಚಾರಿ ಶಾಖೆಯಿಂದ ಸಿಬ್ಬಂದಿ ಶಾಖೆಗೆ ರವಾನಿಸಿದ ಬಗ್ಗೆ ಸಾಕ್ಷ್ಯಗಳೇ ಇಲ್ಲದಂತಾಗಿದೆ. ವರ್ಗಾವಣೆ ಪ್ರಕರಣ ಬಯಲಾಗುತ್ತಿದ್ದಂತೆ ಮಹತ್ವದ ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿರುವ ಭದ್ರತಾ ಮತ್ತು ಜಾಗೃತ ದಳ ಅಧಿಕಾರಿಗಳು ಸಂಚಾರ ಶಾಖೆಯ ಜಾವಕ ದಾಖಲೆ ಪುಸ್ತಕದಲ್ಲಿ ವರ್ಗಾವಣೆ ಆದೇಶಗಳ ಸಂಖ್ಯೆ ಮೂದಾಗದಿರುವ ಅಂಶಗಳನ್ನು ಪತ್ತೆ ಹಚ್ಚಿದ್ದಾರೆ. ಹೀಗಾಗಿ ಈ ಆದೇಶಗಳು ಸೃಷ್ಟಿಯಾಗಿದ್ದಾದರೂ ಎಲ್ಲಿ, ಹೇಗೆ ಎನ್ನುವ ಪ್ರಶ್ನೆ ತನಿಖಾಧಿಕಾರಿಗಳನ್ನು ಕಾಡುತ್ತಿದೆ.

ಅಮಾಯಕರಿಗೆ ಶಿಕ್ಷೆ 
ವರ್ಗಾವಣೆ ದಂಧೆಕೋರರ ವ್ಯವಸ್ಥಿತ ಪಿತೂರಿಗೆ ಅಮಾಯಕ ಸಿಬ್ಬಂದಿ ಶಿಕ್ಷೆ ಅನುಭವಿಸುವಂತಾಗಿದೆ ಎನ್ನುವ ಮಾತುಗಳು ಕೇಂದ್ರ ಕಚೇರಿಯಲ್ಲಿ ಹರಿದಾಡುತ್ತಿವೆ. ಸಿಬ್ಬಂದಿ ಶಾಖೆಯ ಪತ್ರ ವಿಭಾಗದ ಪುಸ್ತಕದಲ್ಲಿ ಆದೇಶಗಳ ಸಂಖ್ಯೆಗಳು ನಮೂದಾಗಿದ್ದು, ಸಂಚಾರ ಶಾಖೆಯ ಪುಸ್ತಕದಲ್ಲಿ ಈ ಆದೇಶಗಳು ನಮೂದಾಗಿಲ್ಲ ಎನ್ನುವ ಕಾರಣಕ್ಕೆ ಸಿಬ್ಬಂದಿ ಶಾಖೆಯ ಸಿಬ್ಬಂದಿಯನ್ನು ಕರ್ತವ್ಯ ನಿರ್ಲಕ್ಷéದ ಆರೋಪದ ಮೇರೆಗೆ ಅಮಾನತು ಮಾಡಲಾಗಿದೆ. ದಂಧೆಕೋರರ ಮೇಲಾಟಕ್ಕೆ ಯಾವುದೇ ತಪ್ಪು ಮಾಡದ ಸಿಬ್ಬಂದಿ ಅಮಾನತು ಶಿಕ್ಷೆ ಅನುಭವಿಸುವಂತಾಗಿದೆ.

„ಹೇಮರಡ್ಡಿ ಸೈದಾಪುರ 

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.