CONNECT WITH US  

ಅಯ್ಯೋ! ಥಿಯೇಟರ್ ನಲ್ಲಿ ಲೇಡಿ ಪೊಲೀಸನ್ನು ಚುಡಾಯಿಸಿ ಗೂಸಾ ತಿಂದ

ಹಾಸನ: ದರ್ಶನ್ ಅಭಿನಯದ ಚಕ್ರವರ್ತಿ ಸಿನಿಮಾ ವೀಕ್ಷಣೆ ವೇಳೆ ಸಿವಿಲ್ ಡ್ರೆಸ್ ನಲ್ಲಿದ್ದ ಲೇಡಿ ಪೊಲೀಸ್ ಗೆ ಕಿರುಕುಳ ಕೊಟ್ಟಿದ್ದ ಯುವಕನಿಗೆ ಚಿತ್ರಮಂದಿರದೊಳಗೆ ಹಿಗ್ಗಾಮುಗ್ಗಾ ಹೊಡೆತ ತಿಂದ ಘಟನೆ ಹಾಸನದಲ್ಲಿ ಶನಿವಾರ ನಡೆದಿದೆ.

ಹಾಸನದ ಎಸ್ ಜೆಬಿ ಥಿಯೇಟರ್ ನಲ್ಲಿ ಚಕ್ರವರ್ತಿ ಸಿನಿಮಾ ವೀಕ್ಷಣೆಗಾಗಿ ಶುಕ್ರವಾರ ರೈಲ್ವೆ ಪೊಲೀಸ್ ಭಾರತಿ ಸಿವಿಲ್ ಡ್ರೆಸ್ ನಲ್ಲಿ ಆಗಮಿಸಿದ್ದರು. ಹಿಂಬದಿ ಕುಳಿತಿದ್ದ ಕಾಮುಕ ಯುವಕ ಆಕೆಗೆ ಸುಮಾರು ಎರಡೂವರೆ ಗಂಟೆಗಳ ಕಾಲ ಕಿರುಕುಳ ಕೊಟ್ಟಿದ್ದನಂತೆ..ಭಾರತಿ ಅವರು ಎಚ್ಚರಿಕೆ ಕೊಟ್ಟಿದ್ದರು ಕೂಡಾ ಈತ ಕಪಿಚೇಷ್ಠೆ ಮುಂದುವರಿಸಿದ್ದನಂತೆ.

ಸಿನಿಮಾ ಮುಗಿಯುತ್ತಿದ್ದಂತೆಯೇ ಕಾಮುಕನನ್ನು ಹೊರಗೆ ಎಳೆದು ತಂದು, ಲೇಡಿ ಸಿಂಗಂ ಕೊಟ್ಟ ಪಂಚ್ ಗೆ ಆತನ ನಶೆಯೆಲ್ಲಾ ಇಳಿದುಹೋಗಿ, ಕಾಲಿಗೆ ಬೀಳ್ತೀನಿ, ಕೈಮುಗಿತೀನಿ, ಬಿಟ್ಟುಬಿಡಿ ಮೇಡಂ ಎಂದು ಗೋಗರೆಯುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆಂದು ವರದಿ ತಿಳಿಸಿದೆ.
 

Trending videos

Back to Top