CONNECT WITH US  

ಯೋಜನೆ ಸದ್ಬಳಕೆಗೆ ಸಲಹೆ

ಸಿಂಧನೂರು: ಮಹಿಳೆಯರ ಸ್ವಾವಲಂಬನೆ ಮತ್ತು ಪ್ರಗತಿಗಾಗಿ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದೆ. ಇವುಗಳ ಪ್ರಯೋಜನ ಪಡೆದು ಮಹಿಳೆಯರು ಮುಂದೆ ಬರಬೇಕು ಎಂದು ನಗರಸಭೆ ಅಧ್ಯಕ್ಷೆ ಮಂಜುಳಾ ಪಾಟೀಲ ಸಲಹೆ ನೀಡಿದರು. ಪಂಡಿತ್‌ ದೀನ್‌ ದಯಾಳ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಮಾನ, ಸ್ಥಳೀಯ ಸ್ವ-ಸಹಾಯ ಸಂಘಗಳು ಮತ್ತು ಪ್ರದೇಶಮಟ್ಟದ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಕ್ವಿಟ್‌ ಇಂಡಿಯಾ ಚಳವಳಿಯ 75ನೇ ವರ್ಷಾಚರಣೆ ನಿಮಿತ್ತ ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಿದ್ದಿ ಡೇ ನಲ್ಮ್ ಯೋಜನೆ ಕುರಿತು  ಮೂರು ದಿನಗಳ ಅರಿವು ಮೂಡಿಸುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಗರದಲ್ಲಿ ತರಕಾರಿ ಮಾರಾಟ ಮಾಡುವ ಬೀದಿ  ಪಾರಿಗಳು ಶೇ.5ರಿಂದ 10ರಷ್ಟು ಬಡ್ಡಿಗೆ ಸಾಲ ತಂದು ಸಣ್ಣಪುಟ್ಟ ವ್ಯಾಪಾರ ಮಾಡುತ್ತಾರೆ. ಅವರು ದುಡಿದ ಎಲ್ಲ ಹಣ ಬಡ್ಡಿಗೆ ಸಾಲುವುದಿಲ್ಲ. ಹೀಗಾಗಿ ಮಹಿಳೆಯರ ಸ್ವಯಂ ಉದ್ಯೋಗಕ್ಕಾಗಿ ಸರ್ಕಾರ ಹಲವಾರು ಯೋಜನೆ ರೂಪಿಸಿದೆ. ಅನೇಕ ಉತ್ಪನ್ನಗಳು ಸ್ಥಳೀಯವಾಗಿ ಅಷ್ಟೇ ಅಲ್ಲ ಬೇರೆಡೆಯೂ ಮಾರಾಟವಾಗುವಂತೆ ಮಾಡಬೇಕಾದ ಅವಶ್ಯವಿದೆ. ಹಾಗಾದರೆ ಮಾತ್ರ ಆರ್ಥಿಕ ಸುಧಾರಣೆ ಕಾಣಲು ಸಾಧ್ಯ. ಈ ಹಿನ್ನೆಲೆಯಲ್ಲಿ ನಗರಸಭೆಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಎಲ್ಲ ರೀತಿಯಿಂದಲೂ ನೆರವು ನೀಡಲಾಗುತ್ತಿದೆ ಎಂದು ಹೇಳಿದರು. ನಗರಸಭೆ ವಿಪಕ್ಷ ನಾಯಕ ಚಂದ್ರಶೇಖರ ಮೈಲಾರ ಮಾತನಾಡಿ, ಮಹಿಳಾ ಸ್ವಸಹಾಯ ಸಂಘಗಳಿಗೆ ನೆರವು ನೀಡಲು ನಗರಸಭೆಯಲ್ಲಿ ಅನುದಾನವಿದೆ. ಅದನ್ನು ಸರಿಯಾಗಿ ಬಳಕೆ  ಮಾಡಿಕೊಳ್ಳಬೇಕು. ಪಡೆದ ಸಾಲವನ್ನು ಮರುಪಾವತಿ ಮಾಡಿದರೆ ಯೋಜನೆ ಉದ್ದೇಶ ಸಾರ್ಥಕವಾಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪೌರಾಯುಕ್ತ ಆರ್‌. ವಿರೂಪಾಕ್ಷ ಮೂರ್ತಿ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ನವ ಭಾರತ ಸಂಕಲ್ಪದ ಪ್ರಮಾಣ ವಚನ ಬೋಧಿಸಿ ಮಾತನಾಡಿ, 1942ರಲ್ಲಿ ಸ್ವಾತಂತ್ರ್ಯಹೋರಾಟಗಾರರು
ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಸಂಕಲ್ಪ ಮಾಡಿದಂತೆ 2022ರ ವೇಳೆಗೆ ಬಡತನ ನಿರ್ಮೂಲನೆ, ಸ್ವತ್ಛ ಭಾರತ, ಭ್ರಷ್ಟಾಚಾರ, ಭಯೋತ್ಪಾದನೆ, ಕೋಮುವಾದ, ಜಾತಿ ಮುಕ್ತ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡೋಣ ಎಂದು  ಹೇಳಿದರು. ನಗರಸಭೆ ಸಿಎಒ ದುರುಗಪ್ಪ ಹಸಮಕಲ್‌ ಮಾತನಾಡಿ, ಸರ್ಕಾರ ಜಾರಿಗೆ ತಂದಿರುವ ಯೋಜನೆ ವಿವರಿಸಿದರು. ನಗರಸಭೆ ಉಪಾಧ್ಯಕ್ಷೆ ಅನ್ವರ ಬೇಗಂ, ಸಿಡಿಎಸ್‌ ಮಾಜಿ ಅಧ್ಯಕ್ಷೆ ವಾಣಿ ಎಸ್‌.ಖಾದ್ರಿ ಇದ್ದರು.

Trending videos

Back to Top