CONNECT WITH US  

ಚಿಕಿತ್ಸೆ ಸೌಲಭ್ಯ ಪಡೆಯಲು ಸಲಹೆ

ಶಹಾಪುರ: ಗ್ರಾಮಸ್ಥರ ಅನುಕೂಲಕ್ಕಾಗಿ ಸಂತಾನಹರಣ ಶಸ್ತ್ರಚಿಕಿತ್ಸೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಇದೇ ಮೊದಲ
ಬಾರಿಗೆ ಇಲ್ಲಿನ ಆಸ್ಪತ್ರೆಯಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಗ್ರಾಮಸ್ಥರು ಇದರ ಸದುಪಯೋಗ
ಪಡೆಯಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ| ರಮೇಶ ಗುತ್ತೇದಾರ ಹೇಳಿದರು.

ತಾಲೂಕಿನ ಹಯ್ನಾಳ (ಬಿ) ಗ್ರಾಮದ ಸರಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ
ಅವರು ಮಾತನಾಡಿದರು.

ಶಸ್ತ್ರ ಚಿಕಿತ್ಸಾ ನೆರವೇರಿಸಲು ಆಗಮಿಸಿದ್ದ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ|ನೀಲಮ್ಮ ಎಸ್‌. ಮಾತನಾಡಿ, ಮಹಿಳೆಯರು
ಸಂತಾನಹರಣ ಶಸ್ತ್ರಚಿಕಿತ್ಸೆಗೆ ಆಗಮಿಸುವ ಮಹಿಳೆಯರನ್ನು ಸೂಕ್ತ ಪರಿಶೀಲನೆ ನಡೆಸಿ ಯೋಗ್ಯರೆನಿಸಿದ್ದಲ್ಲಿ ಶಸ್ತ್ರ ಚಿಕಿತ್ಸೆ
ನೀಡಲಾಗವುದು. ಯಾರು ಭಯಪಡುವ ಅಗತ್ಯವಿಲ್ಲ. ಒಂದು ವೇಳೆ ಅನಾರೋಗ್ಯ ಕಂಡು ಬಂದಲ್ಲಿ ಮುಂದಿನ ಶಿಬಿರದವರೆಗೆ
ಸೂಕ್ತ ಚಿಕಿತ್ಸೆ ಪಡೆದು ಮುಂದಿನ ಶಿಬಿರದಲ್ಲಿ ಭಾಗವಹಿಸಿ ಚಿಕಿತ್ಸೆ ಪಡೆಯಬಹು ಎಂದರು.

ಈ ಸಂದರ್ಭದಲ್ಲಿ ಒಟ್ಟು 6 ಜನರು ಶಿಬಿರದ ಲಾಭ ಪಡೆದರು. ಇದೇ ಮೊದಲ ಬಾರಿಗೆ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸಂತಾನಹರಣ ಶಸ್ತ್ರ ಚಿಕಿತ್ಸೆ ಆಯೋಜಿಸಿರುವುದು ಸಂತಸ ತಂದಿದೆ. ದೂರದ ಪಟ್ಟಣಕ್ಕೆ ತೆರಳಿ ಸಾವಿರಾರು ರೂ. ಖರ್ಚು ಮಾಡುವ ಬದಲು ಇಂತಹ ಶಿಬಿರ ಆಯೋಜಿಸಿದಾಗ ನಾವೆಲ್ಲ ಚಿಕಿತ್ಸೆ ಪಡೆಯಬಹುದು. ಶಿಬಿರದಲ್ಲಿ ಶಸ್ತ್ರಚಿಕಿತ್ಸೆ ಪಡೆದ ಕುಟುಂಬಸ್ಥರು
ಉಚಿತವಾಗಿ ಚಿಕಿತ್ಸೆಯಾಗಿದ್ದರಿಂದ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಡಾ.ಲಕ್ಷ್ಮೀಕಾಂತ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಜ್ಯೋತಿ ಕಟ್ಟಿಮನಿ, ಆಯುಷ್ಯ ವೈದ್ಯ ಡಾ|ಆನಂದ ಕರಕಳ್ಳಿ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.
 

Trending videos

Back to Top