CONNECT WITH US  

"ಮನೆ ಮನೆಗೆ ಕಾಂಗ್ರೆಸ್‌ ಸಾಧನೆ ತಿಳಿಸಿ'

ದೇವನಹಳ್ಳಿ: ಪ್ರತಿ ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟಿಸಿ ಕಾಂಗ್ರೆಸ್‌ ಸರ್ಕಾರದ ಜನಪರ ಸಾಧನೆಗಳನ್ನು ಪ್ರತಿ ಮನೆ
ಮನೆಗೆ ತಿಳಿಸುವುದರ ಮೂಲಕ ತಾಲೂಕಿನಲ್ಲಿ ಶಾಸಕರನ್ನು ಆಯ್ಕೆ ಮಾಡಿಕೊಳ್ಳುವುದು ಹಾಗೂ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ ತರಲು ಕಾರ್ಯಕರ್ತರು ಶ್ರಮಿಸ ಬೇಕು ಎಂದು ಜಿಪಂ ಸದಸ್ಯ ಜಿ.ಲಕ್ಷ್ಮೀ ನಾರಾಯಣ್‌ ಸಲಹೆ ನೀಡಿದರು.

ತಾಲೂಕಿನ ಪಾಪನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್‌ ಮುಖಂಡರಿಂದ ಮನೆ ಮನೆಗೆ ಕಾಂಗ್ರೆಸ್‌ ಅಭಿಯಾನದಲ್ಲಿ
ಸರ್ಕಾರದ ಸಾಧನೆ ಕಿರು ಹೊತ್ತಿಗೆ ವಿತರಿಸಿ ಅವರು ಮಾತನಾಡಿದರು. ಬಿಜೆಪಿ ಸಚಿವರು ಜೈಲಿಗೆ ಹೋಗಿದ್ದ
ವರು: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಜನಪರ, ಬಡವರ ಪರ, ದೀನದಲಿತರ, ಹಿಂದುಳಿದ ವರ್ಗಗಳ, ಅಲ್ಪ ಸಂಖ್ಯಾತರು ಹಾಗೂ ಎಲ್ಲಾ ವರ್ಗದ ಜನರಿಗೂ ಉತ್ತಮ ಕಾರ್ಯ ಕ್ರಮಗಳನ್ನು ರೂಪಿಸಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಕಳೆದ ನಾಲ್ಕೂವರೆ ವರ್ಷದಲ್ಲಿ ಭ್ರಷ್ಟಾಚಾರ ರಹಿತ, ಕಪ್ಪು ಚುಕ್ಕೆಯಿಲ್ಲದೆ ಜನಪರ ಆಡಳಿತ ನೀಡುತ್ತಿದ್ದಾರೆ. ಬಿಜೆಪಿ ಸರ್ಕಾರ ಇದ್ದವೇಳೆ ಮೂರು ಮುಖ್ಯಮಂತ್ರಿಗಳ ಬದಲಾವಣೆ, ಮುಖ್ಯಮಂತ್ರಿ ಜೈಲಿಗೆ ಹೋಗಿದ್ದರೆ ಅದು ಬಿಜೆಪಿ ಸರ್ಕಾರದಲ್ಲಿ ಮಾತ್ರವಾಗಿದೆ. ಸಚಿವರು, ಶಾಸಕರು ಜೈಲಿಗೆ ಹೋಗಿದ್ದರು. ಇವು ಗಳನ್ನು ಜನರಿಗೆ ಅರ್ಥಮಾಡಬೇಕು ಎಂದು ಹೇಳಿದರು. ಸುಳ್ಳು ಹೇಳಿ ಬಿಜೆಪಿ ಜನರಿಗೆ ಮೋಸ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೋಟುಗಳನ್ನು ಅಮಾನ್ಯಿàಕರ ಣಗೊಳಿಸಿ ಜನಸಾಮಾನ್ಯರಿಗೆ ತೊಂದರೆ ನೀಡಿದ್ದಾರೆ. ಕೇಂದ್ರ ಸರ್ಕಾರ ಕೇವಲ ಸಾರ್ವಜನಿಕರ, ಜನಸಾಮಾನ್ಯರ ಬದುಕನ್ನು ಅತಂತ್ರಗೊಳಿಸುವಂತಹ ಕಾರ್ಯವನ್ನು ಮಾಡುತ್ತಿದೆ.  ಕಪ್ಪುಹಣ ತರುತ್ತೇವೆ ಎಂದು ಹೇಳಿ ಪ್ರತಿ ಜನರಿಗೂ ತಮ್ಮ ಬ್ಯಾಂಕ್‌ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ ಎಂದು ಸುಳ್ಳು ಹೇಳಿ ಜನರನ್ನು ಮೋಸಮಾಡಿದ್ದಾರೆ ಎಂದು ಲೇವಡಿ ಮಾಡಿದರು.

 ಜನರಿಗೆ ಮನಮುಟ್ಟುವಂತೆ ತಿಳಿಸಿ: ಭೂ ಮಂಜೂರಾತಿ ಸದಸ್ಯ ಎಸ್‌. ಜಿ.ನಾರಾಯಣಸ್ವಾಮಿ ಮಾತನಾಡಿ, ರಾಜ್ಯದ ಜನತೆಗೆ ಸಿದ್ದರಾಮಯ್ಯನವರ ಸರ್ಕಾರ ಹಲವಾರು ಯೋಜನೆ ತಂದಿದೆ. ಪ್ರತಿಯವರು ಒಂದಲ್ಲಾ ಒಂದು ಯೋಜನೆಯಲ್ಲಿ ಫ‌ಲಾನುಭವಿ ಗಳಾಗಿದ್ದಾರೆ. ಫ‌ಲಾನುಭವಿಗಳು ಕಾಂಗ್ರೆಸ್‌ ಸರ್ಕಾರವನ್ನು ಕೈಬಿಡುವುದಿಲ್ಲ ಎಂಬ ನಂಬಿಕೆಯಿದೆ. ಪ್ರತಿ ಕಾಂಗ್ರೆಸ್‌ ಕಾರ್ಯಕರ್ತರು ಸರ್ಕಾರದ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟುವಂತೆ ಮಾಡುವ ಕಾರ್ಯ ಮಾಡಬೇಕಿದಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯ ಕೆ.ಸಿ.ಮಂಜುನಾಥ್‌, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಶ್ರೀನಿವಾಸಗೌಡ,
ತಾಪಂ ಮಾಜಿ ಸದಸ್ಯ ಲಕ್ಷ್ಮಣಗೌಡ, ಭಾಗ್ಯಮ್ಮ, ರಾಜ್ಯ ಕೆಪಿಸಿಸಿ ಸದಸ್ಯ ಜೇತನ್‌ಗೌಡ, ಜಿಲ್ಲಾ ಕಾಂಗ್ರೆಸ್‌ ಎಸ್ಸಿ
ವಿಭಾಗದ ಮಾಜಿ ಅಧ್ಯಕ್ಷ ಎ.ಚಿನ್ನಪ್ಪ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ.ವೆಂಕಟೇಶ್‌, ಸದಸ್ಯ
ಸೋಮತ್ತನಹಳ್ಳಿ ಮಂಜುನಾಥ್‌, ಖಾದಿ ಬೋರ್ಡ್‌ ಮಾಜಿ ಉಪಾಧ್ಯಕ್ಷ ನಾರಾಯಣಸ್ವಾಮಿ, ನಲ್ಲೂರು ಗ್ರಾಪಂ
ಅಧ್ಯಕ್ಷೆ ಸಾಮಿತ್ರಮ್ಮ, ಮುಖಂಡ ಎಂ.ಪಿ.ಶಂಕರ್‌, ನಾರಾಯಣಸ್ವಾಮಿ, ಬಸವೇಗೌಡ, ವೆಂಕಟೇಶಪ್ಪ,
ನಟರಾಜ್‌, ನಜೀರ್‌ ಅಹ್ಮದ್‌, ತಮ್ಮೇಗೌಡ ಮತ್ತಿತರರಿದ್ದರು.

Trending videos

Back to Top