CONNECT WITH US  

ಬದಲಾಗಲಿದೆ ಸುರಪುರ ಮತಕ್ಷೇತ್ರ ಚಿತ್ರಣ

ಹುಣಸಗಿ: ರಾಜುಗೌಡ ಅವರು ಕ್ಷೇತ್ರದ ಅವೃದ್ಧಿ ಬಗ್ಗೆ ಕನಸು ಉಳ್ಳವರಾಗಿದ್ದಾರೆ. ಅವರ ಅಧಿಕಾರ ಅವಧಿಯಲ್ಲಿ ಸುರಪುರ ಮತಕ್ಷೇತ್ರದ ಚಿತ್ರಣವೇ ಬದಲಾಗಲಿದೆ ಎಂದು ಬಸಣ್ಣ ಶರಣರು ಹೇಳಿದರು. ಇಲ್ಲಿಯ ಗ್ರಾಪಂ ಬುಧವಾರ ಸಂಜೆ ನಡೆದ ವಿಜಯೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಹಿಂದೆ ಅವರು ಶಾಸಕರಾಗಿ ಹಾಗೂ ಸಚಿವರಾಗಿ ಹಲವಾರು ಅಭಿವೃದ್ಧಿ ಕಾಮಗಾರಿ ಮಾಡಿದ್ದಾರೆ. ಅವರ ಅಧಿಕಾರ ಅವಧಿಯಲ್ಲಿ ಕೆಬಿಜೆಎನ್‌ಎಲ್‌ ನೀರಾವರಿ ಸೇರಿದಂತೆ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಸುರಪುರ
ಕ್ಷೇತ್ರದ ಅಭಿವೃದ್ಧಿ ಹೊಂದಿತ್ತು.

ಜಿಪಂ ಸದಸ್ಯ ಬಸವರಾಜ ಸ್ವಾಮಿ ಸ್ಥಾವರಮಠ ಮಾತನಾಡಿ, ಮತದಾರರು ಬಿಜೆಪಿ ಬೆಂಬಲಿಸುವ ಮೂಲಕ ಕ್ಷೇತ್ರದಲ್ಲಿ ರಾಜುಗೌಡರ ಕೈ ಬಲಪಡಿಸಿದಂತಾಗಿದೆ. ರಾಜುಗೌಡ ಅವರು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತಾರೆ. ಪಕ್ಷ ಮತ್ತು ರಾಜುಗೌಡ ಅವರ ಮೇಲೆ ವಿಶ್ವಾಸವಿಟ್ಟು ಜನರು ಆಶೀರ್ವಸಿದ್ದಾರೆ. ಜನರ ಆಶೋತ್ತರಗಳಿಗೆ ತಕ್ಕಂತೆ ರಾಜುಗೌಡ ಅವರು ಕೆಲಸ ಮಾಡುತ್ತಾರೆ ಎಂದು ಹೇಳಿದರು. 

ಹಿರಿಯರಾದ ಮಲ್ಲಿಕಾರ್ಜುನಸ್ವಾಮಿ ಹಿರೇಮಠ, ಶಿವಲಿಂಗಸ್ವಾಮಿ ವಿರಕ್ತಮಠ, ಮುಖಂಡರಾದ ಬಸಣ್ಣ ದೊರಿ, ದೇವಣ್ಣ ಮಲಗಲದಿನ್ನಿ, ಸಂಗಣ್ಣ ವೈಲಿ, ವೀರೇಶ ಚಿಂಚೋಳಿ, ಸುರೇಶ ದೊರಿ, ಈರಪ್ಪ ದೇಸಾಯಿ, ಎಂ.ಎಸ್‌. ಚಂದಾ, ಬಸವರಾಜ ಮಲಗಲದಿನ್ನಿ, ಬಸಣ್ಣ ಬಾಲಗೌಡ್ರ, ಹಮೀದ್‌ಸಾಬ್‌ ಡೆಕ್ಕನ್‌, ಹನೀಫ್‌ಸಾಬ ಬೆಣ್ಣೂರ, ಮಲ್ಲು ಹೆಬ್ಟಾಳ, ಈರಣ್ಣ ಅಗ್ನಿ, ಆನಂದ ಬಾರಿಗಿಡದ, ವೆಂಕಟೇಶ ಅರಳಿಗಿಡದ, ಮಂಜುನಾಥ ದೇಸಾಯಿ, ಮಿರ್ಜಾನಾಧೀರ್‌, ಶರಣು ಕಟ್ಟಿಮನಿ ಇದ್ದರು. 


Trending videos

Back to Top