ಸಮರ್ಪಕವಾಗಿ ಜಾರಿಗೊಂಡರೆ ಪ್ರಯೋಜನಕಾರಿ; ಆರೋಗ್ಯ ನೀತಿ ಶ್ಲಾಘನಾರ್ಹ


Team Udayavani, Mar 17, 2017, 7:51 AM IST

17-STATE-18.jpg

ರಾಷ್ಟ್ರೀಯ ಆರೋಗ್ಯ ನೀತಿ ತಡವಾಗಿಯಾದರೂ ಅನುಮೋದನೆ ಕಂಡಿರುವುದು ಸ್ವಾಗತಾರ್ಹ. ಆರೋಗ್ಯ ಕ್ಷೇತ್ರಕ್ಕೆ ನೀಡಬೇಕಾಗಿರುವ ಹೆಚ್ಚಿನ ಒತ್ತನ್ನು ಇದು ಸಾಬೀತು ಪಡಿಸಿದೆ. ಇದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಜವಾಬ್ದಾರಿ ಕೇಂದ್ರ ಮತ್ತು ರಾಜ್ಯ ಸರಕಾರ ಗಳೆರಡರ ಮೇಲೂ ಇದೆ.

ಬಹಳಷ್ಟು ವಿಳಂಬ ಬಳಿಕ ಕಡೆಗೂ ರಾಷ್ಟ್ರೀಯ ಆರೋಗ್ಯ ನೀತಿಗೆ ಸಂಪುಟದ ಅನುಮೋದನೆ ಸಿಕ್ಕಿದೆ. ಸ್ವತಂತ್ರ ಭಾರತದ ಮೂರನೇ ರಾಷ್ಟ್ರೀಯ ಆರೋಗ್ಯ ನೀತಿಯಿದು. ಈ ಮೊದಲು 1983 ಮತ್ತು 2002ರಲ್ಲಿ ರಾಷ್ಟ್ರೀಯ ಆರೋಗ್ಯ ನೀತಿ ಜಾರಿಗೆ ತರಲಾಗಿತ್ತು. ಇದೀಗ 13 ವರ್ಷಗಳ ಬಳಿಕ ಇನ್ನೊಂದು ಆರೋಗ್ಯ ನೀತಿ ಅನುಷ್ಠಾನಗೊಳ್ಳಲು ಸಜ್ಜಾಗಿದೆ. ಹಿಂದಿನ ಎರಡು ಆರೋಗ್ಯ ನೀತಿಗಳ ಶಿಫಾರಸುಗಳು ಪಂಚವಾರ್ಷಿಕ ಯೋಜನೆಗಳಡಿ ಜಾರಿಯಾಗಿ ಆರೋಗ್ಯ ಕ್ಷೇತ್ರದತ್ತ ಧನಾತ್ಮಕವಾದ ಧೋರಣೆಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿವೆ. ಇತ್ತೀಚೆಗಿನ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರ ಆರೋಗ್ಯ ರಕ್ಷಣೆಗಾಗಿ ಘೋಷಿಸುವ ವಿವಿಧ ಸ್ಕೀಂಗಳು ಈ ಆರೋಗ್ಯ ನೀತಿಗಳ ಫ‌ಲಶ್ರುತಿ ಎನ್ನಬಹುದು. ಪೋಲಿಯೊದಂತಹ ಮಾರಕ ಕಾಯಿಲೆಗಳು ನಿರ್ಮೂಲನ ವಾದದ್ದು ಇದೇ ನೀತಿಗಳಡಿ ಜಾರಿಗೆ ಬಂದ ಕಾರ್ಯಕ್ರಮಗಳಿಂದ. ಅನಂತರದ ದಶಕಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳಾಗಿರುವುದರಿಂದ ಅದಕ್ಕೆ ಪೂರಕವಾಗುವಂತಹ ಆರೋಗ್ಯ ನೀತಿಯನ್ನು ಸರಕಾರ ರಚಿಸಿದೆ. 

ಪ್ರಸ್ತುತ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಖರ್ಚು ಮಾಡುತ್ತಿರುವುದು ಜಿಡಿಪಿಯ ಶೇ.1 ಮೊತ್ತವನ್ನು ಮಾತ್ರ. ಇದನ್ನು ಶೇ.2.5ಕ್ಕೇರಿಸುವುದು ಸೇರಿದಂತೆ ಜನರ ಸ್ವಾಸ್ಥ್ಯದ ಕಾಳಜಿ ವಹಿಸುವ ಅನೇಕ ಅಂಶಗಳು ಆರೋಗ್ಯ ನೀತಿಯಲ್ಲಿವೆ.  ಆರೋಗ್ಯವನ್ನೂ ಮೂಲಭೂತ ಹಕ್ಕು ಎಂದು ಪರಿಗಣಿಸುವ ಶಿಫಾರಸು ಈ ಪೈಕಿ ಅತ್ಯಂತ ಮುಖ್ಯ. ಇದನ್ನು ಖಾತರಿಪಡಿಸುವ ಸಲುಧಿವಾಗಿ ರಾಷ್ಟ್ರೀಯ ಆರೋಗ್ಯ ಹಕ್ಕು ಕಾಯಿದೆ ರಚನೆಯಾಗಲಿದೆ. ಈ ಕಾಯಿದೆ

ಯನ್ನು ಉಲ್ಲಂ ಸುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಹೊಸ ರಾಷ್ಟ್ರೀಯ ಆರೋಗ್ಯ ನೀತಿಯನ್ನು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಜಾರಿಗೆ ತಂದಿದ್ದ ಒಬಾಮ ಕೇರ್‌ ಜತೆಗೆ ಹೋಲಿಸಲಾಗುತ್ತಿದೆ. ಎರಡು ನೀತಿಗಳ ಉದ್ದೇಶ ಒಂದೇ ಆಗಿದ್ದರೂ ಪರಿಸ್ಥಿತಿ ಮತ್ತು ಸಂದರ್ಭ ಭಿನ್ನವಾಗಿವೆ.  

 ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆಯನ್ನು ಒದಗಿಸಲು ಖಾಸಗಿ ಸಹಭಾಗಿತ್ವವನ್ನು ಸ್ವೀಕರಿಸುವ ಪ್ರಸ್ತಾವವೂ ಇದರಲ್ಲಿದೆ. ಸರಕಾರ ಆರೋಗ್ಯ ಕ್ಷೇತ್ರಕ್ಕೆ ಎಷ್ಟೇ ಖರ್ಚು ಮಾಡುತ್ತಿದ್ದರೂ ಜನರಿಗೆ ಈಗಲೂ ವಿಶ್ವಾಸವಿರುವುದು ಖಾಸಗಿ ಆಸ್ಪತ್ರೆಗಳ ಮೇಲೆ. ಸರಕಾರಿ ಆಸ್ಪತ್ರೆಗಳಲ್ಲಿ ಸಿಗುವುದು ಕಳಪೆ ಸೇವೆ ಮತ್ತು ಗುಣಮಟ್ಟವಿಲ್ಲದ ಔಷಧಿ ಎನ್ನುವ ಸಾರ್ವತ್ರಿಕ ಭಾವನೆ ಇದಕ್ಕೆ ಕಾರಣ. ಹೀಗಾಗಿ ಆರೋಗ್ಯ ಸೇವೆಯಲ್ಲಿ ಖಾಸಗಿ ಕ್ಷೇತ್ರದ ಸಹಭಾಗಿತ್ವ ಉತ್ತಮ ನಿರ್ಧಾರ. ಔಷಧ ಮತ್ತು ವೈದ್ಯಕೀಯ ಪರೀಕ್ಷೆಗಳು ಉಚಿತವಾಗಿ ಲಭ್ಯವಾಗುವಂತೆ ಮಾಡುವ ಪ್ರಸ್ತಾವವನ್ನು ಆರೋಗ್ಯ ನೀತಿ ಒಳಗೊಂಡಿದೆ. ಜೆನೆರಿಕ್‌ ಔಷಧಿ ಕೇಂದ್ರಗಳ ಸ್ಥಾಪನೆ, ಸ್ಟೆಂಟ್‌ ಬೆಲೆ ಇಳಿಕೆಯಂತಹ ಕ್ರಾಂತಿಕಾರಿ ನಿರ್ಧಾರಗಳನ್ನು ಕೇಂದ್ರ ಸರಕಾರ ಕೈಗೊಂಡಿದೆ. ಆರೋಗ್ಯ ನೀತಿ ಜಾರಿಯಾದ ಬಳಿಕ ಇಂತಹ ಜನೋಪಯೋಗಿ ಕಾರ್ಯಕ್ರಮಗಳಿಗೆ ಇನ್ನಷ್ಟು ಉತ್ತೇಜನ ಸಿಗಬೇಕು. ಸರಕಾರಿ ಆಸ್ಪತ್ರೆಗಳು ಉತ್ತಮ ಆರೋಗ್ಯ ಸೇವೆ ನೀಡಲು ವಿಫ‌ಲವಾಗಿರುವುದರಿಂದ ಜನರು ದುಬಾರಿ ಖರ್ಚಿನಲ್ಲಿ ಖಾಸಗಿ ಆಸ್ಪತ್ರೆಗಳ ಸೇವೆಯನ್ನು ಪಡೆದುಕೊಳ್ಳುತ್ತಾರೆ. ಇದರಿಂದಾಗಿ ಪ್ರತಿ ವರ್ಷ ಸುಮಾರು 6 ಕೋಟಿ ಜನರು ಬಡತನಕ್ಕೆ ದೂಡಲ್ಪಡುತ್ತಾರೆ ಎಂದು ಅಂಕಿಅಂಶಗಳು ತಿಳಿಸುತ್ತಿವೆ. ಸರಕಾರ ಈ ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕು. 

ಆರೋಗ್ಯ ನೀತಿಯಡಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸರಕಾರ ಸಾರ್ವಜನಿಕ ತೆರಿಗೆ ಹಣವನ್ನೇ ಅವಲಂಬಿಸಲಿದೆ. ಹೀಗಾಗಿ ಆರೋಗ್ಯ ಕಾರ್ಯಕ್ರಮಗಳಿಗೆ ಹಣಕಾಸಿನ ಕೊರತೆ ಎದುರಾಗುವ ಸಾಧ್ಯತೆಯಿದೆ. ಇದನ್ನು ತಪ್ಪಿಸಲು ತಂಬಾಕು, ಮದ್ಯ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕೆಲವು ಆಹಾರ ವಸ್ತುಗಳ ಮೇಲೆ ಮೇಲೆ¤ರಿಗೆ ವಿಧಿಸಿ ಸಂಪನ್ಮೂಲ ಕ್ರೂಢೀಕರಿಸಬಹುದು. ಕೇರಳ ಸರಕಾರ ಕಳೆದ ವರ್ಷ ಜಂಕ್‌ ಫ‌ುಡ್‌ಗಳ ಮೇಲೆ ಕೊಬ್ಬು ತೆರಿಗೆ ವಿಧಿಸಿದ್ದು ಇದಕ್ಕೆ ಮಾದರಿ. ಆರೋಗ್ಯ ವಿಷಯ ರಾಜ್ಯಗಳಿಗೆ ಸಂಬಂಧಪಟ್ಟಿರುವುದರಿಂದ ಇದರ ಅನುಷ್ಠಾನಕ್ಕೆ ರಾಜ್ಯಗಳ ಸಹಭಾಗಿತ್ವ ಅಗತ್ಯವಿದೆ. ರಾಜ್ಯಗಳ ಮನವೊಲಿಸುವ ಕೆಲಸವನ್ನು ಕೇಂದ್ರ ಮಾಡಬೇಕು. ಅಂತೆಯೇ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಇಲಾಖೆಗಳು ಜಾರಿಗೊಳಿಸಿರುವ ವಿವಿಧ ರೀತಿಯ ಆರೋಗ್ಯ ಸಂಬಂಧಿ ಕಾರ್ಯಕ್ರಮಗಳು ಮತ್ತು ಸ್ಕೀಂಗಳು, ಆರೋಗ್ಯ ಸಂಬಂಧಿ  ಸಮಾಜ ಕಲ್ಯಾಣ ಯೋಜನೆಗಳನ್ನೆಲ್ಲ ಒಂದೇ ಘಟಕದಡಿ ತರಬೇಕು. ಆರೋಗ್ಯ ನೀತಿ ಪರಿಣಾಮಕಾರಿಯಾಗಬೇಕಾದರೆ ಎಲ್ಲಕ್ಕಿಂತ ಮೊದಲು ಸಾಕಷ್ಟು ವೈದ್ಯರನ್ನು ಮತ್ತು ಅರೆ ವೈದ್ಯಕೀಯ ಸಿಬಂದಿ ನೇಮಕವಾಗಬೇಕು.

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.