ಪಾಕ್‌ಗೆ ಕಪಾಳಮೋಕ್ಷ


Team Udayavani, Dec 28, 2017, 11:23 AM IST

28-21.jpg

2016ರಲ್ಲಿ ಭಾರತ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ನ ನಂತರವೂ ಪಾಕ್‌ ಸೇನೆ ತನ್ನ ಹಳೆಯ ಚಾಳಿ ಬಿಡಲು ಸಿದ್ಧವಾಗುತ್ತಿಲ್ಲ, ಪದೇ ಪದೆ ಅಪ್ರಚೋದಿತ ದಾಳಿ ನಡೆಸುವುದು ಮತ್ತು ಆತಂಕವಾದಿಗಳನ್ನು ಭಾರತದೊಳಗೆ ನುಸುಳಿಸುವ ಪ್ರಯತ್ನವನ್ನು ಮುಂದುವರಿಸಿಯೇ ಇದೆ.

ಭಾರತೀಯ ಸೈನಿಕರು ಪಾಕ್‌ ಸೇನೆಯ ಪುಂಡಾಟಕ್ಕೆ ಸರಿಯಾಗಿ ಉತ್ತರ ನೀಡಿದ್ದಾರೆ. ಸೋಮವಾರ ರಾತ್ರಿ ಮೂವರು ಪಾಕಿಸ್ತಾನಿ ಸೈನಿಕರನ್ನು ಹೊಡೆದುರುಳಿಸಿದ್ದಾರೆ ನಮ್ಮ ಧೀರ ಯೋಧರು. ಭಾರತವನ್ನು ಅನಗತ್ಯವಾಗಿ ತಡವಿ, ಪೆಟ್ಟು ತಿಂದು ಬೆರಳು ಮಾಡಿ ದೂರುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಪಾಕಿಸ್ತಾನಿ ಸೇನೆ ಈ ಘಟನೆಯನ್ನು “”ಭಾರತದಿಂದ ನಡೆದ ಅಪ್ರಚೋದಿತ ದಾಳಿ, ಕದನ ವಿರಾಮ ಉಲ್ಲಂಘನೆ, ಅಕಾರಣ ಗುಂಡಿನ ದಾಳಿ” ಎಂದು ಕರೆದಿದೆ. ಆದರೆ ಭಾರತ ತಿರುಗೇಟು ನೀಡಿದೆ ಎನ್ನುವುದನ್ನು ಒಪ್ಪಿಕೊಳ್ಳಲು ಮಾತ್ರ ಅದು ತಯ್ನಾರಿಲ್ಲ. ಇದೇ ಡಿಸೆಂಬರ್‌ 23 ರಂದು ರಜೌರಿಯ ನಿಯಂತ್ರಣ ರೇಖೆಯ ಬಳಿ ಯುದ್ಧವಿರಾಮ ಉಲ್ಲಂಘನೆ ಮಾಡಿ ಭಾರತದ ಒಬ್ಬರು ಮೇಜರ್‌ ಸಹಿತ ನಾಲ್ಕು ಸೈನಿಕರ ಹತ್ಯೆ ಮಾಡಿತ್ತು ಪಾಕ್‌. ಆ ಹೇಡಿ ಕೃತ್ಯಕ್ಕೆ ಪ್ರತೀಕಾರ ವಾಗಿಯೇ ಭಾರತ ಈ ದಾಳಿ ನಡೆಸಬೇಕಾಯಿತು. ವಿಶೇಷವೆಂದರೆ ಭಾರತ ಸೇನೆ ಹಿಂದೆಂದಿಗಿಂತಲೂ ಹೆಚ್ಚು ತೀವ್ರವಾಗಿ ಪಾಕ್‌ಗೆ ಪ್ರತ್ಯುತ್ತರ ನೀಡುತ್ತಿದೆ. ಗಡಿ ಭಾಗದಲ್ಲಿ ಅರಾಜಕತೆ ಸೃಷ್ಟಿಸಿದರೆ ತಾನಿನ್ನು ಸಹಿಸುವು ದಕ್ಕೆ ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಭಾರತ ನೀಡಿದೆ. ಇದು ಅನಿವಾರ್ಯವೂ ಸಹ. ಏಕೆಂದರೆ 2016ರ ಸೆಪ್ಟೆಂಬರ್‌ನಲ್ಲಿ ಭಾರತ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ನ ನಂತರವೂ ಪಾಕ್‌ ಸೇನೆ ತನ್ನ ಹಳೆಯ ಚಾಳಿ ಬಿಡಲು ಸಿದ್ಧವಾಗುತ್ತಿಲ್ಲ, ಪದೇ ಪದೆ ಅಪ್ರಚೋದಿತ ದಾಳಿ ನಡೆಸು ವುದು ಮತ್ತು ಆತಂಕವಾದಿ ಗಳನ್ನು ಭಾರತದೊಳಗೆ ನುಸುಳಿಸುವ ಪ್ರಯತ್ನವನ್ನು ಮುಂದುವರಿಸಿಯೇ ಇದೆ. 778 ಕಿಲೋಮೀರ್‌ ಉದ್ದದ ಗಡಿ ರೇಖೆಯಲ್ಲಿ ನಿತ್ಯವೂ ಒಂದಲ್ಲ ಒಂದು ಭಾಗದಲ್ಲಿ ಪಾಕ್‌ನ ದುಷ್ಕೃತ್ಯಗಳು ಇಣುಕು ತ್ತಲೇ ಇರುತ್ತವೆ. 2017ರಲ್ಲೇ ಪಾಕ್‌ ಸೇನೆ 820 ಬಾರಿ ಕದನ ವಿರಾಮ ಉಲ್ಲಂ ಸಿದೆ (2016 ರಲ್ಲಿ ಈ ಸಂಖ್ಯೆ 228ರಷ್ಟಿದ್ದರೆ, ಇದು 2015ರಲ್ಲಿ 152ರಷ್ಟಿತ್ತು)!

ಇತ್ತೀಚೆಗಷ್ಟೇ ಭಾರತೀಯ ಸೈನಿಕರು ಜಮ್ಮು-ಕಾಶ್ಮೀರದ ಝಾಂಗರ್‌ನ ನಿಯಂತ್ರಣ ರೇಖೆ ಬಳಿ ಒಬ್ಬ ಪಾಕ್‌ ಸ್ನೆ„ಪರ್‌ನನ್ನು ಹೊಡೆದುರುಳಿಸಿದ್ದರು. ಇದಾದ ಕೆಲವೇ ಸಮಯದಲ್ಲಿ ನಮ್ಮ ಸೇನೆ, ಬಹಳ ಕಾಲದಿಂದ ತಪ್ಪಿಸಿಕೊಂಡು ಅಡ್ಡಾಡುತ್ತಿದ್ದ ಆತಂಕವಾದಿ ನೂರ್‌ ಮೊಹಮ್ಮದ್‌ ತಾಂತ್ರೆ ಉಫ್ì ಛೋಟಾ ನೂರ್‌ನನ್ನು ಇಹಲೋಕ ತ್ಯಜಿಸುವಂತೆ ಮಾಡಿತು. 

ಛೋಟಾ ನೂರ್‌ ಅಂತ್ಯವಂತೂ ನೇರವಾಗಿ ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಹೃದಯ ಬಡಿತವನ್ನು ಏರುಪೇರು ಮಾಡಿರುವುದು ಸುಳ್ಳಲ್ಲ. ಕಾಶ್ಮೀರ ಕಣಿವೆಯಲ್ಲಿ ಉಗ್ರವಾದವನ್ನು ಚಿಗುರಿಸುವಲ್ಲಿ 4 ಅಡಿಯ ಈ ಉಗ್ರನ ಪ್ರಯತ್ನ ಬಹಳಷ್ಟಿತ್ತು. ಆತ ನಮ್ಮ ಸೇನೆ ಮತ್ತು ಅರೆಸೈನಿಕ ಪಡೆಗಳಿಗೆ ತಲೆನೋವಾಗಿ ಪರಿಣಮಿಸಿದ್ದ.  ನೂರ್‌ನ ಅಂತ್ಯ ಜೈಷ್‌-ಎ-ಮೊಹಮ್ಮದ್‌ ಅನ್ನು ಕಣಿವೆಯಲ್ಲಿ ಗಟ್ಟಿಗೊಳಿಸಬೇಕೆಂಬ ಪಾಕ್‌ ಸೇನೆಯ ಕನಸನ್ನೂ ನುಚ್ಚುನೂರು ಮಾಡಿದೆ. ಹೀಗಾಗಿ ಅದು ಭಾರತೀಯ ಯೋಧರ ಮೇಲೆ ನಡೆಸಿದ ದಾಳಿಯಲ್ಲಿ ನೂರ್‌ ಸಾವಿನ ಪ್ರತೀಕಾರದ ಛಾಯೆಯೂ ಇತ್ತೆನ್ನಬಹುದು. 

ಕಾಕತಾಳೀಯವೆಂದರೆ ಕುಲಭೂಷಣ್‌ ಜಾಧವ್‌ರ ಪತ್ನಿ ಮತ್ತು ತಾಯಿ ಪಾಕಿಸ್ತಾನದಿಂದ ಹಿಂದಿರುಗಿದ ವೇಳೆಯಲ್ಲೇ ಭಾರತ ಸೇನೆ ಪಾಕ್‌ ಸೈನಿಕರನ್ನು ಹೊಡೆದುರುಳಿಸಿರುವುದು. ಇದನ್ನೇ ನೆಪವಾಗಿಟ್ಟುಕೊಂಡ ಪಾಕ್‌ ಸರಕಾರ, “ಒಂದೆಡೆ ನಾವು ಮಾನವೀಯತೆ ಮೆರೆದರೆ, ಇನ್ನೊಂದೆಡೆ ಭಾರತ ಹೇಗೆ ಕೃತಜ್ಞತೆ ಸಲ್ಲಿಸುತ್ತಿದೆಯೋ ನೋಡಿ’ ಎಂಬ ಧಾಟಿಯಲ್ಲಿ ಮಾತನಾಡುತ್ತಿದೆ. ಆದರೆ ತಾವು ಒಬ್ಬ ತಾಯಿ, ಪತ್ನಿ ಮತ್ತು ಮಗನ ನಡುವೆ ಗಾಜಿನ ಗೋಡೆಯನ್ನಿಡುವ ಮೂಲಕ ಕೇವಲ ತನ್ನ ಸಂವೇದನಾಹೀನತೆಯನ್ನಷ್ಟೇ ಅಲ್ಲ, ಬದಲಾಗಿ ತನ್ನ ನಿಜ ಮುಖವನ್ನೂ ಅನಾವರಣಗೊಳಿಸಿಕೊಂಡಿದ್ದೇವೆ ಎನ್ನುವುದು ಪಾಕ್‌ ಆಡಳಿತಕ್ಕೆ-ಸೇನೆಗೆ ಅರ್ಥವಾಗುತ್ತಿಲ್ಲ. 

ಪಾಕ್‌ ಹೇಳುವುದು ಒಂದು ಮಾಡುವುದು ಮತ್ತೂಂದು ಎನ್ನುವುದು ಈ ಎಲ್ಲಾ ಘಟನೆಗಳಿಂದ ಮತ್ತೂಮ್ಮೆ ರುಜುವಾತಾಗಿದೆ. ಪಾಕ್‌ ಭಾರತದತ್ತ ಈ ಪರಿ ಬೆಂಕಿ ಉಗುಳುತ್ತಿರುವುದನ್ನು ನೋಡಿದಾಗ, ಆರುತ್ತಿರುವ ದೀಪ ಕೊನೆಗಾಲದಲ್ಲಿ ಹೊತ್ತಿ ಉರಿಯುವುದು ನೆನಪಾಗುತ್ತಿದೆಯಷ್ಟೆ!

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.