ಮಹದಾಯಿ ವಿವಾದ ಶಾಶ್ವತ ಪರಿಹಾರ ಮರೀಚಿಕೆಯೇ? 


Team Udayavani, Dec 29, 2017, 6:00 AM IST

Mahadayi–800-258.jpg

ಮಹದಾಯಿ ನೀರಿಗಾಗಿ ಉತ್ತರ ಕರ್ನಾಟಕದ ಜನರು ಸುಮಾರು 900 ದಿನಗಳಿಂದ ಅವಿರತವಾಗಿ ನಡೆಸುತ್ತಿರುವ ಹೋರಾಟದ ಕಾವು ಮತ್ತೂಮ್ಮೆ ತೀವ್ರಗೊಂಡಿದೆ. ಈ ಭಾಗದ ಜನರು ನೀರಿಗಾಗಿ ನಿರ್ಣಾಯಕ ಹೋರಾಟ ಕೈಗೊಂಡಿದ್ದರೆ ಇತ್ತ ರಾಜ್ಯದ ಮೂರು ರಾಜಕೀಯ ಪಕ್ಷಗಳು ಈ ಸಂದಿಗ್ಧ ಪರಿಸ್ಥಿತಿಯಲ್ಲೂ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ಹಾಕುತ್ತಿರುವುದನ್ನು ನೋಡುವಾಗ ಖೇದವಾಗುತ್ತದೆ. 

ಮೂರು ವರ್ಷದ ಹಿಂದೆ ತೀವ್ರಗೊಂಡು ಬಳಿಕ ತುಸು ತಣ್ಣಗಾಗಿ ಬೂದಿ ಮುಚ್ಚಿದ್ದ ಕೆಂಡದಂತಿದ್ದ ಹೋರಾಟ ಮತ್ತೆ ಭುಗಿಲೇಳುವಂತೆ ಮಾಡಿದ್ದು ಬಿಜೆಪಿ ನಾಯಕ ಯಡಿಯೂರಪ್ಪ. ಗೋವಾದ ಮುಖ್ಯಮಂತ್ರಿಯ ಮನವೊಲಿಸಿ ವಿವಾದ ವನ್ನು ಸೌಹಾರ್ದಯುತವಾಗಿ ಬಗೆಹರಿಸಿ ಉತ್ತರ ಕರ್ನಾಟಕಕ್ಕೆ ನೀರು ಹರಿಸುವ ಅವರ ಉದ್ದೇಶ ಚೆನ್ನಾಗಿದ್ದರೂ ಎಲ್ಲವೂ ಅವರಂದುಕೊಂಡಂತೆ ನಡೆಯದೇ ಹೋದದ್ದು ಅವರದ್ದು ಮಾತ್ರವಲ್ಲದೆ ಉತ್ತರ ಕರ್ನಾಟಕದ ಜನರ ದುರಾದೃಷ್ಟ. ಒಂದು ವೇಳೆ ಪಾರಿಕರ್‌ ಪತ್ರದಲ್ಲಿ ನೀಡಿದ ಭರವಸೆಯಂತೆ ಕನಿಷ್ಠ ಕುಡಿಯುವ ನೀರು ಹರಿಸುವ ಉದಾರತೆ ತೋರಿದ್ದರೆ ಆ ಮಟ್ಟಿಗೆ ವಿವಾದ ಬಗೆಹರಿಯುತ್ತಿತ್ತು. ಆದರೆ ಇಷ್ಟು ಸುಲಭವಾಗಿ ಅದೂ ಬಿಜೆಪಿಯಿಂದಾಗಿ ವಿವಾದ ಬಗೆಹರಿದರೆ ತನ್ನ ಮತ ಪೆಟ್ಟಿಗೆಗೆ ಹೊಡೆತ ಬೀಳುತ್ತದೆ ಎಂದು ಭಾವಿಸಿದ ಕಾಂಗ್ರೆಸ್‌ ಸರಕಾರ ರಾಜಕೀಯದಾಟ ಆಡಲು ಶುರು ಮಾಡಿದ ಬಳಿಕ ವಿವಾದ ಇನ್ನಷ್ಟು ಜಟಿಲವಾಗಿದೆ. 

ವಿವಾದದಲ್ಲಿ ತನ್ನದೂ ಪಾಲಿರಲಿ ಎಂದು ಜೆಡಿಎಸ್‌ ಕೂಡ ಆಖಾಡಕ್ಕಿಳಿದಿದ್ದು ಒಟ್ಟಾರೆಯಾಗಿ ನೀರಿಗಿಂತಲೂ ರಾಜಕೀಯ ಹೋರಾಟವೇ ಪ್ರಾಮುಖ್ಯತೆ ಪಡೆದುಕೊಂಡಿದೆ.  ಜಲ ವಿವಾದ ಇರುವ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳ ಸರಕಾರ ಇದ್ದರೆ ವಿವಾದ ಅಷ್ಟು ಸುಲಭವಾಗಿ ಬಗೆಹರಿಯುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗೆಂದು ಒಂದೇ ಪಕ್ಷದ ಸರಕಾರ ಇದ್ದಾಗಲೂ ವಿವಾದ ಬಗೆಹರಿದಿಲ್ಲ. ಕಾವೇರಿ, ಕೃಷ್ಣಾ, ಸೇರಿದಂತೆ ಹಲವು ಜಲ ವಿವಾದಗಳು ವರ್ಷಾನುಕಾಲ ಜೀವಂತವಾಗಿ ಉಳಿದಿವೆ. ಜಲ ವಿವಾದದಲ್ಲಿ ಕರ್ನಾಟಕದ ಪಾಡು ಬಹಳ ಶೋಚನೀಯ. ಒಂದೆಡೆ ಮಹದಾಯಿ ಇನ್ನೊಂದೆಡೆ ಕಾವೇರಿ ಹೀಗೆ ಎರಡೂ ಕಡೆಯಿಂದ ರಾಜ್ಯ ನಿರಂತರವಾಗಿ ಹೊಡೆತ ತಿನ್ನುತ್ತಾ ಇದೆ. ನ್ಯಾಯಾಧಿಕರಣಗಳ ರಚನೆಯಾಗಿದ್ದರೂ ಯಾವ ವಿವಾ ದವೂ ಬಗೆಹರಿದಿಲ್ಲ. 

ಮಹದಾಯಿಗಾಗಿ ರಚನೆ ಯಾಗಿರುವ ನ್ಯಾಯಾಧಿಕರಣ ಕಳೆದ ವರ್ಷ ನೀಡಿದ ತೀರ್ಪು ಕರ್ನಾಟಕದ ಎಲ್ಲ ಬೇಡಿಕೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಹೀಗಾಗಿ ನ್ಯಾಯಾಧಿಕರ ಣದಿಂದ ಹೆಚ್ಚಿನ ಪ್ರಯೋಜನವಾದೀತು ಎಂದು ನಿರೀಕ್ಷಿಸುವಂತಿಲ್ಲ.  ಮಾತುಕತೆಯಿಂದ‌ ವಿವಾದಗಳು ಬಗೆಹರಿಯಬೇಕೆನ್ನುವುದು ಎಲ್ಲರ ಅಪೇಕ್ಷೆ. ಆದರೆ ರಾಜಕೀಯದಿಂದಾಗಿ ಇಂತಹ ವಾತಾವರಣ ಮೂಡುತ್ತಿಲ್ಲ.  ಮಹದಾಯಿ ವಿಚಾರದಲ್ಲಿ ಪಾರಿಕರ್‌ಗೆ ಕುಡಿಯುವ ನೀರು ನೀಡಲು ಮನಸ್ಸಿತ್ತು. ಆದರೆ ಅಲ್ಲಿ ಅವರ ಸರಕಾರಕ್ಕೆ ಬಹುಮತವಿಲ್ಲ. 

ಒಂದು ವೇಳೆ ಮಹದಾಯಿ ನೀರು ಕರ್ನಾಟಕಕ್ಕೆ ನೀಡಿದರೆ ಸರಕಾರ ಬೀಳುವ ಭೀತಿಯಿದೆ. ಹೀಗಾಗಿ ಪತ್ರ ಬರೆದ ಮರುದಿನವೇ ಅವರು ಉಲ್ಟಾ ಹೊಡೆದರು. ಅಲ್ಲಿನ ನೀರಾವರಿ ಸಚಿವರಂತೂ ಒಂದು ಹನಿ ನೀರು ಕೊಡುವುದಿಲ್ಲ ಎಂದು ಹೇಳಿ ಯಾಗಿದೆ. ಆ ರಾಜ್ಯದ ಕಾಂಗ್ರೆಸ್‌ ಪಕ್ಷವೂ ನೀರು ಬಿಟ್ಟರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯಿತ್ತಿದೆ. ಇತ್ತ ನಮ್ಮಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಮಹಾದಾಯಿ ನೀರು ತರಬೇಕೆಂಬ ಮನಸ್ಸೇನೋ ಇದೆ. ಆದರೆ ಅದರಿಂದ ಇನ್ನೊಬ್ಬರಿಗೆ ಲಾಭವಾಗಬಾರದು ಎಂಬ ಸ್ವಾರ್ಥವೂ ಇದೆ. ಗೋವಾದ ಕಾಂಗ್ರೆಸ್‌ ನಾಯಕರ ಮನವೊಲಿಸುವ ಪ್ರಯತ್ನ ರಾಜ್ಯದ ಕಾಂಗ್ರೆಸ್‌ ನಾಯಕರು ಮಾಡಿದ್ದರೆ ಕುಡಿಯುವ ನೀರಾದರೂ ಸಿಗುತ್ತಿತ್ತು. 

ಆದರೆ ಕಾಂಗ್ರೆಸ್‌ ಆ ಪ್ರಯತ್ನ ಮಾಡದೆ ಬಿಜೆಪಿಯನ್ನು ದೂಷಿಸುವುದರಲ್ಲೇ ಕಾಲಹರಣ ಮಾಡುತ್ತಿದೆ. ಇನ್ನು ಉಳಿದಿರುವುದು ಪ್ರಧಾನಿ ಮಧ್ಯಸ್ಥಿಕೆ ವಹಿಸುವುದು. ಸದ್ಯಕ್ಕೆ ಕಾಂಗ್ರೆಸಿನ ಬೇಡಿಕೆಯೂ ಇದೇ ಆಗಿದೆ. ಆದರೆ ಮೋದಿಯೇಕೋ ಈ ವಿಚಾರದಲ್ಲಿ ದಿವ್ಯಮೌನ ವಹಿಸಿದ್ದಾರೆ. ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ಜತೆಯಾಗಿ ಬನ್ನಿ ಎಂದು ಹಿಂದೊಮ್ಮೆ ಅವರು ಹೇಳಿದ್ದರೂ ಅದಕ್ಕೆ ಕಾಲಕೂಡಿ ಬಂದಿಲ್ಲ. ಹಾಗೊಂದು ವೇಳೆ ಪ್ರಧಾನಿ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದರೂ ತನ್ನದೇ ಪಕ್ಷದ ಅಧಿಕಾರವಿರುವ ಎರಡು ರಾಜ್ಯಗಳ ಹಿತಾಸಕ್ತಿ ಬಲಿಗೊಟ್ಟು ಅವರು ಕರ್ನಾಟಕಕ್ಕೆ ಒಳಿತು ಮಾಡುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವೇ? ಒಂದು ವೇಳೆ ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ತಾತ್ಕಾಲಿಕ ಸಂಧಾನ ವ್ಯವಸ್ಥೆ ಮಾಡಿದರೂ ಅದರಿಂದ ಹೆಚ್ಚಿನ ಪ್ರಯೋಜನವೇನೂ ಆಗದು. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ಪ್ರಯತ್ನಿಸುವುದೇ ಬುದ್ಧಿವಂತಿಕೆಯ ನಡೆ. ಸದ್ಯಕ್ಕೆ ಅದು ಮರೀಚಿಕೆಯಾಗಿರುವಂತೆ ಕಾಣಿಸುತ್ತದೆ. 

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.