ಕುಟಿಲ ಬುದ್ಧಿಯ ಪಾಕ್‌


Team Udayavani, Feb 13, 2018, 11:05 AM IST

pak.jpg

ಜಮ್ಮುವಿನ ಸಂಜ್ವಾನ್‌ ಸೇನಾ ಶಿಬಿರದ ಮೇಲೆ ಪಾಕಿಸ್ಥಾನಿ ಉಗ್ರರು ದಾಳಿ ಮಾಡಿ ಐವರು ಸೈನಿಕರು ಹಾಗೂ ಓರ್ವ ನಾಗರಿಕನನ್ನು ಕೊಂದಿರುವ ಘಟನೆ ಮತ್ತೂಮ್ಮೆ ನಮ್ಮ ಗುಪ್ತಚರ ಪಡೆಯ ವೈಫ‌ಲ್ಯವನ್ನು ಜಗಜ್ಜಾಹೀರುಗೊಳಿಸಿದೆ. ಸಂಸತ್‌ ಮೇಲೆ ದಾಳಿ ಮಾಡಿದ ಪ್ರಕರಣದ ಉಗ್ರ ಅಫ‌jಲ್‌ ಗುರುವನ್ನು ನೇಣಿಗೇರಿಸಿದ ದಿನವಾದ ಫೆ. 9ರಂದೇ ಸಂಜ್ವಾನ್‌ ನೆಲೆಯ ಮೇಲೆ ಉಗ್ರರು ಎರಗಿದ್ದಾರೆ.

ಫೆ.9ರಂದು ಈ ಮಾದರಿಯ ದಾಳಿಯಾಗಬಹುದು ಎಂಬ ಸಾಮಾನ್ಯ ಮುನ್ನೆಚ್ಚರಿಕೆಯನ್ನು ನೀಡಿದ್ದು ಬಿಟ್ಟರೆ ಗುಪ್ತಚರ ಪಡೆ ನಿರ್ದಿಷ್ಟವಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ ಎನ್ನಲಾಗುತ್ತಿದೆ. ಗುಪ್ತಚರ ಪಡೆ ಮತ್ತು ಭದ್ರತಾ ಪಡೆಯ ಇಂತಹ ವೈಫ‌ಲ್ಯಗಳಿಂದಲೇ ಉಗ್ರರು ಪದೇ ಪದೆ ದಾಳಿ ಮಾಡುತ್ತಿದ್ದಾರೆ. ಪಠಾಣ್‌ಕೋಟ್‌ ಹಾಗೂ ಉರಿಯ ಬಳಿಕ ಸೇನಾ ನೆಲೆಯ ಮೇಲೆ ನಡೆದಿರುವ ದೊಡ್ಡ ದಾಳಿಯಿದು. ಅಜರ್‌ ಮೆಹಮೂದ್‌ ನೇತೃತ್ವದ ಜೈಶ್‌-ಎ-ಮೊಹಮ್ಮದ್‌ ಸಂಘಟನೆ ಯಾವುದೇ ಅಂಜಿಕೆಯಿಲ್ಲದೆ ದಾಳಿ ತಾನೇ ಮಾಡಿದ್ದೇನೆ ಎಂದು ಹೇಳಿಕೊಂಡಿದೆ. ಇಷ್ಟು ಮಾತ್ರವಲ್ಲದೆ ಇತ್ತೀಚೆಗಿನ ದಿನಗಳಲ್ಲಿ ಪಾಕ್‌ ಸೈನಿಕರ ಗಡಿ ತಂಟೆಯೂ ಅತಿ ಎನಿಸುವಷ್ಟು ಹೆಚ್ಚಾಗಿದೆ. ಕಳೆದ ವರ್ಷ 900ಕ್ಕೂ ಹೆಚ್ಚು ಸಲ ಕದನ ವಿರಾಮ ಉಲ್ಲಂಘನೆ ಮಾಡಲಾಗಿತ್ತು. ಈ ವರ್ಷ ಈಗಾಗಲೇ 20 ಯೋಧರು ಮತ್ತು ನಾಗರಿಕರು ಪಾಕಿಸ್ಥಾನದ ಗಡಿಯಾಚೆಗಿನ ಶೆಲ್‌ ದಾಳಿಗೆ ಬಲಿಯಾಗಿದ್ದಾರೆ. ಇಷ್ಟರ ತನಕ ಕಾಶ್ಮೀರದಲ್ಲಿ ಮಾತ್ರ ಉಗ್ರರು ದಾಳಿ ಮಾಡುತ್ತಿದ್ದರು. ಈಗ ದಾಳಿ ನಡೆದಿರುವ ಸಂಜ್ವಾನ್‌ ಇರುವುದು ಜಮ್ಮುವಿನಲ್ಲಿ. ಬಹುತೇಕ ಶಾಂತಿಯ ಪ್ರದೇಶ ಎಂದು ಭಾವಿಸಲ್ಪಟ್ಟಿದ್ದ ಜಮ್ಮುವಿಗೂ ಹಿಂಸಾಚಾರ ಕಾಲಿಟ್ಟಿರುವುದು ಕಳವಳಪಡಬೇಕಾದ ವಿಚಾರ. ಭಾರತದ ಸತತ ಪ್ರಯತ್ನದ ಫ‌ಲವಾಗಿ ಜಾಗತಿಕವಾಗಿ ಒಂಟಿಯಾಗಿದ್ದರೂ ಪಾಕ್‌ ಗಡಿಯಾಚೆಗಿನ ದಾಳಿ ಮತ್ತು ಉಗ್ರರನ್ನು ಛೂ ಬಿಟ್ಟು ಮಾಡುವ ದಾಳಿಗಳನ್ನು ನಿಲ್ಲಿಸಿಲ್ಲ. ಏನೇ ಮಾಡಿದರೂ ಆ ಧೂರ್ತ ರಾಷ್ಟ್ರ ಬುದ್ಧಿ ಕಲಿಯುವುದಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ ಇದೇ ವೇಳೆ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಕಾಶ್ಮೀರದಲ್ಲಿ ರಕ್ತಪಾತ ನಿಲ್ಲಬೇಕಾದರೆ ಪಾಕಿಸ್ಥಾನದ ಜತೆಗೆ ಮರಳಿ ಮಾತುಕತೆ ಪ್ರಾರಂಭಿಸಬೇಕೆಂದು ಹೇಳಿರುವುದು ವಿವಾದಕ್ಕೀಡಾಗಿದೆ. 

ಪಾಕ್‌ ಜತೆಗೆ ಮಾತುಕತೆ ನಡೆಸಿದ ಕೂಡಲೇ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯಾಗುವುದಿದ್ದರೆ ಆ ಕೆಲಸವನ್ನು ಎಂದೋ ಮಾಡಬಹುದಿತ್ತು. ಆದರೆ ಒಂದೆಡೆ ಶಾಂತಿ ಮಾತುಕತೆ ನಡೆಸುವುದು ಹಾಗೂ ಇನ್ನೊಂದೆಡೆಯಿಂದ ದಾಳಿ ಮಾಡುವ ಕುಟಿಲ ಬುದ್ಧಿಯನ್ನು ಪಾಕ್‌ ತೋರಿಸುತ್ತಿರುವುದರಿಂದ ನರೇಂದ್ರ ಮೋದಿ ನೇತೃತ್ವದ ಸರಕಾರ ಮಾತುಕತೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ. ಮಾತುಕತೆ ನಡೆಯಬೇಕಾದರೆ ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಬೇಕು ಎಂದು ಭಾರತ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಆದರೆ ಇದಕ್ಕೆ ಕ್ಯಾರೇ ಎನ್ನದ ಪಾಕ್‌ ನಿರಂತರವಾಗಿ ಉಗ್ರರನ್ನು ಕಳುಹಿಸುತ್ತಿದೆ. ಅಮೆರಿಕ ಮತ್ತು ವಿಶ್ವಸಂಸ್ಥೆಯ ಒತ್ತಡ ಇರುವ ಹೊರತಾಗಿಯೂ ತನ್ನ ನೆಲದಲ್ಲಿರುವ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಾತುಕತೆ ನಡೆಸಿ ಏನು ಪ್ರಯೋಜನ? 

ಸಂಜ್ವಾನ್‌ ದಾಳಿಯ ಬೆನ್ನಿಗೆ ಪಾಕ್‌ಗೆ ಭಾರತ ಇನ್ನೊಂದು ಸರ್ಜಿಕಲ್‌ ಸ್ಟ್ರೈಕ್‌ ನಡೆಸುವ ಸಾಧ್ಯತೆ ಇದೆ ಎಂಬ ಭೀತಿ ಆವರಿಸಿಕೊಂಡಿದೆ. ಹೀಗಾಗಿಯೇ ಅದು ಇಂದು ಮತ್ತೂಮ್ಮೆ ಸರ್ಜಿಕಲ್‌ ಸ್ಟ್ರೈಕ್‌ ನಡೆಸುವ ಸಾಹಸ ಮಾಡಬೇಡಿ ಎಂದು ಎಚ್ಚರಿಸಿದೆ. ಈ ಮೂಲಕ ಹಿಂದೆ ಸರ್ಜಿಕಲ್‌ ಸ್ಟ್ರೈಕ್‌ ನಡೆದಿರುವುದು ನಿಜ ಎನ್ನುವುದನ್ನು ಒಪ್ಪಿಕೊಂಡಿದೆ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಯಾವ ಸುಧಾರಣೆಯೂ ಆಗದೆ ಇರುವುದರಿಂದ ಪಾಕಿಸ್ಥಾನದ ಜತೆಗೆ ಮಾತುಕತೆ ನಡೆಸುವುದರಿಂಧ ಪ್ರಯೋಜನ ಇಲ್ಲ.

ಹಾಗೊಂದು ವೇಳೆ ಮಾತುಕತೆ ನಡೆಸುವ ಪ್ರಯತ್ನಕ್ಕೆ ಮುಂದಾದರೂ ಪಾಕಿಸ್ಥಾನದ ಉಗ್ರ ಸಂಘಟನೆಗಳಿಗೆ ಅದು ಪಥ್ಯವಾಗುವುದಿಲ್ಲ. ಸದ್ಯ ಪಾಕ್‌ ಸರಕಾರ ಭಯೋತ್ಪಾದಕರ ಮರ್ಜಿಯಲ್ಲಿದೆ. ಇಂದಿನ ಸರ್ಜಿಕಲ್‌ ಎಚ್ಚರಿಕೆ ಬಂದಿರುವುದು ಪಾಕ್‌ ಸರಕಾರದಿಂದ ಮಾತ್ರವಲ್ಲ ಜೈಶ್‌ ಸಂಘಟನೆಯಿಂದಲೂ ಎನ್ನುವುದು ಗಮನಾರ್ಹ ಅಂಶ. ಜೈಶ್‌ ನೀಡಿರುವ ಈ ಹೇಳಿಕೆಯನ್ನು ಪಾಕ್‌ ಸರಕಾರ ಕನಿಷ್ಠ ಖಂಡಿಸುವ ಅಥವ ರಾಜತಾಂತ್ರಿಕ ವಿಚಾರಗಳಲ್ಲಿ ಮೂಗುತೂರಿಸಬೇಡಿ ಎಂದು ಹೇಳುವ ದಿಟ್ಟತನವನ್ನೂ ತೋರಿಸಿಲ್ಲ. ಇಂತಹ ಸರಕಾರದ ಜತೆಗೆ ಮಾತುಕತೆ ನಡೆಸುವುದಾದರೂ ಹೇಗೆ? ಸದ್ಯಕ್ಕೆ ಬೇಕಾಗಿರುವುದು ಶಾಂತಿ ಮಂತ್ರವಲ್ಲ, ಏಟಿಗೆ ಎದಿರೇಟು ನೀಡಿ ಬುದ್ಧಿ ಕಲಿಸುವ ಕೆಚ್ಚು.

ಟಾಪ್ ನ್ಯೂಸ್

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

14-editorial

Campaigns: ಪ್ರಚಾರದಲ್ಲಿ ದ್ವೇಷ ಭಾಷಣ: ಸ್ವಯಂ ನಿಯಂತ್ರಣ ಅಗತ್ಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.