ಸರ್ವಾಧಿಕಾರಿ ಕ್ಸಿ, ನೆರೆ ರಾಷ್ಟ್ರಗಳಿಗೆ ಕಳವಳ

Team Udayavani, Mar 13, 2018, 9:05 AM IST

xi.jpg

ಚೀನಾ ಯಾವ ರೀತಿಯಲ್ಲಾದರೂ ತನ್ನ ಮಹತ್ವಾಕಾಂಕ್ಷೆಯನ್ನು ಈಡೇರಿಸಲು ಪ್ರಯತ್ನಿಸ ಲಿರುವುದರಿಂದ ನಾವು ಕಟ್ಟೆಚ್ಚರದಿಂದ ಇರುವ ಅಗತ್ಯವಿದೆ.

ನೆರೆ ದೇಶ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಈಗ ಪರಿಪೂರ್ಣ ಸರ್ವಾಧಿಕಾರಿಯಾಗಿ ಹೊರಹೊಮ್ಮಿದ್ದಾರೆ. ಆ ದೇಶದ ಸಂವಿಧಾನದ ಪ್ರಕಾರ ಒಬ್ಬರಿಗೆ ತಲಾ ಐದು ವರ್ಷಗಳ ಎರಡು ಅವಧಿಗೆ ಮಾತ್ರ ಅಧ್ಯಕ್ಷರಾಗುವ ಅವಕಾಶವಿತ್ತು. ಆದರೆ ಕ್ಸಿ ತಾನು ಬದುಕಿರುವವರೆಗೆ ಅಧ್ಯಕ್ಷ ಹುದ್ದೆಯಲ್ಲಿರುವ ಸಲುವಾಗಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿಕೊಂಡಿದ್ದಾರೆ. ಈ ತಿದ್ದುಪಡಿ ಅಂಗೀಕಾರಗೊಂಡಿರುವುದರಿಂದ ಈಗ ಚೀನಕ್ಕೆ ಕ್ಸಿಯೇ ಎಂಪರರ್‌ ಅಥವಾ ಚಕ್ರವರ್ತಿ. ಚೀನಾದ ಆಡಳಿತ ಸೂತ್ರವನ್ನು ಹಿಡಿದುಕೊಂಡಿರುವ ಕಮ್ಯುನಿಸ್ಟ್‌ ಪಾರ್ಟಿ ಆಫ್ ಚೀನಾದ ಸ್ಥಾಪಕ ಮಾವೋ ಝೆಡಾಂಗ್‌ ಬಳಿಕ ಈ ರೀತಿ ಆಜೀವ ಪರ್ಯಂತ ಅಧ್ಯಕ್ಷರಾದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನೂ ಕ್ಸಿ ಸಂಪಾದಿಸಿಕೊಂಡಿದ್ದಾರೆ. ಕ್ಸಿ ಆರಂಭದಿಂದಲೇ ಸರ್ವಾಧಿಕಾರಿ ಧೋರಣೆಯನ್ನು ಹೊಂದಿದ್ದರು. ಅವರ ಕಾರ್ಯಶೈಲಿಯಿಂದಲೇ ಅದು ಸ್ಪಷ್ಟವಾಗಿತ್ತು. ಹಿಂದಿನ ಐದು ವರ್ಷದ ಅಧಿಕಾರವಧಿಯಲ್ಲಿ ಅವರು ತನಗೆ ಎದುರಾಳಿಗಳೇ ಇಲ್ಲದಂತೆ ಮಾಡಿಕೊಂಡಿದ್ದಾರೆ. ಅಧ್ಯಕ್ಷ ಅವಧಿಯ ವಿಸ್ತರಣೆ ಎನ್ನುವುದು ಅವರ ಸರ್ವಾಧಿಕಾರಿ ಧೋರಣೆಗೆ ಬಿದ್ದಿರುವ ಅಧಿಕೃತ ಮುದ್ರೆಯಷ್ಟೆ.

ಆರ್ಥಿಕ ಅಭಿವೃದ್ಧಿ, ಹೆಚ್ಚುತ್ತಿರುವ ಮಧ್ಯಮ ವರ್ಗ ಮತ್ತು ಚೀನಾ ರಾಷ್ಟ್ರೀಯ ಅಸ್ಮಿತೆ ಎಂಬ ವಿಚಾರಗಳನ್ನು ಮುಂದಿಟ್ಟು ಕೊಂಡು ಕ್ಸಿ ಚೀನೀಯರ ಮನಗೆಲ್ಲುತ್ತಿದ್ದಾರೆ. ಆದರೆ ಇದೇ ವೇಳೆ ಸಾಂವಿಧಾನಿಕ ಸಂಸ್ಥೆಗಳು ಮತ್ತು ಕಾನೂನನ್ನು ವ್ಯವಸ್ಥಿತವಾಗಿ ಮಟ್ಟ ಹಾಕುತ್ತಿದ್ದಾರೆ. ಚೀನಾದಲ್ಲಿ ಹೆಸರಿಗೆ ಮಾತ್ರ ಪ್ರಜಾಪ್ರಭುತ್ವ, ಸಂವಿಧಾನ ಎಂದೆಲ್ಲ ಇದೆ. ಇಡೀ ದೇಶ ನಡೆಯುತ್ತಿರುವುದು ಕಮ್ಯುನಿಸ್ಟ್‌ ಪಾರ್ಟಿ ಆಫ್ ಚೀನಾದ ಇಶಾರೆಯಿಂದ. ಅಲ್ಲಿ ಸರಕಾರ ಮತ್ತು ಕಮ್ಯುನಿಸ್ಟ್‌ ಪಕ್ಷವನ್ನು ಬೇರೆ ಬೇರೆಯಾಗಿ ನೋಡಲು ಸಾಧ್ಯವಿಲ್ಲ. ತಾನು ಬದುಕಿರುವ ತನಕ ಅಧಿಕಾರದ ಪರಮೋತ್ಛ ಪೀಠದಲ್ಲಿ ವಿರಾಜಮಾನನಾಗಿರುವ ಸಲುವಾಗಿ ಕ್ಸಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳನ್ನೆಲ್ಲ ರದ್ದುಪಡಿಸಲಿದ್ದಾರೆ. ಅಂದರೆ ಚೀನಾಕ್ಕೊಬ್ಬರೇ ಆಡಳಿತಗಾರ ಕ್ಸಿ ಆಗಲಿದ್ದಾರೆ. ಅಲ್ಲಿನ ಸಂಸತ್ತು ಇದನ್ನು ಪೂರ್ಣ ಬಹುಮತದಿಂದ ಅಂಗೀಕರಿಸಿರುವುದು ಆ ದೇಶದ ರಾಜಕೀಯ ಅದೆಷ್ಟು ದುರ್ಬಲಗೊಂಡಿದೆ ಎನ್ನುವುದನ್ನು ತಿಳಿಸುತ್ತದೆ. ಕ್ಸಿ ಪ್ರಸ್ತಾವದ ವಿರುದ್ಧ ಬಿದ್ದಿರುವುದು ಬರೀ ಎರಡು ಮತಗಳಾದರೆ ಬೆಂಬಲಿಸಿ ಬಿದ್ದಿರುವುದು 2958 ಮತಗಳು. ಮಾಧ್ಯಮವೂ ಸೇರಿದಂತೆ ಎಲ್ಲವೂ ಸರಕಾರದ ಅಧೀನದಲ್ಲಿದೆ. ಸರಕಾರಿ ಮಾಧ್ಯಮಗಳು ಹೇಳುವುದೇ ಅಲ್ಲಿ ಪರಮ ಸತ್ಯ ಸುದ್ದಿ.

ಹೀಗಾಗಿ ಚೀನಾದೊಳಗೆ ಏನಾಗುತ್ತಿದೆ ಎನ್ನುವುದು ಹೊರಜಗತ್ತಿಗೆ ತಿಳಿಯುವುದೇ ಇಲ್ಲ. ಅಲ್ಲಿ ವ್ಯಾಪಕವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ಕೂಗು ಹಿಂದಿನಿಂದಲೂ ಇದ್ದರೂ ಅದನ್ನು ನೇರವಾಗಿ ಹೇಳುವ ಧೈರ್ಯ ಯಾರಿಗೂ ಇಲ್ಲ. ಪ್ರಸ್ತುತ ಒಂದು ಪಕ್ಷದ ಆಡಳಿತ ಒಬ್ಬ ವ್ಯಕ್ತಿಯ ಆಡಳಿತವಾಗಿ ಬದಲಾಗಿದೆ. ಹಾಗೆಂದು ಇದು ದಿಢೀರ್‌ ಎಂದು ಆಗಿರುವ ಬದಲಾವಣೆಯಲ್ಲ. ಆರಂಭದಿಂದಲೇ ಕ್ಸಿ ಇದಕ್ಕಾಗಿ ವ್ಯವಸ್ಥಿತ ತಯಾರಿ ಮಾಡಿಕೊಂಡಿದ್ದರು. ತನ್ನ ವಿರೋಧಿಗಳನ್ನೆಲ್ಲ ಅವರು ಭ್ರಷ್ಟಾಚಾರ ನಿಗ್ರಹದ ನೆಪದಲ್ಲಿ ಮಟ್ಟ ಹಾಕಿದ್ದಾರೆ. ಹಿಂದಿನ ಅದ್ಯಕ್ಷ ಹು ಜಿಂಟಾವುಗೆ ಹೋಲಿಸಿದರೆ ಕ್ಸಿ ಬಲಿಷ್ಠ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಹು ಜಿಂಟಾವುಗಿಲ್ಲದ ಸಾಮ್ರಾಜ್ಯಶಾಹಿ ಮಹತ್ವಾಕಾಂಕ್ಷೆ ಕ್ಸಿಗಿದೆ. ಕ್ಸಿ ಅವಧಿಯಲ್ಲೇ ಚೀನಾ ಹೆಚ್ಚು ಆಕ್ರಮಣಕಾರಿ ಧೋರಣೆಯನ್ನು ತೋರಿಸುತ್ತಿದೆ. ಹೀಗಾಗಿ ನೆರೆ ದೇಶಗಳು ಕ್ಸಿ ಆಜೀವ ಅಧ್ಯಕ್ಷರಾಗಿರುವುದರಿಂದ ಕಳವಳಕ್ಕೀಡಾಗಿರುವುದು. ಇದರಲ್ಲಿ ಭಾರತವೂ ಸೇರಿದೆ.  ಕ್ಸಿ ಜತೆಗೆ ಭಾರತದ ಸಂಬಂಧ ಹಳಸಿಲ್ಲ ನಿಜ. ಆದರೆ ಚೀನಾ ಪದೇ ಪದೇ ಗಡಿ ತಕರಾರು ಎಬ್ಬಿಸಿ ಕಾಲುಕೆದರಿ ಜಗಳಕ್ಕೆ ಬರುತ್ತಿದೆ. ಇದಕ್ಕಿಂತಲೂ ಮಿಗಿಲಾಗಿ ಪಾಕಿಸ್ಥಾನವನ್ನು ಚೀನಾ ಪರಮಾಪ್ತ ದೇಶವಾಗಿ ಮಾಡಿಕೊಂಡಿದೆ. ಪಾಕ್‌ನಲ್ಲಿ ಚೀನಾದ ಹಲವು ಬೃಹತ್‌ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ. ಇವೆಲ್ಲ ಭಾರತಕ್ಕೆ ಗಂಡಾಂತರಕಾರಿಯಾದ ವಿಚಾರಗಳು. ಜಗತ್ತಿನ ದೊಡ್ಡಣ್ಣನಾಗುವ ಧಾವಂತದಲ್ಲಿರುವ ಚೀನಾಕ್ಕೆ ಏಷ್ಯಾದಲ್ಲಿ ಅಡ್ಡಿಯಾಗಿರುವುದು ಭಾರತವೊಂದೇ. ಕ್ಸಿಯ ಚೀನಾ ಯಾವ ರೀತಿಯಲ್ಲಾದರೂ ತನ್ನ ಮಹತ್ವಾಕಾಂಕ್ಷೆಯನ್ನು ಈಡೇರಿಸಲು ಪ್ರಯತ್ನಿಸಲಿರುವುದರಿಂದ ನಾವು ಕಟ್ಟೆಚ್ಚರದಿಂದ ಇರುವ ಅಗತ್ಯವಿದೆ. ಚೀನಾಕ್ಕೆ ಸಂಬಂಧಿಸಿದಂತೆ ನಮ್ಮ ವಿದೇಶಾಂಗ ನೀತಿಯನ್ನು ಪರಾಮರ್ಶಿಸುವ ಅಗತ್ಯವೂ ಇದೆ.

 ನಾವು ಸ್ನೇಹಿತರನ್ನು ಬದಲಾಯಿಸಿಕೊಳ್ಳಬಹುದು ಆದರೆ ನೆರೆ ಹೊರೆಯವರನ್ನಲ್ಲ ಎಂದು ಮಾಜಿ ಪ್ರಧಾನಿ ಅಟಲ್‌ಜಿಯವರು ಆಗಾಗ ಹೇಳುತ್ತಿದ್ದರು. ನೆರೆಯ ದೇಶಗಳ ಜತೆಗೆ ಹೊಂದಿಕೊಂಡು ಹೋಗುವುದಷ್ಟೇ ನಮಗಿರುವ ಆಯ್ಕೆ. ಈ ಹೊಂದಾಣಿಕೆಯಲ್ಲಿ ರಾಜತಾಂತ್ರಿಕ ಮುತ್ಸದ್ದಿತನವನ್ನು ತೋರಿಸುವ ಹೊಣೆ ನಮ್ಮ ಸರಕಾರದ್ದು.

ಟಾಪ್ ನ್ಯೂಸ್

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.