ದಾಂತೇವಾಡದಲ್ಲಿ ನಕ್ಸಲರ ಆರ್ಭಟ, ಪ್ರತ್ಯುತ್ತರ ಜೋರಾಗಿರಲಿ


Team Udayavani, May 23, 2018, 10:31 AM IST

naxal.jpg

ಛತ್ತೀಸ್‌ಗಢದ ದಾಂತೇವಾಡದಲ್ಲಿ ನಕ್ಸಲರು ಮತ್ತೂಮ್ಮೆ ನಮ್ಮ ಸುರಕ್ಷತಾ ದಳಗಳ ಮೇಲೆ ದಾಳಿ ಮಾಡಿದ್ದಾರೆ. ರಸ್ತೆಯಡಿ ಇಟ್ಟಿದ್ದ ನೆಲಬಾಂಬ್‌ ಸ್ಫೋಟಿಸಿದ್ದರಿಂದ ವಾಹನವೊಂದರಲ್ಲಿದ್ದ 7 ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪೊಲೀಸರು ಮತ್ತು ಭದ್ರತಾ ಪಡೆಯ ಸೈನಿಕರು ರಸ್ತೆ ನಿರ್ಮಾಣ ಕಾರ್ಯಕ್ಕೆ ಭದ್ರತೆ ಒದಗಿಸಲು ಹೊರಟಿದ್ದ ವೇಳೆ ಈ ಸ್ಫೋಟ ನಡೆದಿದೆ. ಈ ದಾಳಿಯಲ್ಲಿ ಭಾರೀ ಪ್ರಮಾಣದ ಸೊ#àಟಕಗಳನ್ನು (ಐಇಡಿ-ಸುಧಾರಿತ ಸ್ಫೋಟಕ ಸಾಧನ) ಬಳಸಲಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಛತ್ತೀಸ್‌ಗಢಕ್ಕೆ ಬರುವ ಸಮಯದಲ್ಲೇ ಈ ಸ್ಫೋಟ ನಡೆದಿದೆ. ಅಲ್ಲದೇ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ರಮಣ್‌ ಸಿಂಗ್‌ ಘಟನೆ ನಡೆದ ಪ್ರದೇಶದಲ್ಲಿ ವಿಕಾಸ ಯಾತ್ರೆ ನಡೆಸುವವರಿದ್ದಾರೆ. ಈ ಕಾರಣಕ್ಕಾಗಿಯೇ ಈ ಘಟನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಕ್ಸಲರು ಕಳುಹಿಸುತ್ತಿರುವ ಎಚ್ಚರಿಕೆಯ ಸಂದೇಶ ಎಂದು ಭಾವಿಸಲಾಗುತ್ತಿದೆ.

ಇತ್ತೀಚೆಗೆ ಮಹಾರಾಷ್ಟ್ರದ ಗಡಿcರೋಲಿ, ಓಡಿಶಾದ ಮಲ್ಕಂಗಿರಿ ಮತ್ತು ಛತ್ತೀಸ್‌ಗಢದ ಬಿಜಾಪುರದಲ್ಲಿ ನಡೆದ ಎನ್‌ಕೌಂಟರ್‌ಗಳಲ್ಲಿ ಮಾವೋಯಿಸ್ಟರಿಗೆ ಭಾರೀ ಆಘಾತವಾಗಿತ್ತು. ಈ ಘಟನೆಗಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎನ್ನುತ್ತಾರೆ ಛತ್ತೀಸ್‌ಗಢದ ಪೊಲೀಸರು. 

ಕೆಲ ಸಮಯದಿಂದ ಛತ್ತೀಸ್‌ಗಢದಲ್ಲಿ ಸಶಸ್ತ್ರ ಪಡೆಗಳು ನಕ್ಸಲೀಯರ ವಿರುದ್ಧ ಮೇಲುಗೈ ಸಾಧಿಸುತ್ತಿರುವುದರಿಂದ ಅವರಿಗೆಲ್ಲ ದುಃಖವಾಗಿದೆ. ಈಗಿನ ವಿಸ್ಫೋಟ ಈ ದುಃಖದ ದುಷ್ಪರಿಣಾಮ ಎನ್ನುತ್ತಾರೆ ಛತ್ತೀಸ್‌ಗಢದ ನಕ್ಸಲ್‌ ವಿರೋಧಿ ಅಭಿಯಾನದ ಉಪ ಮಹಾನಿರೀಕ್ಷಕರು. 

ಆದರೆ ಎರಡು ತಿಂಗಳ ಹಿಂದೆಯೂ ಸುಕಾ¾ದಲ್ಲಿ ಇದೇ ರೀತಿಯ ಸ್ಫೋಟ ನಡೆಸಿದ್ದ ನಕ್ಸಲೀಯರು ನಮ್ಮ ಭದ್ರತಾಪಡೆಗಳ 9 ಸೈನಿಕರ ಪ್ರಾಣ ತೆಗೆದಿದ್ದರು. ಇದನ್ನೆಲ್ಲ ನೋಡಿದಾಗ ನಕ್ಸಲ್‌ ಸಮಸ್ಯೆಯ ಮೇಲೆ ಹಿಡಿತ ಸಾಧಿಸುವುದಕ್ಕೆ ಭದ್ರತಾಪಡೆಗಳಿಗೆ ಇನ್ನೂ ಸಮಯ ಹಿಡಿಯಲಿದೆ ಎನ್ನುವುದು ಸ್ಪಷ್ಟವಾಗುತ್ತದೆ. 

ಆದಾಗ್ಯೂ ಈಗ ದೇಶದಲ್ಲಿ ನಕ್ಸಲ್‌ ಪೀಡಿತ ಪ್ರದೇಶಗಳ ಸಂಖ್ಯೆ ಗಣ ನೀಯವಾಗಿ ತಗ್ಗಿದೆ. ಇದೇ ವರ್ಷದ ಏಪ್ರಿಲ್‌ ತಿಂಗಳಲ್ಲಿ ಕೇಂದ್ರ ಸರ್ಕಾರ ದೇಶದ 44 ಜಿಲ್ಲೆಗಳನ್ನು ನಕ್ಸಲ್‌ ಪೀಡಿತ ಪಟ್ಟಿಯಿಂದ ತೆಗೆದುಹಾಕಿದೆ. ಸದ್ಯಕ್ಕೆ ದೇಶದಲ್ಲಿ ನಕ್ಸಲರು ಮೂವತ್ತು ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದಾರೆ. ದಾಂತೇವಾಡ ಕೂಡ ಇಂಥ ಪ್ರದೇಶಗಳಲ್ಲೊಂದು. ಸೋಲಿನ ಕೊನೆಯ ಹಂತ ತಲುಪಿರುವ ನಕ್ಸಲರು ಪ್ರಬಲ ಪ್ರತಿರೋಧ ಒಡ್ಡುತ್ತಿರುವುದು ಸತ್ಯ.

ಹಾಗೆ ನೋಡಿದರೆ ನಮ್ಮ ಭದ್ರತಾ ಪಡೆಗಳಿಗೆ ಐಇಡಿ ಸ್ಫೋಟಕಗಳೇ ಅತ್ಯಂತ ಅಪಾಯಕಾರಿ ಸವಾಲೊಡ್ಡುತ್ತಿವೆ. ನೆಲಬಾಂಬ್‌ಗಳನ್ನು ಪತ್ತೆ ಹಚ್ಚುವುದೇ ಅವಕ್ಕೆ ದೊಡ್ಡ ಸವಾಲು. ರಸ್ತೆ ನಿರ್ಮಾಣದ ಸಂದರ್ಭದಲ್ಲಿ ನಕ್ಸಲರು ರಸ್ತೆ ಕೆಳಗೆ ಬಾಂಬುಗಳನ್ನಿಡಲು ಯಶಸ್ವಿಯಾಗಿಬಿಡುತ್ತಾರೆ. ಒಂದು ಅಡಿಗೂ ಕೆಳಗೆ ಹುದುಗಿರುವ ವಿಸ್ಫೋಟಕಗಳನ್ನು ಪತ್ತೆಹಚ್ಚುವ ಸಕ್ಷಮ ಉಪಕರಣಗಳು ಭದ್ರತಾಪಡೆಗಳ ಬಳಿ ಇಲ್ಲ ಎಂದು ಒಪ್ಪಿಕೊಳ್ಳುತ್ತಾರೆ ರಮಣ್‌ ಸಿಂಗ್‌. ಇದೇ ಕಾರಣಕ್ಕಾಗಿಯೇ ಭಾರತೀಯ ಸೇನೆ ಐಐಟಿ ಬಾಂಬೆ ಅಭಿವೃದ್ಧಿಪಡಿಸುತ್ತಿರುವ, ಐಇಡಿಗಳನ್ನು ಪತ್ತೆಹಚ್ಚುವ ರೊಬಾಟ್‌ಗಳನ್ನು ಬಳಸಲು ಸಿದ್ಧವಾಗುತ್ತಿದೆ. ಆದರೆ ನಾಲ್ಕು ಚಕ್ರದ ಈ ರೊಬಾಟ್‌ಗಳು ರಣರಂಗಕ್ಕೆ ಇಳಿಯಲು ಸಮಯ ಹಿಡಿಯ ಬಹುದು. ಒಂದು ವೇಳೆ ಈ ವಿಷಯದಲ್ಲಿ ಯಶಸ್ಸು ಸಿಕ್ಕಿತೆಂದರೆ ನಕ್ಸಲರ ಬಹುದೊಡ್ಡ ಯುದ್ಧತಂತ್ರವೇ ಕುಸಿದುಬೀಳುತ್ತದೆ. ದುರಂತವೆಂದರೆ ಆದಿವಾಸಿ ಪ್ರದೇಶಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿಯನ್ನೂ ನಕ್ಸಲರು ಬಯಸುವುದಿಲ್ಲ ಎನ್ನುವುದಕ್ಕೆ ರಸ್ತೆ ನಿರ್ಮಾಣದಂಥ ಕಾರ್ಯಗಳಿಗೆ ಅವು ಮಾಡುತ್ತಿರುವ ಹಾನಿಯೂ ಸಾಕ್ಷಿ. 

ಇದೇನೇ ಇದ್ದರೂ ಪೊಲೀಸರು ಮತ್ತು ಭದ್ರತಾ ಪಡೆಗಳಿಗೆ ಸ್ಥಳೀಯ ಜನರೊಂದಿಗೆ ಇನ್ನೂ ಏಕೆ ತಾಳಮೇಳ ಹೊಂದಾಣಿಕೆಯಾಗುತ್ತಿಲ್ಲ ಎನ್ನು ವುದೂ ಯೋಚಿಸಬೇಕಾದ ವಿಷಯವೇ. ಸ್ಥಳೀಯರ ಪೂರ್ಣ ಸಹಕಾರ ದೊರೆತರೆ ಅಳಿದುಳಿದ ನಕ್ಸಲರ ಬೆನ್ನೆಲುಬೇ ಮುರಿಯುತ್ತದೆ ಎನ್ನುವುದು ಭದ್ರತಾ ಪಡೆಗಳಿಗೆ ಮತ್ತು ಸರ್ಕಾರಕ್ಕೆ ತಿಳಿದಿದೆ. ಹೀಗಾಗಿ ನಕ್ಸಲ್‌ ಪೀಡಿತ ಪ್ರದೇಶದ ಜನರತ್ತ ಹೆಚ್ಚು ಆಪ್ತತೆಯಿಂದ ತಲುಪುವ, ಅವರಿಗೆ ಸುರಕ್ಷತೆ ನೀಡುವ ಕೆಲಸಕ್ಕೆ ಇನ್ನಷ್ಟು ಒತ್ತುಕೊಡಬೇಕಿದೆ. ಎಲ್ಲಿಯವರೆಗೂ ಸರ್ಕಾರ ಸ್ಥಳೀಯ ಜನರ ಭರವಸೆಯನ್ನು ಗೆಲ್ಲುವು ದಿಲ್ಲವೋ ಅಲ್ಲಿಯವರೆಗೂ ಪೂರ್ಣವಾಗಿ ನಕ್ಸಲರನ್ನು ಕಟ್ಟಿಹಾಕುವುದಕ್ಕೆ ಸಾಧ್ಯವಿಲ್ಲ. ಇದರ ಜೊತೆಯಲ್ಲೇ ನಕ್ಸಲರಿಗೆ ಕಳ್ಳಮಾರ್ಗದಿಂದ ಸಿಗುತ್ತಿರುವ ಶಸ್ತ್ರಾಸ್ತ್ರ, ಆಹಾರ ಸಮೇತ ವಿವಿಧ ಬೆಂಬಲ ಮೂಲಕ್ಕೂ ಜೋರಾಗಿ ಪೆಟ್ಟುಕೊಡಬೇಕಾದ ಅಗತ್ಯವಿದೆ.

ಟಾಪ್ ನ್ಯೂಸ್

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

14-editorial

Campaigns: ಪ್ರಚಾರದಲ್ಲಿ ದ್ವೇಷ ಭಾಷಣ: ಸ್ವಯಂ ನಿಯಂತ್ರಣ ಅಗತ್ಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.