ಏಕೆ ನಿಮ್ಮ ಕೈಯಲ್ಲಿ ಹಣ ನಿಲ್ಲೋದಿಲ್ಲ?ಬಾಲ್ಯದಲ್ಲಿದೆ ಈ ಪ‹ಶ್ನೆಗೆ ಉತರ


Team Udayavani, Jul 22, 2018, 10:51 AM IST

lead.jpg

ನಿಮ್ಮ ವಿತ್ತೀಯ ಗುಣದ ಮೂಲವನ್ನು ಗುರುತಿಸಲು ಸಫ‌ಲರಾದಿರಿ ಎಂದರೆ ನಿಮ್ಮ ಹಣಕಾಸು ವರ್ತನೆಯನ್ನು ಬದಲಿಸಿಕೊಳ್ಳಬಲ್ಲಿರಿ. ಆಗ ಮಾತ್ರ “ಯಾಕೋ ಕೈಯಲ್ಲಿ ಹಣವೇ ನಿಲ್ಲುವುದಿಲ್ಲ’ ಎಂಬ ಪ್ರಶ್ನೆಗೆ ಉತ್ತರ ದೊರಕಬಲ್ಲದು. ಸಮಸ್ಯೆಯ ಮೂಲ ಪತ್ತೆಯಾದಾಗ ಮಾತ್ರ ಪರಿಹಾರ ಸಾಧ್ಯವಲ್ಲವೇ? 

“”ತಿಂಗಳಾಂತ್ಯಕ್ಕೆ ಕೈ ಖಾಲಿ ಆಗಿಬಿಡುತ್ತೆ. ಎಷ್ಟೇ ಒದ್ದಾಡಿದರೂ ಹಣ ಉಳಿಸಲು ಆಗ್ತಿಲ್ಲ. ಅದ್ಹೇಗೆ, ಎಲ್ಲಿ ಖರ್ಚಾಗಿ ಹೋಗುತ್ತೋ ಗೊತ್ತಿಲ್ಲ” ಎಂದು ಮಿಸ್ಟರ್‌ “ಎ’ ಗೋಳಾಡುತ್ತಾನೆ. ಸಂಬಳ ಬರುವವರೆಗೂ ಬದುಕು ಸಂಭಾಳಿಸುವುದರಲ್ಲಿ ಅವನಿಗೆ ಹೈರಾಣಾಗಿಹೋಗುತ್ತದೆೆ. ಕೊನೆಗೆ ಆ ಲಕ್ಕಿ ಡೇ ಬರುತ್ತದೆ. “ಟಣ್‌’ ಎಂಬ ಸಂದೇಶ ಮೊಬೈಲ್‌ನಲ್ಲಿ ಮಿಂಚುತ್ತದೆ. “your account has been  created”!! ಸಂಬಳ ಬಂದದ್ದೇ ಮಿಸ್ಟರ್‌ ಎ “ಈ ತಿಂಗಳು ಹಣ ಉಳಿಸುವುದು ಪಕ್ಕಾ’ ಎಂದು ಶಪಥ ಮಾಡುತ್ತಾನೆ. ಆದರೆ ಆಗೋದೇನು? ತಿಂಗಳಾಂತ್ಯಕ್ಕೆ ಮತ್ತೆ ಕೈ ಖಾಲಿ! ಮತ್ತದೇ ಗೋಳಾಟ.
***
ಈಗ ಮೊದಲ ಪ್ರಶ್ನೆ: ನಿಮ್ಮ ಪರಿಸ್ಥಿತಿಯೂ ಮಿಸ್ಟರ್‌ “ಎ’ ನಂತೆ ಇದೆಯೇ? ಹೌದು ಎನ್ನುವುದಾದರೆ ಎರಡನೇ ಪ್ರಶ್ನೆ: “”ನೀವು ಯಾರಿಂದ ಈ ಹಣಕಾಸು ಗುಣವನ್ನು ಬೆಳೆಸಿಕೊಂಡಿದ್ದೀರಿ?” ಎರಡನೇ ಪ್ರಶ್ನೆ ನಿಮ್ಮನ್ನು ತುಸು ತಬ್ಬಿಬ್ಬು ಮಾಡಬಹುದು, ಅದಕ್ಕೆ ಉತ್ತರ ನಿಮಗೆ ತಕ್ಷಣ ತೋಚದೇ ಇರಬಹುದು. ನಾನು ಹೇಳುತ್ತೇನೆ ಕೇಳಿ, ಈ ಹಣಕಾಸು ಗುಣದ ಮೂಲ ಎಲ್ಲಿದೆ ಗೊತ್ತೆ? 

ನಿಮ್ಮ ಬಾಲ್ಯದಲ್ಲಿ!  ಹೌದು, ಇಂದಿನ ನಿಮ್ಮ “ಹಣ ಗುಣ’ ನಿಮ್ಮ ಬಾಲ್ಯದಲ್ಲೇ ರೂಪತಾಳಿರುತ್ತದೆ ಎನ್ನುತ್ತದೆ ಮನಶಾÏಸ್ತ್ರ. 
ಈ ಜಗತ್ತಿಗೆ ಕಾಲಿಟ್ಟಾಗ ನಾವು ಖಾಲಿ ಸ್ಲೇಟ್‌ನಂತೆ ಇರುತ್ತೇವೆ. ಏನು ಮಾಡಬೇಕು, ಹೇಗೆ ಮಾತನಾಡಬೇಕು, ಹೇಗೆ ವಿಚಾರ ಮಾಡಬೇಕು ಎನ್ನುವುದನ್ನೆಲ್ಲ ನಮ್ಮ ಸುತ್ತಮುತ್ತಲಿನ ಪರಿಸರ (ಪೋಷಕರು, ಹಿರಿಯರು, ಗೆಳೆಯರು) ಅದರಲ್ಲಿ ಬರೆಯುತ್ತಾ ಹೋಗುತ್ತದೆ. ಅದರಲ್ಲೂ ಬಹುತೇಕ ಗುಣಗಳನ್ನು ನಮ್ಮ ಅಪ್ಪ-ಅಮ್ಮನೇ ನೇರವಾಗಿ ನಮ್ಮಲ್ಲಿ ಬೆಳೆಸುತ್ತಾರೆ. ಇಲ್ಲವೇ ಅವರನ್ನು ನೋಡಿ ಪರೋಕ್ಷವಾಗಿ ನಾವು ಕಲಿಯುತ್ತೇವೆ. ಬಾಲ್ಯದಲ್ಲಿ ನಮ್ಮ ಮನಸ್ಸಿನಲ್ಲಿ ಶೇಖರಣೆಯಾದ ಸಂದೇಶಗಳು, ಎದುರಾದ ಅಭಾವಗಳು ಅಥವಾ ಘಟನೆಗಳು ನಾವು ಪ್ರೌಢರಾದ ಮೇಲೂ ನಮ್ಮ ಜೀವನವನ್ನು ನಿರ್ದೇಶಿಸುತ್ತಿರುತ್ತವೆ.  ಅಂತೆಯೇ ನಮ್ಮ ಫೈನ್ಯಾನ್ಶಿಯಲ್‌ ಬಿಹೇವಿಯರ್‌(ವಿತ್ತೀಯ ವರ್ತನೆ) ಕೂಡ ಬಾಲ್ಯದಲ್ಲಿನ ಸಂದೇಶಗಳಿಂದಲೋ, ಅಭಾವಗ ಳಿಂದಲೋ ಅಥವಾ ನಿರ್ದೇಶನಗಳಿಂದಲೋ ರೂಪಪಡೆದಿ ರುತ್ತದೆ. ಅವುಗಳನ್ನು ನೀವು ಗುರುತಿಸಲು ಸಫ‌ಲರಾದಿರಿ  ಎಂದರೆ ನಿಮ್ಮ ವಿತ್ತೀಯ ವರ್ತನೆಯನ್ನು ಬದಲಿಸಿಕೊಳ್ಳಬಲ್ಲಿರಿ. ಆಗ ಮಾತ್ರ “ಯಾಕೋ ಕೈಯಲ್ಲಿ ಹಣವೇ ನಿಲ್ಲುವುದಿಲ್ಲ’ ಎಂಬ ಪ್ರಶ್ನೆಗೆ ಉತ್ತರ ದೊರಕಬಲ್ಲದು. ಸಮಸ್ಯೆಯ ಮೂಲ ಪತ್ತೆ ಯಾದಾಗ ಮಾತ್ರ ಪರಿಹಾರ ಸಾಧ್ಯವಲ್ಲವೇ?  ನಿಮ್ಮ ವಿತ್ತೀಯ ವರ್ತನೆಗೆ ಕಾರಣವೇನಿರಬಹುದು, ಅದರ ಪರಿಣಾಮವೇನಾಗುತ್ತದೆ ಮತ್ತು ಪರಿಹಾರವೇನು ಎನ್ನುವುದನ್ನು ನೋಡೋಣ ಬನ್ನಿ…

   ನಿಮ್ಮ ಪೋಷಕರು ನಿಮ್ಮೊಂದಿಗೆ ಹಣದ ಬಗ್ಗೆ ಮಾತನಾಡುತ್ತಿರಲಿಲ್ಲ ಎಂದರೆ…
ಬಹುತೇಕ ಪೋಷಕರು “ಮಕ್ಕಳೊಂದಿಗೆ ಹಣದ ಬಗ್ಗೆ ಮಾತನಾಡುವುದಕ್ಕೇನಿರುತ್ತದೆ? ಅವಕ್ಕೆ ಏನು ತಿಳಿಯುತ್ತದೆ?’ ಎನ್ನುವ ಉಡಾಫೆಯಲ್ಲಿರುತ್ತಾರೆ. ಅವರ ಉಡಾಫೆ ಗುಣದಿಂದಾಗಿ ಮಕ್ಕಳಲ್ಲಿ ಹಣದ ಜವಾಬ್ದಾರಿ ಹುಟ್ಟಿಸುವ, ಅದರ ಬಗ್ಗೆ ಮಾತನಾಡುವ ಅವಕಾಶ ತಪ್ಪಿಹೋಗುತ್ತದೆ.  ಪರಿಣಾಮ: ಹೇಗೆ ಹಣದ ನಿರ್ವಹಣೆ ಮಾಡಬೇಕು ಎಂಬ ಜ್ಞಾನವಿಲ್ಲದ ಕಾರಣ, ದೊಡ್ಡವರಾದ ಮೇಲೆ “ಹೆಚ್ಚು ಖರ್ಚು’ ಮತ್ತು “ಕಡಿಮೆ ಉಳಿತಾಯ’ ಎನ್ನುವ ತೂಗುಯ್ನಾಲೆಯಲ್ಲಿ ನೀವು ಕುಳಿತುಬಿಡುತ್ತೀರಿ. ಹೂಡಿಕೆ ಮಾಡಿ ಹಣವನ್ನು ಹೆಚ್ಚುಮಾಡಿಕೊಳ್ಳುವ ಬಗ್ಗೆ ನೀವು ತಲೆಕೆಡಿಸಿಕೊಳ್ಳುವುದಕ್ಕೂ ಹೋಗುವುದಿಲ್ಲ. ಪರಿಹಾರ: ನಿಮ್ಮ ಸ್ನೇಹಿತರು ಅಥವಾ ಪರಿಚಯಸ್ಥರಲ್ಲಿ ಯಾರಾದರೂ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇದ್ದರೆ ಅವರೊಂದಿಗೆ ಹಣದ ನಿರ್ವಹಣೆಯ ಬಗ್ಗೆ ಮಾತನಾಡಿ. ಅವರು ಹೇಗೆ ಹಣ ಉಳಿಸುತ್ತಾರೆ, ಹೇಗೆ ಖರ್ಚು ಮಾಡುತ್ತಾರೆ ಎನ್ನುವುದನ್ನು ವಿಚಾರಿಸಿ. ಆರ್ಥಿಕ ಸಲಹೆಗಾರರ ನೆರವನ್ನೂ ಪಡೆಯಿರಿ. 

ನಿಮ್ಮ ಪೋಷಕರು ಹಿಡಿತದಲ್ಲಿದ್ದರು ಎಂದರೆ…
ಮಧ್ಯಮ ವರ್ಗದವರು ಅತ್ತ ಹಣದ ಹೊಳೆಯಲ್ಲಿ ತೇಲುವುದೂ ಇಲ್ಲ, ಇತ್ತ ಬಡತನದ ಬಾವಿಯಲ್ಲಿ ಮುಳುಗು
ವುದೂ ಇಲ್ಲ. ಈ ಅತಂತ್ರ ಸ್ಥಿತಿಯಲ್ಲಿ, ಅನಿಶ್ಚಿತತೆಯಲ್ಲಿ ಅವರಿಗೆ ಕುಟುಂಬವನ್ನು ಎತ್ತಿಹಿಡಿಯುವುದೇ ದೊಡ್ಡ ಕೆಲಸವಾಗಿಬಿಡುತ್ತದೆ. ಅವರು ನಿಮ್ಮ ಅಗತ್ಯಗಳ ಬಗ್ಗೆ ಯೋಚಿಸುವುದಕ್ಕೂ ಹೋಗಿ ರುವುದಿಲ್ಲ. ಈ ಅಭಾವ ನಿಮ್ಮನ್ನು ಸದಾ ಕೊರೆಯುತ್ತಿರುತ್ತದೆ. ಇನ್ನೂ ಏನೋ ಬೇಕು…ಕೈಗೆ ನಿಲುಕದ್ದನ್ನು ಪಡೆದು ತೃಪ್ತಿಯಾ ಗಬೇಕು ಎಂದು ಸುಪ್ತಮನಸ್ಸು ಸದಾ ಹಾತೊರೆಯುತ್ತಿರುತ್ತದೆ.  ಪರಿಣಾಮ: ಬಾಲ್ಯದಲ್ಲಿನ ಅಭಾವ/ಕೊರತೆಯನ್ನು ನೀವು ದೊಡ್ಡವರಾದ ಮೇಲೆ ತುಂಬಿಕೊಳ್ಳಲು ಪ್ರಯತ್ನಿಸುತ್ತೀರಿ. ಆ ಕೊರತೆಯ ಕೊರಗನ್ನು ಖರ್ಚು ಮಾಡುವ ಮೂಲಕ ನಿಮ್ಮ ಸುಪ್ತಮನಸ್ಸು ನೀಗಿಸಿಕೊಳ್ಳುತ್ತಿರುತ್ತದೆ. ಅಂದರೆ ಬಾಲ್ಯದಲ್ಲಿನ ಅಭಾವದ ನೋವನ್ನು ಕಡಿಮೆ ಮಾಡಲು ನಿಮ್ಮ ಸುಪ್ತಮನಸ್ಸು “ಅತಿ ಖರ್ಚಿನತ್ತ’ ನಿಮ್ಮನ್ನು ತಳ್ಳುತ್ತದೆ. 
ಪರಿಹಾರ: ನಿಮ್ಮ ಪೋಷಕರು ಯಾಕೆ ಆರ್ಥಿಕವಾಗಿ ಆ ರೀತಿ ವರ್ತಿಸಬೇಕಾಯಿತು ಎನ್ನುವುದನ್ನು ಅವರನ್ನೇ ಕೇಳಿ ತಿಳಿದು ಕೊಳ್ಳಿ. ಆ ವರ್ತನೆಯ ಹಿಂದೆ ನಿರ್ದಿಷ್ಟ ಘಟನೆಗಳು ಕಾರಣ ವಾಗಿರುತ್ತವೆ. ಇದೇ ಸಮಯದಲ್ಲೇ ನೀವು ಖರ್ಚು ಮಾಡು ವುದಕ್ಕಿಂತ ಉಳಿಸುವುದಕ್ಕೆ ಹೆಚ್ಚು ಆದ್ಯತೆ ಕೊಡಲು ಪ್ರಯತ್ನಿಸಿ. “ಉಳಿತಾಯ ಮಾಡುವುದು ಜಿಪುಣತನವಲ್ಲ, ಬುದ್ಧಿವಂತಿಕೆ’ ಎನ್ನುವುದನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಖಾತೆಯಲ್ಲಿ ಹಣ ಬಂದ ತಕ್ಷಣ ಅದು  ಡಿಪಾಸಿಟ್‌ ಆಗಿ ಕಡಿತವಾಗುವಂತೆ ಮಾಡಿಬಿಡಿ. ಏನನ್ನಾದರೂ ಖರೀದಿಸಬೇಕು ಎಂದು ತೀವ್ರ ಬಯಕೆ ಎದುರಾದರೆ ಒಂದೈದು ನಿಮಿಷ ನಿಲ್ಲಿ. ಈ ವಸ್ತು ನನಗೆ ಅಗತ್ಯವೇ ಅಥವಾ ಅಭಾವವನ್ನು ತಣಿಸುವ ಸಾಧನವೇ ಎನ್ನುವ ಪ್ರಶ್ನೆ ಕೇಳಿಕೊಳ್ಳಿ. 

ಪೋಷಕರು ನಿಮಗಾಗಿ ಹೆಚ್ಚು ಖರ್ಚು ಮಾಡುತ್ತಿದ್ದರು ಎಂದರೆ…
ನೀವು ಇಷ್ಟು ಹೊತ್ತು ನಿಮ್ಮ ಬಗ್ಗೆ ಮಾತ್ರ ಯೋಚನೆ ಮಾಡಿದಿರಿ. ಒಮ್ಮೆ ಯೋಚಿಸಿ ನೋಡಿ, ನಿಮ್ಮ ಪೋಷಕರ ಗುಣವೂ ಅವರ ಬಾಲ್ಯ ಕಾಲದ ಅಭಾವ, ಅಭ್ಯಾಸಗಳಿಂದ ರೂಪುಗೊಂಡಿರುತ್ತದೆ ಅಲ್ಲವೇ? ಒಂದು ವೇಳೆ ನಿಮ್ಮ ಪೋಷಕರು ತಮ್ಮ ಬಾಲ್ಯದಲ್ಲಿ ಅಭಾವದ ಬದುಕು ನಡೆಸಿದ್ದರೆ ಅವರು ಅದನ್ನು ನಿಮ್ಮ ಮೇಲೆ ಖರ್ಚು ಮಾಡುವ ಮೂಲಕ ಆ ನೋವನ್ನು “ಕಂಪನ್ಸೇಟ್‌’ ಮಾಡಿಕೊಳ್ಳಲು ಪ್ರಯತ್ನಿಸಿರಬಹುದು. ತಾವು ಅನುಭವಿಸಿದ ಕಷ್ಟವನ್ನು ತಮ್ಮ ಮಕ್ಕಳು ಅನುಭವಿಸದಿರಲಿ ಎಂದು ಕೇಳಿದ್ದನ್ನೆಲ್ಲ ಕೊಡಿಸುತ್ತಿರಬಹುದು. ಈ ಕಾರಣದಿಂದಾಗಿಯೇ ನೀವು “ಸಂಪದ್ಭರಿತ’ ಬಾಲ್ಯವನ್ನು ಕಳೆದಿರಬಹುದು. 
ಪರಿಣಾಮ: ಬಾಲ್ಯದಲ್ಲಿ ನಿಮಗೆ ಬಯಸಿದ್ದೆಲ್ಲ ಸಿಕ್ಕಿದ್ದರಿಂದ ಪ್ರೌಢಾವಸ್ಥೆಯಲ್ಲೂ ನೀವು ಇದನ್ನೇ ನಿರೀಕ್ಷಿಸಲು ಆರಂಭಿಸಬಹುದು. ಆದರೆ ನಿಮ್ಮ “ಅಗತ್ಯ’ಕ್ಕಿಂತಲೂ ನಿಮ್ಮ “ಬಯಕೆ’ಗಳು ಹೆಚ್ಚಾಗಿಬಿಡುತ್ತವೆ. ಆಗ ಸಾಲಕ್ಕೆ (ಕ್ರೆಡಿಟ್‌ ಕಾರ್ಡ್‌ ಉಜ್ಜುವ ಚಟಕ್ಕೆ)ಮೊರೆಹೋಗಬಹುದು.  ಪರಿಹಾರ: ನಿಮ್ಮ ಆದಾಯವೆಷ್ಟಿದೆ, ನಿಮ್ಮ ಖರ್ಚೆಷ್ಟಿದೆ. ದಿನಕ್ಕೆಷ್ಟು ಖರ್ಚು ಮಾಡುತ್ತೀರಿ. ಯಾವ ವಸ್ತುಗಳ ಮೇಲೆ ಮಾಡುತ್ತೀರಿ, ಅಷ್ಟು ಖರ್ಚು ಮಾಡುವ ಅಗತ್ಯವಿದೆಯೇ ಎನ್ನುವುದನ್ನು ಬರೆ ದಿಡಿ. ಕೂಡಲೇ ಫೈನ್ಯಾನ್ಶಿಯಲ್‌ ಅಡ್ವೆ„ಸರ್‌ ಮೊರೆಹೋಗಿ.

ನಿಮ್ಮ ಪೋಷಕರು ರಾಜರಂತೆ ಜೀವನ ನಡೆಸುತ್ತಿದ್ದರೆ…
ಸಮಾಜದಲ್ಲಿ ನಿಮ್ಮ ಪೋಷಕರಿಗೆ ಬಹಳ ಗೌರವವಿತ್ತು (ಸ್ಥಿತಿ ವಂತರು) ಎಂದರೆ ತಮ್ಮ ಇಮೇಜ್‌ ಅನ್ನು ಮೆಂಟೇನ್‌ ಮಾಡು ವುದಕ್ಕಾಗಿ ಅವರು ನಿರಂತರ ಪ್ರಯತ್ನಿಸುತ್ತಿರುತ್ತಾರೆ. ತಮ್ಮ ಸ್ಟೇಟಸ್‌ ಕಾಯ್ದುಕೊಳ್ಳುವುದಕ್ಕೋಸ್ಕರವೇ ಅವರು ಖರ್ಚು ಮಾಡುತ್ತಿರು ತ್ತಾರೆ. ನಿಮ್ಮನ್ನು ತಮ್ಮ “ಸ್ಟೇಟಸ್‌’ ಮೆಂಟೇನ್‌ ಮಾಡುವ ಸಾಧನವಾಗಿ ಬಳಸಿಕೊಳ್ಳುತ್ತಾರೆ.
ಪರಿಣಾಮ: ಬಾಲ್ಯದಲ್ಲಿ ಆ ರೀತಿಯ ಜೀವನಶೈಲಿಯನ್ನು ರೂಢಿಸಿಕೊಂಡಿರುವ ನೀವು, ದೊಡ್ಡವರಾದ ಮೇಲೂ ಅದನ್ನೇ ಮುಂದುವರಿಸುತ್ತೀರಿ. ಆ “ಗೌರವಾನ್ವಿತ’ ಹುದ್ದೆಯನ್ನು ನಿಭಾಯಿಸಲು, ನಿಮ್ಮ ಸ್ನೇಹ ವಲಯದಲ್ಲಿ ಎದ್ದುಕಾಣಲು ಹೆಚ್ಚು ಖರ್ಚು ಮಾಡುತ್ತಾ ಹೋಗುತ್ತೀರಿ…ನಿಮ್ಮ ಗುಣಕ್ಕೆ ತಕ್ಕಂತೆಯೇ ನಿಮ್ಮ ಸ್ನೇಹ ವಲಯ ಸೃಷ್ಟಿಯಾಗುತ್ತದೆ. ನಿಮ್ಮ ಸುತ್ತಲೂ ನಿಮ್ಮಿಂದ ಖರ್ಚು ಮಾಡಿಸುವವರೇ ಜಮೆಯಾಗಲಾರಂಭಿಸುತ್ತಾರೆ.  ಪರಿಹಾರ: ಮೊದಲನೆಯದಾಗಿ “ಹಣ ಖರ್ಚು ಮಾಡದಿದ್ದರೆ ಮರ್ಯಾದೆ ಹೋಗುತ್ತದೆ’ ಅಥವಾ “ಖರ್ಚು ಮಾಡಿದರೇ ಸ್ಟೇಟಸ್‌ ಉಳಿಯುತ್ತದೆ’ ಎನ್ನುವ ಮನೋಭಾವದಿಂದ ಮುಕ್ತ ರಾಗಲು ಪ್ರಯತ್ನಿಸಿ. ನಿಮ್ಮ ವಲಯದಲ್ಲಿರುವವರು ಯಾಕೆ ನಿಮ್ಮ ಜೊತೆಗಿದ್ದಾರೆ ಎನ್ನುವುದನ್ನು ಗಮನಿಸಿ. ಪ್ರತಿ
ಯೊಂದಕ್ಕೂ ನೀವೇ ಹಣ ಕೊಡುತ್ತೀರಾ ಅಥವಾ ಅವರೂ ಖರ್ಚು ಮಾಡುತ್ತಾರಾ ನೋಡಿ. 
   ಉದಾಹರಣೆಗೆ: ರೆಸ್ಟೋರೆಂಟ್‌ಗೆ ಹೋದಾಗ ಪ್ರತಿಬಾರಿ  ನೀವೇ ಬಿಲ್‌ ಪಾವತಿಸುತ್ತೀರಾ? ಹಾಗಿದ್ದರೆ ಮುಂದಿನ ಬಾರಿ ಎಲ್ಲರಿಗೂ ಶೇರ್‌ ಮಾಡುವುದಕ್ಕೆ ಹೇಳಿ. ನಿಮ್ಮ ಸ್ನೇಹಿತರು  ನಿಮ್ಮ ಹಣ ನೋಡಿ ನಿಮ್ಮ ಜೊತೆಗಿದ್ದಾರೆ ಎಂದರೆ ಅಂಥವರ ಸಾಂಗತ್ಯದ ಅಗತ್ಯವೇನಿದೆ? ಕ್ರೆಡಿಟ್‌ ಕಾರ್ಡ್‌ಗೆ ಹಣ ಕಟ್ಟುವುದು ಬಾಕಿ ಇದ್ದರೆ ಅದನ್ನೆಲ್ಲ ಪೂರ್ಣವಾಗಿ ಕಟ್ಟಿ, ನಂತರ ಕಾರ್ಡ್‌ ಕ್ಯಾನ್ಸಲ್‌ ಮಾಡಿಸಿ. 
 ನಿಮ್ಮ ಪೋಷಕರು ದಾನವಂತರಾಗಿದ್ದರೆ…
ಇತರರಿಗೆ ಸಹಾಯ ಮಾಡುವುದರಲ್ಲೇ ಸಾರ್ಥಕ ಭಾವ ಅನುಭವಿಸುವ ಪೋಷಕರು ನಿಮಗಿದ್ದಾರಾ? ದಾನ-
ಧರ್ಮಕ್ಕೇ ಹೆಚ್ಚಿನ ಸಮಯವನ್ನು ಹಣವನ್ನು ವಿನಿಯೋಗಿಸುತ್ತಿದ್ದರಾ/ತ್ತಿದ್ದಾರಾ? 
ಪರಿಣಾಮ: ನಿಮ್ಮ ಪೋಷಕರು ದಾನವಂತರೂ, ದಯಾ ಸಿಂಧುಗಳೂ ಆಗಿರುವುದರಿಂದ ಸಮಾಜದಲ್ಲಿ ಅವರಿಗೆ ಗೌರವಾದರ ತುಸು ಹೆಚ್ಚಾಗೇ ಇರುತ್ತದೆ. ನಿಮ್ಮ ಅಪ್ಪ-ಅಮ್ಮ ದೇವತಾ ಸ್ವರೂಪಿಗಳು ಎಂದು ಜನ ಹೊಗಳುವುದನ್ನು 
ನೀವು ಕೇಳುತ್ತಾ ಬೆಳೆದಿರುತ್ತೀರಿ. ಅವರು ಸಂಪಾದಿಸಿದ 
ಸ್ಥಾನಕ್ಕೆ ಕುತ್ತು ತರಬಾರದು ಎಂಬ ಕಾರಣಕ್ಕೆ ನಿಮ್ಮ ಸುಪ್ತ
ಮನಸ್ಸು ಯಾವಾಗಲೂ ಒದ್ದಾಡುತ್ತಿರುತ್ತದೆ. ಇನ್ನೊಬ್ಬರಿಗೆ ಸಹಾಯ ಮಾಡಲು ನಿಮಗೆ ಅಷ್ಟೊಂದು ಮನಸ್ಸಿಲ್ಲದಿದ್ದರೂ ಅಪ್ಪ-ಅಮ್ಮನೆಡೆಗಿನ ಗೌರವಕ್ಕಾದರೂ ಖರ್ಚು ಮಾಡುವ ಗುಣ ಬೆಳೆಸಿಕೊಳ್ಳುತ್ತೀರಿ. 
ಪರಿಹಾರ: ದಾನ ಮಾಡುವುದು ತಪ್ಪಲ್ಲ. ಮಾಡಬೇಡಿ ಎಂದೂ ಹೇಳುತ್ತಿಲ್ಲ. ಆದರೆ ಅದಕ್ಕೂ ಒಂದು ಮಿತಿಯಿರಬೇಕಲ್ಲವೇ? ವರ್ಷಕ್ಕೆ ಇಂತಿಷ್ಟು ಹಣವನ್ನು ದಾನ-ಧರ್ಮಕ್ಕಾಗಿ ಎತ್ತಿಡಿ. ಯಾವುದೇ ಕಾರಣಕ್ಕೂ ಅದಕ್ಕಿಂತ ಹೆಚ್ಚು ಖರ್ಚು ಬೇಡ. ದಾನ ನಿಮ್ಮನ್ನು ನಡು ದಾರಿಗೆ ತಂದು ನಿಲ್ಲಿಸದಿರಲಿ. 
ಎಲ್ಲಕ್ಕೂ ಮುಖ್ಯವಾಗಿ ಒಂದು ವಿಷಯ ಸದಾ ತಲೆಯಲ್ಲಿರಲಿ. ನಿಮ್ಮ ಈಗಿನ ವಿತ್ತ ವರ್ತನೆ, ನಿಮ್ಮ ಮಕ್ಕಳ ಭವಿಷ್ಯದ ಹಣಕಾಸು ವ್ಯವಹಾರದ ಮೇಲೆ ಖಂಡಿತ ಪ್ರಭಾವ ಬೀರುತ್ತದೆ! ಅವರೂ ಭವಿಷ್ಯದಲ್ಲಿ “ಅದ್ಹೇಗೆ, ಎಲ್ಲಿ ಖರ್ಚಾಗಿ ಹೋಗುತ್ತೋ ಗೊತ್ತಿಲ್ಲ’ ಎಂದು ಒದ್ದಾಡಬಾರದಲ್ಲವೇ?
(ಫ್ಯಾಮ್‌ಫೈ ಜಾಲತಾಣದಲ್ಲಿ ಪ್ರಕಟಿತ ಲೇಖನ)

ಮೆಕೆಂನಿ ಮಹೆರ್‌

ಟಾಪ್ ನ್ಯೂಸ್

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.