ಆರ್ಥಿಕತೆಯಲ್ಲಿ ವಿಫ‌ಲವಾಗಿದ್ದೇವೆ, ಆದರೆ ಗೆಲುವು ನಮ್ಮದೇ!


Team Udayavani, Oct 14, 2018, 6:00 AM IST

25.jpg

ನಾನು ಮತ್ತೂಮ್ಮೆ ಹೇಳುತ್ತಿದ್ದೇನೆ. ಆರ್ಥಿಕತೆ ದುಸ್ಥಿತಿಯಲ್ಲಿದೆ. ವಿತ್ತ ಸಚಿವಾಲಯದಲ್ಲಿರುವವರಿಗೆ ದಿಕ್ಕುತೋಚುತ್ತಿಲ್ಲ. ಆದರೆ ಇದರಿಂದ ತೊಂದರೆ ಅನುಭವಿಸುತ್ತಿರುವವರಲ್ಲೂ ಕೆಲವರು “ಹಿಂದುತ್ವ’ದಿಂದ ಪ್ರೇರಿತರಾದವರು ಇದ್ದಾರೆ. ಉದಾಹರಣೆಗೆ ವ್ಯಾಪಾರಿಗಳು. ಅವರಿಗೆ ಪ್ರಸಕ್ತ ಆರ್ಥಿಕ ಸನ್ನಿವೇಶದಿಂದ ತುಂಬಾ ಪೆಟ್ಟು ಬಿದ್ದಿದೆ. ಆದರೆ ಅದೇ ಜನರೇ ಹಿಂದುತ್ವದ ತಳಪಾಯ. 

2019ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆಯೇ?
ಕಳೆದ ಬಾರಿಯ ಚುನಾವಣೆಯಲ್ಲಿ ನರೇಂದ್ರ ಮೋದಿಯೇ ಮಾಧ್ಯಮಗಳ ಕೇಂದ್ರಬಿಂದುವಾಗಿದ್ದರು ಎನ್ನುವುದು ನಿಜವಾದರೂ, ಆಗ ಇನ್ನೆರಡು ಅಂಶಗಳೂ ಕೆಲಸ ಮಾಡಿದ್ದವು: ಮೊದಲನೆಯದು, ಯುಪಿಎದ ಭ್ರಷ್ಟಾಚಾರ ಮತ್ತು ಎರಡನೆಯದು “ಹಿಂದೂಗಳಿಗೆ ತಮ್ಮದೇ ರಾಷ್ಟ್ರದಲ್ಲಿ ಯಾವುದೇ ಹಕ್ಕಿಲ್ಲ, ಇತರರ ಹಿತಾಸಕ್ತಿಗೆ ಆದ್ಯತೆ ನೀಡಲಾಗುತ್ತಿದೆ’ ಎನ್ನುವ ಭಾವನೆ ಯುವ ಜನರಲ್ಲಿ ಹೆಚ್ಚಾಗಿದ್ದು. “ನಾವೆಲ್ಲರೂ ಜಾತಿ, ಪ್ರದೇಶ ಮತ್ತು ಭಾಷೆಯನ್ನೂ ಮೀರಿ ಎದ್ದುನಿಲ್ಲೋಣ’ ಎನ್ನುವ ಆ ಭಾವನೆಯೇ ಹೆಚ್ಚುವರಿ ಹತ್ತು ಪ್ರತಿಶತ ಮತಗಳಾಗಿ ಬದಲಾಯಿತು. ಆ ಮೂಲಕ ನಮಗೆ ಪೂರ್ಣ ಬಹುಮತ ದೊರೆತಿತ್ತು. ಈಗ ಹಿಂದುತ್ವದ ಭಾವನೆ ಮತ್ತೆ ಹೆಚ್ಚಾಗಿದೆ. ನನ್ನ ಪ್ರಕಾರ ನಾವು ಮತ್ತೆ ಬಹುಮತ ಪಡೆಯುತ್ತೇವೆ.

ಆದರೆ ಆರ್ಥಿಕತೆಯ ವಿಚಾರದಲ್ಲಿ ಮೋದಿ ಸರ್ಕಾರದ ಪ್ರದರ್ಶನ ಹೇಳಿಕೊಳ್ಳುವಂತಿಲ್ಲವಲ್ಲ.. ನರಸಿಂಹರಾವ್‌ರಂತೆ 5 ವರ್ಷದಲ್ಲಿ ಅತ್ಯದ್ಭುತ ಅಭಿವೃದ್ಧಿಯನ್ನು ಹುಟ್ಟುಹಾಕಿದವರು ಯಾರೂ ಇರಲಿಲ್ಲ. ಆದರೂ ಅವರು ಬಹಳ ಹೀನಾಯವಾಗಿ ಸೋತರು. ಎಲ್ಲಾ ಪ್ರಗತಿಪರರೂ ಅಟಲ್‌ ಬಿಹಾರಿ ವಾಜಪೇಯಿಯವರನ್ನು ಪ್ರಗತಿಪರ ಎಂದು ಭಾವಿಸುತ್ತಿದ್ದರು. ಆದರೆ ವಾಜಪೇಯಿ ರಾಮ ಮಂದಿರ ವಿಚಾರಕ್ಕೆ ಮಹತ್ವ ಕೊಡಲಿಲ್ಲ ಮತ್ತು “ಭಾರತ ಪ್ರಕಾಶಿಸುತ್ತಿದೆ’ ಎಂದು ಹೇಳಲಾರಂಭಿಸಿದರು. ಅವರು ಈ ಉತ್ಸಾಹದಲ್ಲೇ ಚುನಾವಣೆಗಳನ್ನು 6 ತಿಂಗಳ ಮೊದಲೇ ಎದುರಿಸಿಬಿಟ್ಟರು. ನಾವು ಸೋತೆವು. ಏಕೆಂದರೆ ನಮ್ಮ ಕಾರ್ಯಕರ್ತರು ಕೆಲಸ ಮಾಡಲಿಲ್ಲ. ಬಿಜೆಪಿ ಎನ್ನುವುದು ಕೇಡರ್‌ ಆಧಾರಿತ ಪಕ್ಷ. ಈ ಕೇಡರ್‌ಗಳು ಮೇಕ್‌ ಇನ್‌ ಇಂಡಿಯಾ ಬಗ್ಗೆ ಕೇರ್‌ ಮಾಡುವುದಿಲ್ಲ. ಅವರಿಗೆ ವಿರಾಟ ಹಿಂದುಸ್ತಾನ ಪರಿಕಲ್ಪನೆ ಮುಖ್ಯ. ಹೀಗಾಗಿ, ಹಿಂದಿನ ಅನುಭವದ ಆಧಾರದಲ್ಲಿ ಹೇಳುವುದಾದರೆ, ಆರ್ಥಿಕ ಅಭಿವೃದ್ಧಿಯು ಚುನಾವಣಾ ಯಶಸ್ಸಿಗೆ ಕಾರಣವಾಗೇ ಆಗುತ್ತದೆ ಎಂದೇನೂ ಅಲ್ಲ. ಮೊರಾರ್ಜಿ ದೇಸಾಯಿ ಕೂಡ ಅದ್ಭುತವಾಗಿ ನಿಯಂತ್ರಿಸಿದ್ದರು, ಆದರೆ ಅವರಿಗೆ ಆರಾಮ ಸಿಗಲಿಲ್ಲ. ನನಗನ್ನಿಸುವುದೇನೆಂದರೆ ಆರ್ಥಿಕತೆ ಸರಿಯಾಗಿಲ್ಲ, ಆದರೆ ಭ್ರಷ್ಟಾಚಾರದ ವಿರುದ್ಧದ ಹೋರಾಟ, ಹಿಂದುತ್ವ ಮತ್ತು ರಾಮಮಂದಿರ ನಿರ್ಮಾಣದ ವಿಷಯಗಳು, ಆರ್ಥಿಕತೆಯ ಬಗ್ಗೆ ಇರುವ ಋಣಾತ್ಮಕ ಭಾವನೆಗಳನ್ನು ಕಂಪನ್ಸೇಟ್‌ ಮಾಡಲಿವೆ. 

ಅಂದರೆ 2019ರ ಚುನಾವಣೆಯನ್ನು “ವಿರಾಟ ಹಿಂದುಸ್ತಾನ’ದ ವಿಷಯವಿಟ್ಟುಕೊಂಡು ಎದುರಿಸಲಾಗುತ್ತದಾ?
ಖಂಡಿತ. ಆದರೆ ನಾವು ಹಾಗೆ ವಿರಾಟ ಹಿಂದುಸ್ತಾನ ಎಂದು ಹೇಳಲು ಬರುವುದಿಲ್ಲ. ಅದರ ಬದಲಾಗಿ ವಿರಾಟ ಹಿಂದುಸ್ತಾನದ ಪ್ರತೀಕಗಳಾದ “ರಾಮ ಮಂದಿರ’ “ಸಮಾನ ನಾಗರಿಕ ಸಂಹಿತೆ’ “ಗೋ ರಕ್ಷಣೆಯ’ ಬಗ್ಗೆ ಮಾತನಾಡುತ್ತೇವೆ. 2019ರ ಚುನಾವಣೆಯನ್ನು ಹಿಂದುತ್ವದ ವಿಷಯಗಳ ಮೇಲೆಯೇ ಎದುರಿಸುತ್ತೇವೆ.  

ಆದರೆ ಹಿಂದುತ್ವದ ವಿಚಾರದಲ್ಲಿ ಬಿಜೆಪಿಯ ಬಳಿ ಹೊಸ ಐಡಿಯಾಗಳೇ ಇಲ್ಲವಲ್ಲ? 
ನಮಗೆ ಹೊಸ ಐಡಿಯಾಗಳು ಬೇಕಿಲ್ಲ. ಹಳೆಯ ಐಡಿಯಾಗಳನ್ನು ನಾವು ಅನುಷ್ಠಾನಕ್ಕೆ ತರುವ ಅಗತ್ಯವಿದೆ. ನಮ್ಮ ಯುವಜನರನ್ನು ಆಕರ್ಷಿಸುವಂಥ ಐದು ಐಡಿಯಾಗಳನ್ನು ನಾನು ನಿಮಗೆ ಹೇಳುತ್ತೇನೆ ಕೇಳಿ. 1) ನಿಮ್ಮ ಗುರುತು/ಐಡೆಂಟಿಟಿ ಯಾವುದು? 2) ಭಾರತದ ನಿಜವಾದ ಇತಿಹಾಸವೇನು? 3) ನಮ್ಮ ಆರ್ಥಿಕ ನೀತಿ ಹೇಗಿರಬೇಕು?(ಆಧ್ಯಾತ್ಮಿಕ ಮೌಲ್ಯಗಳೊಂದಿಗೆ ಸಮನ್ವಯ ವಾಗಿರಬೇಕು) 4) ನಾವೆಲ್ಲರೂ ಏಕೆ ಸಂಸ್ಕೃತ ಕಲಿಯಬೇಕು? ಮತ್ತು 5) ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ನಮ್ಮ ಸಿದ್ಧಾಂತ ಹೇಗಿರಬೇಕು? ಇವೆಲ್ಲ ಮತದಾರರನ್ನು ಪ್ರೇರೇಪಿಸುವಂಥ ಐಡಿಯಾಗಳಲ್ಲ. ದೇಶದಲ್ಲಿ ಗಣನೀಯ ನಿರುದ್ಯೋಗ ಸಮಸ್ಯೆಯಿದೆ.  ನಿಮಗೆ ಅದು ಪ್ರೇರೇಪಿಸದಿರಬಹುದು. ಆದರೆ ಒಮ್ಮೆ ನನ್ನ ಸಭೆಗಳಿಗೆ ಬಂದು ನೋಡಿ- ಅಲ್ಲಿ ಜನರ, ಅದರಲ್ಲೂ ಮುಖ್ಯವಾಗಿ ಯುವತಲೆಮಾರಿನ ಪ್ರತಿಕ್ರಿಯೆ ಹೇಗಿರುತ್ತದೆ ಗೊತ್ತೇ? ಆರ್ಥಿಕವಾಗಿಯಂತೂ ನಾವು ವಿಫ‌ಲರಾಗಿದ್ದೇವೆ. ಈಗಿನ ವಿತ್ತ ಸಚಿವಾಲಯದ ಸಂರಚನೆಯಿದೆಯಲ್ಲ, ಅದರಿಂದ ಒಳ್ಳೆಯ ಫ‌ಲಿತಾಂಶವೇನೂ ಹೊರಬರುವುದಿಲ್ಲ. ಆದರೆ ಈ ವೈಫ‌ಲ್ಯ ಚುನಾವಣೆಯಲ್ಲಿ ನಮ್ಮ ಬಹುಮತ ಪ್ರಾಪ್ತಿಗೆ ಅಡ್ಡಿಯಾಗುವುದಿಲ್ಲ.

ಅಂದರೆ ಡಿಮಾನಿಟೈಸೇಷನ್‌, ಜಿಎಸ್‌ಟಿ ಮತ್ತು ದುಬಾರಿ ಇಂಧನ ಬೆಲೆ ಏರಿಕೆಯಂಥ ವಿಷಯಗಳನ್ನು “ಹಿಂದುತ್ವ’ದಿಂದ ಎದುರಿಸಬಹುದು ಎಂದು ನಿಜಕ್ಕೂ ಭಾವಿಸುತ್ತೀರಾ?
ನಾನು ಮತ್ತೂಮ್ಮೆ ಹೇಳುತ್ತಿದ್ದೇನೆ. ಆರ್ಥಿಕತೆ ದುಸ್ಥಿತಿಯಲ್ಲಿದೆ. ವಿತ್ತ ಸಚಿವಾಲಯದಲ್ಲಿರುವವರಿಗೆ ದಿಕ್ಕುತೋಚುತ್ತಿಲ್ಲ. ಆದರೆ ಇದರಿಂದ ತೊಂದರೆ ಅನುಭವಿಸುತ್ತಿರುವವರಲ್ಲೂ ಕೆಲವರು “ಹಿಂದುತ್ವ’ದಿಂದ ಪ್ರೇರಿತರಾದವರು. ಉದಾಹರಣೆಗೆ ವ್ಯಾಪಾರಿಗಳು. ಅವರಿಗೆ ಪ್ರಸಕ್ತ ಆರ್ಥಿಕ ಸನ್ನಿವೇಶದಿಂದ ತುಂಬಾ ಪೆಟ್ಟು ಬಿದ್ದಿದೆ. ಆದರೆ ಅದೇ ಜನರೇ ಹಿಂದುತ್ವದ ತಳಪಾಯ. 

ಬ್ಯುಸಿನೆಸ್‌ನಲ್ಲಿ ನಷ್ಟ ಅನುಭವಿಸಿರುವ ವ್ಯಾಪಾರಿಗಳು “ಗೋ ರಕ್ಷಣೆ’ಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರಾ?
ನಮ್ಮಲ್ಲಿ ಅನೇಕರು ಅವರಿಗೆ ಪರಿಸ್ಥಿತಿ ಬದಲಾಗುತ್ತದೆ ಎಂದು ಭರವಸೆ ಮೂಡಿಸಿದ್ದೇವೆ. ಆರ್ಥಿಕತೆಯು ಅವರ ಇತರೆ ಭಾವನೆಗಳಿಗೆ(ಧಾರ್ಮಿಕ) ಅಡ್ಡಿಯಾಗುತ್ತಿಲ್ಲ ಎಂದು ನನಗನ್ನಿ ಸುತ್ತಿದೆ. ಕಾಂಗ್ರೆಸ್‌ ಮತ್ತು ಇತರೆ ಎಲ್ಲಾ ತುಂಡು ಪಕ್ಷಗಳಿಗಿಂತಲೂ ನಮ್ಮ ಪಕ್ಷವೇ ಚೆನ್ನಾಗಿದೆ ಎಂದು ಅವರು ಭಾವಿಸುತ್ತಾರೆ.  2019ರ ಚುನಾವಣೆ ದೇಶದ ಆತ್ಮಯುದ್ಧದಂತೆ ಭಾಸವಾಗುತ್ತಿದೆ. ಸೆಕ್ಯುಲರಿಸಂ ಮತ್ತು ಹಿಂದುತ್ವದ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವ ಹೋರಾಟ. ಈ ಮಾತನ್ನು ಒಪ್ಪುತ್ತೀರಾ? ಹೌದು. ಆದರೆ ನಿಮ್ಮ ವ್ಯಾಖ್ಯಾನದಲ್ಲಿ ಒಂದು ಸಮಸ್ಯೆಯಿದೆ. ಇಲ್ಲಿ ಪ್ರಶ್ನೆ ಏನೆಂದರೆ, ನಮಗೆ ಬೇಕಿರುವುದು ದೇಶದ ಬಹುಸಂಖ್ಯಾತರೊಂದಿಗೆ ಸಂಪರ್ಕವಿಟ್ಟುಕೊಳ್ಳುವುದೇ ತಪ್ಪು ಎನ್ನುವಂಥ ಭಾವನೆ ಹೊಂದಿರುವ ಜವಾಹರ್‌ಲಾಲ್‌ ನೆಹರೂ ಮಾದರಿಯ ಜಾತ್ಯತೀತತೆಯೇ? ಅಥವಾ ಹಿಂದುತ್ವದ ಐಡಿಯಾಗಳೊಂದಿಗೆ ರೂಪ ಪಡೆಯುವ ನವ ಕ್ರಿಯಾತ್ಮಕ ಮಾದರಿಯೇ? ಎನ್ನುವುದು. ಜನರಿಗೆ ಹಿಂದುತ್ವ ಎಂದರೆ ಸಬಲೀಕರಣದಂತೆ ಕಾಣಿಸುತ್ತದೆ. ಹಿಂದು ಆದವನು ಎಂದಿಗೂ ಜಾತ್ಯತೀತನಾಗಿರುತ್ತಾನೆ. ಆದರೆ ಇಂದು ಜಾತ್ಯತೀತತೆ ಎನ್ನುವುದರ ಅರ್ಥ ಹೇಗಾಗಿದೆಯೆಂದರೆ, ಅದು “ಇಂಗ್ಲಿಷ್‌ ಶಿಕ್ಷಿತ ಜನರ’ ಅಧಿಪತ್ಯ ಎನ್ನುವಂತಾಗಿದೆ. 

ಮತ್ತೆ ನರೇಂದ್ರ ಮೋದಿಯೇ ಪ್ರಧಾನಿಯಾಗುತ್ತಾರೆ ಅನ್ನಿಸುತ್ತಾ? 
ಮೋದಿ ಯಾರಿಂದಲೂ ಸವಾಲು ಎದುರಿಸುತ್ತಿಲ್ಲ. ಯಾರಿಗಾದರೂ ಪ್ರಧಾನಿ ಅಭ್ಯರ್ಥಿಯಾಗಬೇಕು ಅನ್ನಿಸಿದರೆ ಸಭೆ ನಡೆಸುತ್ತೇವೆ. ಆದರೆ ಅಂಥ ಯಾವ ವ್ಯಕ್ತಿಯೂ ಕಾಣಿಸುತ್ತಿಲ್ಲ. ಮೋದಿಯಲ್ಲಿ ಅನೇಕ ಒಳ್ಳೆಯ ಗುಣಗಳಿವೆ. ಆದರೆ ಇದೇ ಮೆಚ್ಚುಗೆಯನ್ನು ನಾನು ಮೋದಿ ತಂಡಕ್ಕೂ ಅನ್ವಯಿಸುತ್ತೇನೆ ಎಂದರ್ಥವಲ್ಲ. ಮೋದಿ ತಂಡದಲ್ಲಿರುವ ಅನೇಕ ಸದಸ್ಯರು ಅಸಮರ್ಥರು. ಮೋದಿಯೂ ಹೀಗೆಯೇ ಯೋಚಿಸುತ್ತಿರಬಹುದು. ಬಹುಶಃ ಹೊಸ ತಂಡ ಕಟ್ಟುವುದಕ್ಕೆ ಅವರು ಚುನಾವಣೆಯನ್ನು ಎದುರು ನೋಡುತ್ತಿರಬಹುದು.  

ಕಳೆದ ಬಾರಿ ನಾವು ನಿಮ್ಮೊಂದಿಗೆ ಮಾತನಾಡಿದಾಗ “ನನಗೆ ವಿತ್ತ ಸಚಿವನಾಗುವ ಮನಸ್ಸಿದೆ’ ಎಂದಿದ್ದಿರಿ. ಈಗಲೂ ಅದೇ ಮಾತೇ?
ನಿಸ್ಸಂಶಯವಾಗಿ.

ಒಂದು ವೇಳೆ ಬಿಜೆಪಿಗೆ ಪೂರ್ಣ ಬಹುಮತ ಸಿಗದೇ, ಅದು ಇತರೆ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುತ್ತದೆ ಎಂದುಕೊಳ್ಳಿ. ಆಗಲೂ ಮೋದಿಯೇ ಪ್ರಧಾನಿಯಾಗುತ್ತಾರಾ?
ಬಿಜೆಪಿಗೆ ಪೂರ್ಣ ಬಹುಮತ ಬರುತ್ತದೆ ಎಂದು ನನಗೆ ಎಷ್ಟು ಖಚಿತತೆ ಇದೆಯೆಂದರೆ, ನಿಮ್ಮ ಪ್ರಶ್ನೆಗೆ ಉತ್ತರಿಸುವುದಕ್ಕಾಗಿ ತಲೆಕೆಡಿಸಿಕೊಂಡು ತ್ರಾಸ ಪಡುವುದಕ್ಕೆ ಇಷ್ಟವಿಲ್ಲ. ನಾನೀಗ ಶಿಕ್ಷಣತಜ್ಞನಲ್ಲ. ನಾನೊಬ್ಬ ರಾಜಕಾರಣಿ. 

ಆರ್‌ಎಸ್‌ಎಸ್‌ಗೆ ಮೋದಿ ಅಂದರೆ ಇಷ್ಟವೇ?
ಆರ್‌ಎಸ್‌ಎಸ್‌ಗೆ ಇಷ್ಟ-ಇಷ್ಟವಿಲ್ಲ ಎನ್ನುವಂಥದ್ದೇನೂ ಇಲ್ಲ. ಆರ್‌ಎಸ್‌ಎಸ್‌ನವರು ತುಂಬಾ ಪ್ರಾಕ್ಟಿಕಲ್‌ ಜನರು. ಆರ್‌ಎಸ್‌ಎಸ್‌ ಎಂದರೆ ಶಾಖೆಗಳು, ಸೈದ್ಧಾಂತಿಕ ಶಿಕ್ಷಣ ಮತ್ತು ಬಿಜೆಪಿಗೆ ಕೆಲಸಗಾರರನ್ನು ಒದಗಿಸುವ ಕೆಲಸ. ಕೆಲವೊಮ್ಮೆ ಆರ್‌ಎಸ್‌ಎಸ್‌ನವರೂ ಬಿಜೆಪಿಗೆ “ಆ ವ್ಯಕ್ತಿಯನ್ನು ತೆಗೆದುಕೊಳ್ಳಬಹುದು, ಈ ವ್ಯಕ್ತಿಗೆ ಬಡ್ತಿ ನೀಡಬಹುದು’ ಎಂದು ಸಲಹೆ ನೀಡುತ್ತಾರೆ. ಆದರೆ ತಮ್ಮ ಮಾತು ನಡೆಯಲೇಬೇಕು ಎಂದು ಎಂದಿಗೂ ಒತ್ತಾಯ ಮಾಡುವುದಿಲ್ಲ. ಆರ್‌ಎಸ್‌ಎಸ್‌ ಬಿಜೆಪಿಗೆ ಆದೇಶ ನೀಡುತ್ತದೆ ಎನ್ನುವುದೆಲ್ಲ ಹುಸಿ ಕಲ್ಪನೆಯಷ್ಟೆ.

ಮೋದಿಯವರ “ಹಿಂದುತ್ವ’ ಆರ್‌ಎಸ್‌ಎಸ್‌ಗೆ ಸಾಕಾಗುತ್ತದೇ?
ಮೋದಿ ಅನೇಕ ಹಿಂದುತ್ವವಾದಿ ವಿಚಾರಗಳನ್ನು ಬದಿಗೊತ್ತಿದ್ದಾರೆ ಎನ್ನುವ ಅಸಮಾಧಾನ ಆರ್‌ಎಸ್‌ಎಸ್‌ಗೆ ಇದೆ. ಮೋದಿಯವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಅಹಮದಾಬಾದ್‌ಗೆ “ಕರ್ಣಾವತಿ’ ಎಂದು ಮರುನಾಮಕರಣ ಮಾಡಲು ಬಯಸಿದ್ದರು. ಆದರೆ ಅಂದಿನ ಪ್ರಧಾನಿ ಇದನ್ನು ತಡೆದರು. ಈಗ ಇದೇ ನರೇಂದ್ರ ಮೋದಿಯೇ ಪ್ರಧಾನಿಯಾಗಿದ್ದಾರೆ, ಆದರೆ ಅವರು ಅಹಮದಾಬಾದ್‌ ಹೆಸರು ಬದಲಿಸಿಲ್ಲ. Ancient Monuments and Archaeological Sites and Remains Act ಅಡಿಯಲ್ಲಿ ರಾಮ ಸೇತುವೆಯನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವೆಂದು ಘೋಷಿಸಬೇಕು. ಆದರೆ ಮೋದಿ ಈ ಕೆಲಸವನ್ನು ಮಾಡಿಲ್ಲ. ರಾಮ ಮಂದಿರ ವಿಚಾರದಲ್ಲಿ ಸರ್ಕಾರ ಸಕ್ರಿಯವಾಗಿಲ್ಲ. ಇವೆಲ್ಲ ಆರ್‌ಎಸ್‌ಎಸ್‌ಗೆ ಬೇಕಾದ ವಿಚಾರಗಳು. ಹಾಗೆಂದು ಮೋದಿಯವರೇನೂ ಆರ್‌ಎಸ್‌ಎಸ್‌ಗೆ ಅಡ್ಡಗಾಲಾಗಿಲ್ಲ, ಅದರೆಡೆಗೆ ಪ್ರತಿಕೂಲವಾಗಿಯೂ ವರ್ತಿಸಿಲ್ಲ. ಎಷ್ಟೇ ಇದ್ದರೂ ಮೋದಿ ಕೂಡ “ಪ್ರಚಾರಕ್‌’ ಅಲ್ಲವೇ? ಅವರೂ ಆರ್‌ಎಸ್‌ಎಸ್‌ನಿಂದ ತರಬೇತಿ ಪಡೆದವರು. 

ಮೋದಿಯವರೇಕೆ ಹಿಂದುತ್ವದ ಕೆಲಸಗಳನ್ನು ಮಾಡಿಲ್ಲ  ಅನ್ನಿಸುತ್ತೆ? 
ನರೇಂದ್ರ ಮೋದಿ ಎಲ್ಲರಿಂದಲೂ ಸ್ವೀಕಾರಾರ್ಹರಾಗಬೇಕೆಂದು ಬಯಸುತ್ತಾರೆ. ವಾಜಪೇಯಿ ಕೂಡ ಹೀಗೇ ಪ್ರಯತ್ನಿಸಿದರು. ಆದರೆ ಅದು ಕೆಲಸ ಮಾಡಲಿಲ್ಲ. ಈಗ ವಾಜಪೇಯಿ ಇಲ್ಲ ಎನ್ನುವ ಕಾರಣಕ್ಕೆ ಅವರನ್ನು ನೀವು ಹೊಗಳಬಹುದು, ಆದರೆ ಅವರು ಇಂಥ ನಡೆಯಿಂದ ಪಕ್ಷದ ಶಕ್ತಿಯನ್ನು ಅರ್ಧಕ್ಕರ್ಧ ತಗ್ಗಿಸಿಬಿಟ್ಟರು. ತಾವು ಗೆಲ್ಲುತ್ತೇವೆ ಎನ್ನುವ ಹುಸಿ ನಂಬಿಕೆಯಲ್ಲಿ ಅವರು “ಭಾರತ ಪ್ರಕಾಶಿಸುತ್ತಿದೆ’ ಎಂದರು. ಮೋದಿಯವರಿಗೆ ಭಾರತೀಯ ಜನತಾ ಪಾರ್ಟಿಯನ್ನು, ಎಲ್ಲರನ್ನೂ ಜೊತೆಗೊಯ್ಯುವ “ಸರ್ವ ಸ್ವೀಕಾರಾರ್ಹ’ ಪಕ್ಷವಾಗಿಸಬೇಕೆಂಬ ಬಯಕೆಯಿದೆ. ಆದರೆ ಕಾರ್ಯಕರ್ತರು ಇದಕ್ಕೆ ಸಿದ್ಧರಿಲ್ಲ. 

ಮೋದಿ ಈ ಸಮಸ್ಯೆಯನ್ನು ನಿಭಾಯಿಸಲು ಪ್ರಯತ್ನಿಸಿದ್ದಾರಾ?
ಇಲ್ಲ, ಇನ್ನೂ ಇಲ್ಲ. ಆದರೆ ಅವರು ಪ್ರಯತ್ನಿಸಬಹುದು. ಹೆಚ್ಚೇನಲ್ಲ, ಒಂದೆರಡು ಕೆಲಸವಾದರೂ ಸಾಕು. ರಾಮ ಮಂದಿರ ವಿಚಾರದಲ್ಲಿ ಅವರು ಸಂಸದೀಯ ನಿರ್ಣಯವನ್ನು ಪಡೆಯಬಹುದು, ಗೋ ಹತ್ಯೆ ನಿಷೇಧದ ಬಗೆಗಿನ ರಾಷ್ಟ್ರೀಯ ಕಾಯ್ದೆಯೊಂದರ ಬಗ್ಗೆ ಅವರು ಮಾತನಾಡಬೇಕು. ಇದರಿಂದ ಪರಿಣಾಮ ಉಂಟಾಗುತ್ತದೆ. 

ಮೋಹನ್‌ ಭಾಗವತರ ಭಾಷಣಗಳ ಬಗ್ಗೆ ಏನಂತೀರಿ?
ಆರ್‌ಎಸ್‌ಎಸ್‌ನ ಶಾಖೆಗಳಲ್ಲಿ ಏನು ಮಾತನಾಡಲಾಗುತ್ತಿತ್ತೋ ಅದನ್ನೇ ಈಗ ಬಹಿರಂಗ ಮೈದಾನಗಳಲ್ಲಿ ತರಲಾಗಿದೆ. 

ಆದರೆ ಸಾರ್ವಜನಿಕರ ಮುಂದೇಕೆ ಹೋಗಬೇಕಿತ್ತು? 
ಏಕೆಂದರೆ ಇಡೀ ದೇಶ “ಹಿಂದುತ್ವ’ವನ್ನು ಸಂಭ್ರಮಿಸಬೇಕೆಂದು ಅವರು ಬಯಸುತ್ತಾರೆ. ಹಾಗಾಗಿ ಜನರಿಗೆ ಆರ್‌ಎಸ್‌ಎಸ್‌ ಬಗ್ಗೆ ಇರುವ ಪೂರ್ವಗ್ರಹಗಳನ್ನು ತೊಡೆದುಹಾಕಬೇಕೆಂದು ಹೇಳುತ್ತಿದ್ದಾರೆ. ನೋಡಿ, ದೇಶದ 83 ಪ್ರತಿಶತ ಜನ ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುತ್ತಾರೆ. ಆದರೆ ಒಬ್ಬ ವ್ಯಕ್ತಿ ಹಿಂದೂ ಆಗಿದ್ದರಷ್ಟೇ ಸಾಲದು, ಆತ ಅದರ ಜೊತೆಗೆ ಸಂಸ್ಕೃತದ ಪರವಾಗಿರಬೇಕು, ಇತಿಹಾಸವನ್ನು ಪುನಾರಚಿಸುವುದಕ್ಕೆ ಆತನಿಗೆ ಅವಕಾಶವಿರಬೇಕು, ಲಿಂಗ ಸಮಾನತೆ ಇರಬೇಕು. ಜನ “ನಾನು ಹಿಂದೂ’ ಎಂದು ಖಾಸಗಿಯಾಗಿ ಹೇಳಿಕೊಳ್ಳುತ್ತಾರೆ. ಬಹಿರಂಗವಾಗಿಯೂ ಹೇಳಲಿ.

ಮಹಾಘಟಬಂಧನ್‌ ರಚನೆ ಸಾಧ್ಯವಾಗುತ್ತದಾ?
ಇಲ್ಲ. ಇಂದಿನ ಪರಿಸ್ಥಿತಿಯಲ್ಲಿ ಮಹಾ ಮೈತ್ರಿ ಪರಿಕಲ್ಪನೆಯಲ್ಲಿ ಕಾಂಗ್ರೆಸ್‌ಗೆ ಪುಟ್ಟ ಪಾತ್ರ ನಿರ್ವಹಿಸುವ ಅವಕಾಶವಿದೆಯಷ್ಟೆ. ಆದರೆ ಕಾಂಗ್ರೆಸ್‌ ಪಕ್ಷ ಮಾಧ್ಯಮಗಳನ್ನು ಹೇಗೆ ಬಳಸಿಕೊಳ್ಳುತ್ತಿದೆಯೆಂದರೆ ಅದೇ ಎಲ್ಲೆಡೆ ಕಾಣಿಸಿಕೊಳ್ಳುತ್ತಿದೆ. ಮಾಯಾವತಿ ಆಗಲೇ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸಂಗ ತೊರೆದಿದ್ದಾರೆ. ಅಖೀಲೇಶ್‌ ಯಾದವ್‌ ಕೂಡ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಕೈ ಬಿಟ್ಟರೆ ಅಚ್ಚರಿಯಿಲ್ಲ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನೊಂದಿಗೆ ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅಖೀಲೇಶ್‌ ಯಾದವ್‌ ಘೋಷಿಸಿದ್ದಾರೆ. ಡಿಎಂಕೆ ಕೂಡ ಕಾಂಗ್ರೆಸ್‌ ಅನ್ನು ತೊರೆದರೆ ನನಗೇನೂ ಆಶ್ಚರ್ಯವಾಗದು. ತೆಲಂಗಾಣ, ಆಂಧ್ರಪ್ರದೇಶ..ಎಲ್ಲಾ ಕಡೆಯೂ ಕಾಂಗ್ರೆಸ್‌ಗೆ ಇದೇ ಸಮಸ್ಯೆ. ಅದನ್ನು ಯಾರೂ ಒಪ್ಪಿಕೊಳ್ಳುತ್ತಿಲ್ಲ. ರಾಹುಲ್‌ ಗಾಂಧಿಗೆ “ಐಡಿಯಾ’ಗಳಿರುವ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗಿಲ್ಲ. ಅವರ 90 ಪ್ರತಿಶತ ಭಾಷಣಳಲ್ಲಿ ಬರೀ ನಿಂದನೆಯಿರುತ್ತದೆ ಮತ್ತು ಗೊತ್ತುಗುರಿ ಇರುವುದಿಲ್ಲ. ಈ ವ್ಯಕ್ತಿ ಸಂಸತ್ತಿನಲ್ಲಿ ಅಚಾನಕ್ಕಾಗಿ ಎದ್ದು ಹೋಗಿ ಪ್ರಧಾನಿಯನ್ನು ಆಲಂಗಿಸಿಕೊಳ್ಳುತ್ತಾರೆ. ಇದೆಲ್ಲ ಎಷ್ಟು ಬಾಲಿಷವಾಗಿ ಕಾಣಿಸುತ್ತದೆ ನೋಡಿ. ಮೂಲ ಸಮಸ್ಯೆಯೆಂದರೆ ರಾಹುಲ್‌ಗೆ ಯಾವ ಐಡಿಯಾಗಳೂ ಇಲ್ಲ. ಇದೆಲ್ಲ ನೀವು ಮಾಧ್ಯಮದವರು ಮಾಡುವ ಕೆಲಸ. ಅಲ್ಲ, ಆರ್ಥಿಕತೆ ಬಗ್ಗೆ ರಾಹುಲ್‌ಗೆ ಏನು ಯೋಚನೆಗಳಿವೆ? “ನೀವು ಅದು ಮಾಡಿಲ್ಲ, ನೀವು ಇದು ಮಾಡಿಲ್ಲ’ ಎನ್ನುವುದನ್ನು ಬಿಟ್ಟು?

ಹೀಗೆ ಮಾಡುವುದು ಪ್ರತಿಪಕ್ಷದ ಕೆಲಸವಲ್ಲವೇ? 
ಇದೊಂದೇ ಕೆಲಸವೇನು? ಪ್ರತಿ ಪಕ್ಷದಲ್ಲಿದ್ದೀರಿ ಎಂದರೆ ನಿಮಗೆ ಐಡಿಯಾಗಳು ಇರಲೇಬೇಕು. ನಾವು ಜನರತ್ತ ಐಡಿಯಾಗಳನ್ನು ಹರಿಸುತ್ತಿದ್ದೇವೆ. ಈಗ ಐಡಿಯಾ ಕದಿಯುವ ವ್ಯಕ್ತಿಯಾಗಿ ರಾಹುಲ್‌ರನ್ನು ಗುರುತಿಸಲಾಗುತ್ತದೆ- “ನಾನೂ ಶಿವ ಭಕ್ತ’ ಎನ್ನುತ್ತಿದ್ದಾರೆ!

ಆದರೆ ರಫೇಲ್‌ ಒಪ್ಪಂದದ ವಿಚಾರದಲ್ಲಿ ರಾಹುಲ್‌ ಪಟ್ಟುಬಿಡುತ್ತಿಲ್ಲ ಮತ್ತು ಸರ್ಕಾರವನ್ನು ಮುಜುಗರಕ್ಕೆ ದೂಡಿದ್ದಾರಲ್ಲ?
ಯಾವ ಹೊಸ ಸಂಗತಿಯನ್ನು ರಾಹುಲ್‌ ಎದುರಿಟ್ಟಿದ್ದಾರೆ? ಅನಿಲ್‌ ಅಂಬಾನಿಗೆ ಕಾಂಟ್ರ್ಯಾಕ್ಟ್ ಕೊಡಲಾಯಿತು ಎನ್ನುವುದನ್ನು ಬಿಟ್ಟು? ಈ ವಿಷಯ ಸಾರ್ವಜನಿಕವಾಗಿಯೇ ಲಭ್ಯವಿದೆ. ಸರ್ಕಾರ ಮುಚ್ಚಿಡಲು ಬಯಸುತ್ತಿರಬಹುದಾದ ಯಾವ ಹೊಸ ವಿಚಾರವನ್ನು ರಾಹುಲ್‌ ಸಾರ್ವಜನಿಕರೆದುರು ತಂದಿದ್ದಾರೆ ಹೇಳಿ? ಆದರೆ ಇದೇ ವೇಳೆಯಲ್ಲೇ ನಾನೊಂದು ವಿಷಯ ಹೇಳಬೇಕು. ಈ ಒಪ್ಪಂದದ ಕಾಗದಪತ್ರಗಳನ್ನು ನಾನಿನ್ನೂ ನೋಡಿಲ್ಲ. ಹಾಗಾಗಿ, ಏನಾದರೂ ವಿಷಯ ಇದ್ದರೂ ಇರಬಹುದು. ದಾಖಲೆಗಳನ್ನು ನೋಡುವವರೆಗೂ ನಾನೇನೂ ಹೇಳುವುದಿಲ್ಲ. ನಾನು ನನ್ನ ಪಕ್ಷದ ವಿರುದ್ಧದ ಈ ಬೃಹತ್‌ ಜವಾಬ್ದಾರಿ ಹೊತ್ತು ರಾಹುಲ್‌ಗೆ ಲಾಭ ಮಾಡಿಕೊಡಬೇಕು ಎಂದು ನೀವು ಬಯಸುತ್ತೀರಾ? ನಾನೇನೂ ಮೂರ್ಖನಲ್ಲ!

(ಕೃಪೆ: ಹಫಿಂಗ್ಟನ್‌ಪೋಸ್ಟ್‌)

ಸುಬ್ರಮಣಿಯನ್‌ ಸ್ವಾಮಿ
ಬಿಜೆಪಿ ಹಿರಿಯ ನಾಯಕ 

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

ಅಣ್ವಸ್ತ್ರಸಜ್ಜಿತ ರಾಷ್ಟ್ರಗಳು ವಿವೇಕದಿಂದ ವರ್ತಿಸಲಿ

War: ಮತ್ತೆ ಯುದ್ಧ ಬೇಡ

War: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರಾನೇರ ಹಣಾಹಣಿ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

West Bengal; ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಣ ದಾಳಿ ಅಕ್ಷಮ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.