ಹರತಾಳಕ್ಕೆ ಬೆಂಬಲವಿಲ್ಲ ವ್ಯಾಪಾರಿಗಳ ಸಮುಚಿತ ನಿರ್ಧಾರ


Team Udayavani, Dec 24, 2018, 6:00 AM IST

kerala.jpg

ಕೇರಳದ ವ್ಯಾಪಾರಿಗಳ ಒಕ್ಕೂಟ 2019ರಲ್ಲಿ ಯಾವುದೇ ರಾಜಕೀಯ ಪ್ರೇರಿತ ಹರತಾಳ, ಮುಷ್ಕರವನ್ನು ಬೆಂಬಲಿಸದಿರಲು ಕೈಗೊಂಡಿರುವ ನಿರ್ಧಾರ ರಾಜಕೀಯ ಪಕ್ಷಗಳಿಗೆ ಒಂದು ರೀತಿಯಲ್ಲಿ ಎಚ್ಚರಿಕೆಯ ಸಂದೇಶದಂತಿದೆ.

ಈ ವರ್ಷದಲ್ಲಿ ಕೇರಳದಲ್ಲಿ 97 ಹರತಾಳ ಮತ್ತು ಬಂದ್‌ಗಳು ನಡೆದಿವೆ. ಪ್ರತಿ ತಿಂಗಳು ಮೂರ್‍ನಾಲ್ಕು ಬಂದ್‌ಗಳು ಸಾಮಾನ್ಯ ಎಂಬಂತಾಗಿದ್ದವು. ಎಲ್ಲ ಮೂರು ಪ್ರಮುಖ ರಾಜಕೀಯ ಪಕ್ಷಗಳು  ಬಂದ್‌ಗೆ ಕರೆ ನೀಡುವಲ್ಲಿ ಮುಂಚೂಣಿಯಲ್ಲಿದ್ದವು. ಬಂದ್‌ ಅಲ್ಲಿ ಎಷ್ಟು ಮಾಮೂಲು ವಿಷಯವಾಗಿತ್ತು ಎಂದರೆ ಸತತ 10 ದಿನಗಳಲ್ಲಿ ಒಂದಾದರೂ ಬಂದ್‌ ನಡೆಯದೇ ಇದ್ದರೆ ಜನರೇ ಆಶ್ಚರ್ಯಪಡುವಂತಾಗಿತ್ತು. ಬಂದ್‌ಗಳಿಗೆ ವ್ಯಾಪಾರಿಗಳು ಎಷ್ಟು ರೋಸಿ ಹೋಗಿದ್ದರು ಎನ್ನುವುದು ಅವರು ಕೈಗೊಂಡಿರುವ ನಿರ್ಧಾರದಿಂದ ತಿಳಿಯುತ್ತದೆ. 

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುಷ್ಕರ, ಹರತಾಳ, ಬಂದ್‌ ಇತ್ಯಾದಿಗಳು ಜನರ ಅಸಮಾಧಾನವನ್ನು ಆಳುವವರಿಗೆ ತಿಳಿಸುವ ಪ್ರಬಲ ಅಸ್ತ್ರ. 19ನೇ ಶತಮಾನದಿಂದಲೇ ಕಾರ್ಮಿಕ ವರ್ಗ ಮುಷ್ಕರವನ್ನು ಪ್ರತಿಭಟನೆಯ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಆದರೆ 21ನೇ ಶತಮಾನಕ್ಕಾಗುವಾಗ ಇದು ರಾಜಕೀಯ ಪಕ್ಷಗಳ ಕೈಗೆ ಸಿಕ್ಕಿತು. ಬಂದ್‌, ಮುಷ್ಕರ, ಹರತಾಳ ಇವುಗಳೆಲ್ಲ ವಿಭಿನ್ನ ವ್ಯಾಖ್ಯಾನ ಹೊಂದಿದ್ದರೂ ರಾಜಕೀಯ ಪಕ್ಷಗಳಿಗೆ ಎಲ್ಲವೂ ಒಂದೇ ಆಯಿತು. ಆಡಳಿತವನ್ನು ಎಚ್ಚರಿಸುವ ಅಸ್ತ್ರ ಕೊನೆಗೆ ಜನರಿಗೆ ಕಿರಿಕಿರಿಯುಂಟು ಮಾಡುವ ಹಂತಕ್ಕೆ ಬಂದು ತಲುಪಿದ್ದು ನಮ್ಮ ವ್ಯವಸ್ಥೆಯ ದುರಂತ. ಅದರ ಪರಿಣಾಮವೇ ಜನರೇ ಬಂದ್‌ ಬೇಡ ಎನ್ನುವ ಸ್ಥಿತಿ ಬಂದದ್ದು. 

2007ರಲ್ಲೇ ತಮಿಳುನಾಡಿಗೆ ಅನ್ವಯಿಸುವಂತೆ ಸುಪ್ರೀಂ ಕೋರ್ಟ್‌ ಬಂದ್‌ಗಳನ್ನು ನಿಷೇಧಿಸಿ ತೀರ್ಪು ನೀಡಿತ್ತು. ಇದಕ್ಕೂ ಮೊದಲು 1998ರಲ್ಲೇ ಕೇರಳ ಹೈಕೋರ್ಟ್‌ ಬಂದ್‌ ಅಕ್ರಮ ಎಂದು ಹೇಳಿದ್ದು ತೀರ್ಪನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌ ಇದು ಇಡೀ ದೇಶಕ್ಕೆ ಅನ್ವಯವಾಗುತ್ತದೆ ಎಂದು ಹೇಳಿತ್ತು. ನಂತರದ ದಿನಗಳಲ್ಲಿ ಬಂದ್‌ನಿಂದ ಆಗುವ ನಷ್ಟಗಳ ಪರಿಹಾರವನ್ನು ಬಂದ್‌ಗೆ ಕರೆಕೊಟ್ಟವರಿಂದ ವಸೂಲು ಮಾಡಬೇಕೆಂಬ ತೀರ್ಪು ಬಂದಿದ್ದರೂ ರಂಗೋಲಿ ಕೆಳಗೆ ತೂರುವ ಚಾಣಾಕ್ಷತೆಯನ್ನು ಗಳಿಸಿಕೊಂಡಿರುವ ರಾಜಕೀಯ ಪಕ್ಷಗಳು ಇದರಿಂದ ತಪ್ಪಿಸಿಕೊಳ್ಳುವ ದಾರಿಯನ್ನು ಕಂಡುಕೊಂಡಿವೆ. 

ನ್ಯಾಯಾಲಯ ಬಂದ್‌ ನಿಷೇಧಿಸಿದಾಗ ಅದಕ್ಕೆ ಹರತಾಳ ಎಂಬ ಹೆಸರು ಕೊಡಲಾಯಿತು. ಹೆಸರು ಮಾತ್ರ ಬದಲಾಯಿತೇ ಹೊರತು ಪ್ರತಿಭಟನೆಯ ಸ್ವರೂಪ ಬದಲಾಗಲಿಲ್ಲ. ಹಿಂಸೆ ಬಂದ್‌ನ ಅವಿಭಾಜ್ಯ ಅಂಗವಾದ ಬಳಿಕ ಬಂದ್‌ಗೆ ಜನರು ಹೆದರುವಂತಾಯಿತು. ಹಿಂಸೆಯ ತೀವ್ರತೆ ಹೆಚ್ಚಿದಷ್ಟು ಬಂದ್‌ ಯಶಸ್ವಿ ಎಂದು ಭಾವಿಸುವ ಪರಿಸ್ಥಿತಿಯಿಂದಾಗಿ ಜನರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಜನಜೀವನವನ್ನು ಅಸ್ತವ್ಯಸ್ತಗೊಳಿಸುವುದೇ ಬಂದ್‌ನ ಮುಖ್ಯ ಉದ್ದೇಶ ಎಂಬಂತಾಗಿದೆ. ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಜನರು ಸ್ವಯಂಪ್ರೇರಣೆಯಿಂದ ಹರತಾಳ, ಮುಷ್ಕರಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಸ್ವಾತಂತ್ರಾéನಂತರ ಜನರನ್ನು ಬಲವಂತವಾಗಿ ಮುಷ್ಕರದಲ್ಲಿ ಭಾಗವಹಿಸುವಂತೆ ಮಾಡುವ ರಾಜಕೀಯ ಸಂಸ್ಕೃತಿ ಬೆಳೆದು ಬಂತು.
 
ಬಂದ್‌ನ ಮುಖ್ಯ ಬಲಿಪಶುಗಳೇ ಸಣ್ಣ ವ್ಯಾಪಾರ ಸಂಸ್ಥೆಗಳು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಬಂದ್‌ ಪ್ರತಿಭಟನೆಯನ್ನು ತಿಳಿಸುವ ಅಸ್ತ್ರವಾಗುವ ಬದಲು ಪ್ರಚಾರ ಗಿಟ್ಟಿಸಿಕೊಳ್ಳುವ ಮಾಧ್ಯಮವಾದಾಗ ಏನೇನು ಅಪಸವ್ಯಗಳಾಗುತ್ತವೋ ಅವುಗಳಿಗೆಲ್ಲ ಕೇರಳ ಈ ಒಂದು ವರ್ಷದಲ್ಲಿ ಸಾಕ್ಷಿಯಾಗಿದೆ. ಇನ್ನು ಸಾರಿಗೆ ವ್ಯವಸ್ಥೆ, ಪ್ರವಾಸೋದ್ಯಮ ಇವುಗಳನ್ನೆಲ್ಲ ಲೆಕ್ಕ ಹಾಕಿದರೆ ಬಂದ್‌ನಿಂದಾಗುವ ನಷ್ಟದ ಪ್ರಮಾಣ ಕೆಲವು ಸಾವಿರ ಕೋಟಿಯಾಗುತ್ತದೆ. ಬಂದ್‌ ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರದ ಆರ್ಥಿಕತೆಗೂ ಹೇಗೆ ಹಾನಿಕಾರಕವಾಗಿ ಪರಿಣಮಿಸುತ್ತದೆ ಎನ್ನುವುದನ್ನು ಪ್ರತಿ ಬಂದ್‌ ಬಳಿಕ ಪ್ರಕಟವಾಗುವ ಅಂಕಿಅಂಶಗಳೇ ಹೇಳುತ್ತವೆ. 

ಕ್ಷುಲ್ಲಕ ಕಾರಣಗಳನ್ನು ಮುಂದೊಡ್ಡಿ ಪದೇ ಪದೇ ಬಂದ್‌ ಮಾಡುವವರು ಕೇರಳದಲ್ಲಾಗಿರುವ ಬೆಳವಣಿಗೆಯಿಂದ ತಿಳಿದುಕೊಳ್ಳುವುದು ಬಹಳಷ್ಟಿದೆ. ಪ್ರತಿಭಟನೆಯ ಪ್ರಬಲ ಅಸ್ತ್ರವೊಂದು ಜನರಿಗೆ ಕಿರಿಕಿರಿಯುಂಟುಮಾಡಲು, ಹಿಂಸೆ ನೀಡಲು ಬಳಕೆಯಾದರೆ ಜನರು ತಿರುಗಿ ಬೀಳುತ್ತಾರೆ ಎನ್ನುವುದನ್ನು ಬಂದ್‌ ಮಾಡಿಸುವ ಪಕ್ಷಗಳು, ಸಂಘಟನೆಗಳು ಅರಿತುಕೊಳ್ಳಬೇಕು. ಪ್ರಜಾತಂತ್ರದಲ್ಲಿ ಪ್ರತಿಭಟನೆಗೆ ಅವಕಾಶ ಇರಬೇಕು. ಆದರೆ ಅದು ಶಾಂತಿಯುತವಾಗಿರಬೇಕು ಹಾಗೂ ಇದಕ್ಕಿಂತಲೂ ಮುಖ್ಯವಾಗಿ ಜನರಿಗೆ ಅದು ಸಹ್ಯವಾಗಿರಬೇಕು. ಈ ನೆಲೆಯಲ್ಲಿ ಬಂದ್‌ ಮಾಡಿಸುವವರು ಆತ್ಮವಿಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ. 

ಟಾಪ್ ನ್ಯೂಸ್

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.