ಇಂದಿನಿಂದ ನುಡಿ ಹಬ್ಬ


Team Udayavani, Jan 4, 2019, 12:30 AM IST

x-93.jpg

ಧಾರವಾಡದಲ್ಲಿ  ಶುಕ್ರವಾರದಿಂದ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಗೊಳ್ಳಲಿದೆ. ಇದು ಧಾರವಾಡ ಜಿಲ್ಲೆಯಲ್ಲಿ ನಡೆಯುತ್ತಿರುವ ಆರನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವಾದಾರೂ ನಗರದಲ್ಲಿ  ನಡೆ ಯು ತ್ತಿರುವ ನಾಲ್ಕನೇ ಸಾಹಿತ್ಯ ಸಮ್ಮೇಳನ. ಉಳಿದೆರಡು ಸಮ್ಮೇಳನಗಳು ಪಕ್ಕದ ಹುಬ್ಬಳ್ಳಿಯಲ್ಲಿ  ನಡೆದಿದ್ದವು. ಕನ್ನಡ ಸಾಹಿತ್ಯ ಪರಿಷತ್‌ ರಚನೆಯಾದ ಮೂರು ವರ್ಷಗಳ ಬಳಿಕ 1918ರಲ್ಲಿ  ಮೊದಲ ಬಾರಿಗೆ ಧಾರವಾಡದಲ್ಲಿ  ಸಮ್ಮೇಳನ ನಡೆದಿತ್ತು. ಇದನ್ನು ಪರಿಗಣಿಸಿದಲ್ಲಿ  ಈ ಬಾರಿಯ ಸಮ್ಮೇಳನಕ್ಕೆ  ಶತಮಾನದ ಸಂಭ್ರಮ. ಧಾರವಾಡದಲ್ಲಿ  61 ವರ್ಷಗಳ ಬಳಿಕ ಈ ಸಾಹಿತ್ಯ ಉತ್ಸವ ನಡೆಯುತ್ತಿದೆ ಎನ್ನುವುದೂ ಉಲ್ಲೇಖನೀಯ. ವರಕವಿ ಡಾ. ದ. ರಾ. ಬೇಂದ್ರೆ, ಡಾ. ಎಂ. ಎಂ. ಕಲಬುರ್ಗಿ, ಶಂ. ಭಾ. ಜೋಶಿ, ಕೀರ್ತಿನಾಥ ಕುರ್ತಕೋಟಿ ಅವರಂಥ ಸಾಹಿತ್ಯದ ದಿಗ್ಗಜರ ತವರಿನಲ್ಲಿ  ಕನ್ನಡದ ಕಹಳೆ ಮತ್ತೆ ಮೊಳಗುತ್ತಿದೆ.

ಕಳೆದ 83 ಸಾಹಿತ್ಯ ಸಮ್ಮೇಳನಗಳತ್ತ ಒಮ್ಮೆ  ದೃಷ್ಟಿ ಹಾಯಿಸಿದಲ್ಲಿ  ಪ್ರತಿ ಯೊಂದೂ  ಒಂದಲ್ಲಾ ಒಂದು ವಿಶೇಷತೆ  ಹೊಂದಿತ್ತು. ಆದರೆ ಮೇಲ್ನೋಟಕ್ಕೆ  ಸಮ್ಮೇಳನಗಳು  ವಾರ್ಷಿಕ ಜಾತ್ರೆ ಅಥವಾ ಸಮುದಾಯಗಳ ಹಬ್ಬಗಳಂತೆ ಕಂಡುಬಂದರೂ ಮಹತ್ತರ ಧ್ಯೇಯೋದ್ದೇಶಗಳನ್ನು ಹೊಂದಿವೆೆ. ಆರಂಭದಲ್ಲಿ  ಕನ್ನಡಿಗರನ್ನು  ಒಗ್ಗೂಡಿಸುವ ನಿಟ್ಟಿನಲ್ಲಿ  ಇದು ಯಶಸ್ವಿಯಾಯಿತು. ಬಳಿಕ ಆಯಾಯ ಕಾಲಕ್ಕೆ  ಸಂಬಂಧಿಸಿದಂತೆ ನುಡಿ, ನೆಲ, ಜಲ, ಗಡಿ ವಿಚಾರದಲ್ಲಿ  ಜನರಲ್ಲಿ  ಜಾಗೃತಿ ಮೂಡಿಸುವ ಜತೆ ನಮ್ಮನ್ನಾಳುವವರನ್ನೂ ಬಡಿದೆಬ್ಬಿಸುತ್ತಾ ಬಂದಿವೆ. ಸಮ್ಮೇಳನಗಳು ಆಂಶಿಕವಾಗಿಯಾದರೂ ಕನ್ನಡ ಭಾಷೆಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಗಳನ್ನೂ ನೀಡುತ್ತಿವೆ ಎಂಬುದು ಸ್ಪಷ್ಟ.

ಈ ಬಾರಿಯ ಸಮ್ಮೇಳನದಲ್ಲಿ  ಸರಕಾರಿ ಕನ್ನಡ ಶಾಲೆಗಳಲ್ಲಿ  ಆಂಗ್ಲ ಮಾಧ್ಯಮ ಆರಂಭ, ಉತ್ತರ ಕರ್ನಾಟಕದ ನಿರ್ಲಕ್ಷ್ಯ, ಮಹಾದಾಯಿ ನದಿ ವಿವಾದ ಸೇರಿದಂತೆ ಹಲವು ವಿಷಯಗಳು ಚರ್ಚೆಗೀಡಾಗಬಹುದು. ಉತ್ತರ ಕರ್ನಾಟಕದವರೇ ಆಗಿರುವ ಡಾ|ಚಂದ್ರಶೇಖರ ಕಂಬಾರ ಅವರು ಸಮ್ಮೇಳನಾಧ್ಯಕ್ಷರಾಗಿರುವ ಕಾರಣ ಆ ಪ್ರದೇಶದ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ಸಿಗಬಹುದೆಂಬ ಅಭಿಪ್ರಾಯವಿತ್ತು. ಆದರೆ ಗೋಷ್ಠಿಗಳಲ್ಲಿ  ಇವುಗಳಿಗೆ ಮಾನ್ಯತೆ ಸಿಕ್ಕಿಲ್ಲ ಎಂಬ ಬೇಸರ ಅವರಿಂದಲೇ ವ್ಯಕ್ತವಾಗಿದೆ.

ಆದರೆ ಇತ್ತೀಚಿನ ಕೆಲ ದಶಕಗಳಲ್ಲಿ  ಸಮ್ಮೇಳನಗಳು  ತಮ್ಮ  ಮೂಲೋದ್ದೇಶ ದಿಂದ ದೂರ ಸರಿಯುತ್ತಿವೆ ಎಂಬ ಆರೋಪವೂ ಕೇಳಿಬರುತ್ತಿದೆ. ಪ್ರತೀ ವರ್ಷ ಯಾವುದಾದರೊಂದು ವಿವಾದಕ್ಕೆ ತಳಕು ಹಾಕಿಕೊಂಡು ಸುದ್ದಿಯಾಗುತ್ತಿದೆಯೇ ಹೊರತು “ಸ್ಮರಣೀಯ’ ಎನ್ನುವಂತೆ ನಡೆಯುತ್ತಿಲ್ಲ. ಸಮ್ಮೇಳನದ ಸಿದ್ಧತೆ, ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನೆ, ಕೆಲವು ಗೋಷ್ಠಿಗಳು, ಪುಸ್ತಕ ಮಳಿಗೆಗಳು, ಮತ್ತೂಂದಿಷ್ಟು  ಸಾಹಿತ್ಯಕ ಚರ್ಚೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕೊನೆಯ ಬಹಿರಂಗ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಿ ಸಮಾಪನಗೊಳ್ಳುತ್ತದೆ. ಅಂದರೆ ಈ ನಿರ್ಣಯಗಳು ಒಂದು ಲೆಕ್ಕದಲ್ಲಿ ಮೂರು ದಿನಗಳ ಫ‌ಲಿತ. ವಿಪರ್ಯಾಸವೆಂದರೆ, ಈ ನಿರ್ಣಯಗಳ ಜಾರಿಗೆ ಕನ್ನಡ ಸಾಹಿತ್ಯ ಪರಿಷತ್‌ ಆಗಲಿ, ರಾಜ್ಯ ಸರಕಾರವಾಗಲೀ ಅಷ್ಟೊಂದು ಗಮನಹರಿಸುತ್ತಿಲ್ಲ. ಹಿಂದೊಮ್ಮೆ ನಿರ್ಣಯ ಅನುಷ್ಠಾನ ಸಮಿತಿಯೂ ಜಾರಿಯಲ್ಲಿತ್ತಾದರೂ ಹೆಚ್ಚಿನ ಪ್ರಯೋಜನವಾಗಿಲ್ಲ. 

ಸರಕಾರವೂ ಸಮ್ಮೇಳನ ಆಯೋಜನೆಗೆ ಹಣ ಬಿಡುಗಡೆ ಮಾಡುವುದಷ್ಟೇ ತನ್ನ ಕರ್ತವ್ಯವೆಂದು ತಿಳಿದಿದೆ. ವಾಸ್ತವವಾಗಿ ಹಾಗಲ್ಲ. ಸರಕಾರ ಸಮ್ಮೇಳನದಲ್ಲಿ ಕೈಗೊಳ್ಳುವ ಈ ನೆಲ, ಜಲ, ಭಾಷೆ ಮತ್ತು ಭಾಷಿಗರ ಪರ ಕೈಗೊಳ್ಳುವ ನಿರ್ಣಯಗಳನ್ನು ಆದ್ಯತೆವಾರು ಅನುಷ್ಠಾನಕ್ಕೆ ಮುಂದಾಗಬೇಕು. ಒಂದುವೇಳೆ ಜಾರಿಗೆ ಅಡ್ಡ ಪಡಿಸುವ, ವಿಳಂಬ ನಿಲುವು ತಾಳುವ ಅಧಿಕಾರಿಗಳಿಗೆ ಬುದ್ಧಿ ಹೇಳಬೇಕು. ಈ ಸಂಬಂಧ ನಾಡಜನರ ಆಗ್ರಹಗಳು ಕೇಳಿಬಂದರೂ ಇದ ಕ್ಕೊಂದು ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಕನ್ನಡ ಭಾಷೆಗೆ ಕುತ್ತು ಬಂದಾಗಲೆಲ್ಲ ಸಾಹಿತಿ ಗಳು ಮತ್ತು ಭಾಷಾಭಿಮಾನಿಗಳು ಧ್ವನಿ ಎತ್ತುತ್ತಾ ಬಂದರೂ ನಿರ್ಣಯಗಳ ಜಾರಿಗೆ ಸರಕಾರದ ಮೇಲೆ ಒತ್ತಡ ಹೇರದಿರುವುದು ಖೇದಕರವೇ. 

ಸಮ್ಮೇಳನ ಯಾವುದೋ ಒಂದು ಹರಟೆಯ ವೇದಿಕೆಯಲ್ಲ. ಸಾಹಿತಿಗಳು, ವಿದ್ವಾಂಸರು, ಭಾಷಾಭಿಮಾನಿಗಳು ಹಾಗೂ ಕನ್ನಡಿಗರು ಸೇರಿ ಸರಕಾರಕ್ಕೆ ನಾಡಿನ ಬೇಡಿಕೆಗಳನ್ನು ಮನದಟ್ಟು ಮಾಡಿಕೊಡುವ ವೇದಿಕೆ. ಅಲ್ಲಿ ಕೈಗೊಳ್ಳುವ ನಿರ್ಣಯಗಳ ಜಾರಿಗೆ ಮುಂದಾಗುವುದೇ ಸರಕಾರ ನೀಡುವ ಮಾನ್ಯತೆ. ಕನ್ನಡ ಸಾಹಿತ್ಯ ಪರಿಷತ್‌ ಸಹ ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲವಾಗಬೇಕು. ಸರಕಾರದೊಂದಿಗೆ ಪ್ರತಿ ಹಂತದಲ್ಲೂ ಸಹಕರಿಸಿ ನಿರ್ಣಯಗಳ ಜಾರಿಗೆ ಮುಂದಾಗಬೇಕು. ಇಲ್ಲವಾದರೆ ಸಮ್ಮೇಳನದ ಉದ್ದೇಶವೇ ನಿರರ್ಥಕ ವಾಗುವುದರಲ್ಲಿ ಸಂಶಯವಿಲ್ಲ. 

ಕನ್ನಡಿಗರು ಸಮ್ಮೇಳನದ ಕುರಿತು ಇಟ್ಟುಕೊಳ್ಳುವ ನಿರೀಕ್ಷೆ ಸುಳ್ಳಾಗದಂತೆ ಎಚ್ಚರವಹಿಸಿ ಕಾರ್ಯೋನ್ಮುಖವಾಗುವುದು ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ರಾಜ್ಯ ಸರಕಾರದ ಆದ್ಯ ಕರ್ತವ್ಯ ಹಾಗೂ ಪ್ರಾಥಮಿಕ ಹೊಣೆಗಾರಿಕೆ. ಇದನ್ನು ಅರಿತು ಕ್ರಿಯಾಶೀಲವಾಗುವತ್ತ ಎರಡೂ ಸಂಸ್ಥೆಗಳು ಗಮನಹರಿಸಬೇಕು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

14-editorial

Campaigns: ಪ್ರಚಾರದಲ್ಲಿ ದ್ವೇಷ ಭಾಷಣ: ಸ್ವಯಂ ನಿಯಂತ್ರಣ ಅಗತ್ಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.