CONNECT WITH US  

ಸಂಸತ್ತಿನಲ್ಲಿ ಗದ್ದಲ ಮಾಡದ ಸಂಸದರಿಗೆ ಸನ್ಮಾನ: ಸರ್ಕಾರ

ನವದೆಹಲಿ: ಈ ಬಾರಿ ಸಂಸತ್ತಿನ ಚಳಿಗಾಲದ ಅಧಿವೇಶನ ಸಂಪೂರ್ಣ ವ್ಯರ್ಥವಾಗಿದೆ. ಪ್ರತಿಪಕ್ಷಗಳ ಗದ್ದಲದಿಂದಾಗಿ ಒಂದು ದಿನವೂ ಸರಿಯಾಗಿ ಕಲಾಪ ನಡೆದಿಲ್ಲ.ಸಂಸತ್ತಿನಲ್ಲಿ ಚರ್ಚೆ ನಡೆಸುವುದು ಹೇಗೆ ಎಂಬುದೇ ಸಂಸದರಿಗೆ ಮರೆತು ಹೋಗಿರಬಹುದು. ಹೀಗಾಗಿ ಗದ್ದಲ ಮಾಡುತ್ತಿದ್ದಾರೆ ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಹೀಗಾಗಿ ಗದ್ದಲವಿಲ್ಲದೇ ಕಲಾಪದಲ್ಲಿ ಪಾಲ್ಗೊಳ್ಳುವುದು ಹೇಗೆ? ಸಂಸದರ ವರ್ತನೆ ಹೇಗಿರಬೇಕು ಎಂಬುದನ್ನು ಕಲಿಸಿಕೊಡುವ ನಿಟ್ಟಿನಲ್ಲಿ ಅಣಕು ಪ್ರದರ್ಶನವೊಂದನ್ನು ಆಯೋಜಿಸಲು ಸರ್ಕಾರ ತೀರ್ಮಾನಿಸಿದೆ.

ಈ ನಿಟ್ಟಿನಲ್ಲಿ ಅನುಭವಿ ಸಂಸತ್‌ಪಟುವೊಬ್ಬರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿದೆ. ಅವರು ಈಗನ ಹಾಲಿ ಸಂಸದರಿಗೆ "ಅಣಕು ಪ್ರದರ್ಶನ' ನೀಡಲಿದ್ದಾರೆ.ಅಲ್ಲದೇ, ಹಿಂದೆ ನಡೆದ ಐತಿಹಾಸಿಕ ಕಲಾಪಗಳನ್ನು ಸೀಡಿ ರೂಪದಲ್ಲಿ ಸಂಸದರಿಗೆ ಹಂಚಲಿದ್ದಾರೆ. ಮುಂದಿನ ಅಧಿವೇಶನದಿಂದ ಸಂಸತ್ತಿನಲ್ಲಿ ಗದ್ದಲ ಮಾಡದೇ ಇರುವ ಸಂಸದರನ್ನು ಸನ್ಮಾನಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಸುಳ್‌ ಸುದ್ದಿ ಮೂಲಗಳು ತಿಳಿಸಿವೆ.

Trending videos

Back to Top