CONNECT WITH US  

ಎಟಿಎಂಗಳು ಶೀಘ್ರದಲ್ಲೇ ಎ.ಸಿ ಬಸ್‌ ತಂಗುದಾಣಗಳಾಗಿ ಪರಿವರ್ತನೆ!

ನವದೆಹಲಿ: ದೇಶಾದ್ಯಂತ ಇರುವ 2 ಲಕ್ಷಕ್ಕೂ ಹೆಚ್ಚಿನ ಎಟಿಎಂಗಳಲ್ಲಿ ಬಹುತೇಕ ಎಟಿಎಂಗಳನ್ನು ಹವಾನಿಯಂ
ತ್ರಿತ ತಂಗುದಾಣಗಳನ್ನಾಗಿ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ನೋಟು ನಿಷೇಧ ಬಳಿಕ ಶೇ.60ಕ್ಕೂ ಹೆಚ್ಚು
ಎಟಿಎಂಗಳು ಬಂದ್‌ ಆಗಿವೆ. ಜೊತೆಗೆ ಮೊದಲಿನಷ್ಟು ನೋಟುಗಳನ್ನು ಮಾರುಕಟ್ಟೆಗೆ ಬಿಡುವ ಇರಾದೆಯೂ
ಕೇಂದ್ರ ಸರ್ಕಾರಕ್ಕೆ ಇಲ್ಲ. ಆದ್ದರಿಂದ ಸದ್ಯ ಇರುವ ಎಟಿಎಂಗಳಲ್ಲಿನ ಎಟಿಎಂ ಮಷೀನ್‌ಗಳನ್ನು ತೆಗೆದು ಅಲ್ಲಿ
ಸಾಧ್ಯವಿರುವಷ್ಟು ಚೇರುಗಳನ್ನು ಹಾಕಲಾಗುವುದು. ಬಸ್‌ ಸ್ಟಾಂಡ್‌ ಬಳಿ ಇರುವ ಎಟಿಎಂಗಳನ್ನು ತಂಗುದಾಣಗಳ
ನ್ನಾಗಿ ಮಾಡಿಕೊಳ್ಳಲಾಗುವುದು. ಜೊತೆಗೆ ಇತರ ಎಟಿಎಂಗಳನ್ನು ವಿಶ್ರಾಂತಿ ಕೇಂದ್ರಗಳನ್ನಾಗಿ ಮಾಡಲಾ
ಗುವುದು. ಇಲ್ಲಿ ಒಂದು ಗಂಟೆ ಕೂರಲು 2 ರೂ. ಪಾವತಿಸ ಬೇಕಾಗುತ್ತದೆ. ಈ ಹವಾನಿಯಂತ್ರಿತ ತಂಗುದಾಣಗಳನ್ನು
ಬ್ಯಾಂಕುಗಳೇ ನಿರ್ವಹಿಸಲಿವೆ. ಪ್ರಯಾಣಿಕರು, ವಾಹನ ಸವಾರರು ಇದನ್ನು ಬಳಸಿಕೊಳ್ಳಬಹುದು ಎಂದು ಕೇಂದ್ರ
ಸರ್ಕಾರದ ಮೂಲಗಳು ಸುಳ್‌ಸುದ್ದಿಗೆ ಹೇಳಿವೆ.

Tags: 

Trending videos

Back to Top