CONNECT WITH US  

Card Swipe ಮಾಡಿ, ಮೋದಿ ಜೊತೆ ವಿದೇಶ ಪ್ರವಾಸ ಗೆಲ್ಲಿ!

ನವದೆಹಲಿ: ದೇಶದಲ್ಲಿ ನಗದು ರಹಿತ ಆರ್ಥಿಕತೆ, ಡಿಜಿಟಲ್‌ ಪಾವತಿ ಪ್ರೇರೇಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಿ ಮೋದಿ ಜೊತೆ ವಿದೇಶ ಪ್ರವಾಸ ಗೆಲ್ಲಿ ಎಂಬ ಹೊಸ ಆಫ‌ರ್‌ ನೀಡಿದೆ. ತಿಂಗಳಿಗೆ ಗರಿಷ್ಠ ಡಿಜಿಟಲ್‌ ಪಾವತಿ ಮಾಡಿದವರಿಗೆ ಅದೃಷ್ಟದ ಬಹುಮಾನ ಇದಾಗಿದ್ದು, ಒಂದು ಬಾರಿ ಪ್ರಧಾನಿ ಮೋದಿ ಅವರೊಂದಿಗೆ ಅವರದ್ದೇ ವಿಮಾನದಲ್ಲಿ ವಿದೇಶ ಪ್ರವಾಸ ಮಾಡಬಹುದು.

ಪ್ರವಾಸ ಉಚಿತವಾಗಿದ್ದು, ಆಹಾರದ ವೆಚ್ಚವನ್ನು ಪ್ರವಾಸಿಗರೇ ಭರಿಸಬೇಕಾಗಿರುತ್ತದೆ. ಇದೇ ವೇಳೆ ಪ್ರಧಾನಿ ಅವರೊಂದಿಗೆ ಒಂದು ಬಾರಿ ಸೆಲ್ಫಿ ತೆಗೆಸಿಕೊಳ್ಳುವ ಅವಕಾಶ ಲಭ್ಯವಿರುತ್ತದೆ. ಕ್ರೆಡಿಟ್‌, ಡೆಬಿಟ್‌ ಕಾಡ್‌, ಮೊಬೈಲ್‌ ವ್ಯಾಲೆಟ್‌ ಬಳಸಿದವರಿಗೆ ಮುಂದಿನ ಒಂದು ವರ್ಷದಲ್ಲಿ ಪ್ರತಿ ತಿಂಗಳು ಈ ಅದೃಷ್ಟ ಒಲಿಯಲಿದೆ ಎಂದು ಸರ್ಕಾರದ ಮೂಲಗಳು ಸುಳ್‌ ಸುದ್ದಿಗೆ ತಿಳಿಸಿವೆ.

Trending videos

Back to Top