CONNECT WITH US  

ಜಂಗ್‌ ಜತೆ ಸ್ನೇಹಹಸ್ತ: ಆಪ್‌ಗೆ ಸೇರುವಂತೆ ಕೇಜ್ರಿವಾಲ್‌ ಆಹ್ವಾನ!

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಜತೆ ದೀರ್ಘ‌ ಕಾಲದಿಂದ ಕಾದಾಡುತ್ತಲೇ
ಇದ್ದ ದೆಹಲಿ ಉಪರಾಜ್ಯಪಾಲ ನಜೀಬ್‌ ಜಂಗ್‌ ಅಚ್ಚರಿಯ ರಾಜೀನಾಮೆ ಪ್ರಕಟಿಸಿದ್ದಾರೆ. ಈ ಮೂಲಕ ದೆಹಲಿ
ಯಲ್ಲಿ ಇಷ್ಟು ದಿನ ನಡೆಯುತ್ತಿದ್ದ ಜಂಗ್‌- ಕೇಜ್ರಿವಾಲ್‌ ಜಗಳಕ್ಕೂ ತೆರೆಬಿದ್ದಿದೆ. ಜಂಗ್‌ ಅವರ ರಾಜೀನಾಮೆಯ ಬಳಿಕ ಕೇಜ್ರಿವಾಲ್‌ ಮನಸ್ಸು ಬದಲಿಸಿದ್ದಾರೆ. ಹಿಂದಿನ ಎಲ್ಲಾ ವೈಷಮ್ಯಗಳನ್ನು ಮರೆತು ಸ್ನೇಹ ಹಸ್ತ ಚಾಚಿದ್ದಾರೆ.

ಜಗಳವಾಡುವುದರಲ್ಲಿ ತಮ್ಮ ಸರಿಸಮಕ್ಕಿರುವ ಜಂಗ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ಅವರು ಮುಂದಾಗಿದ್ದು, ಜಂಗ್‌ ಅವರನ್ನು ಖುದ್ದು ಬೇಟಿ ಮಾಡಿ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದ್ದಾರೆ. ಈ ಆಹ್ವಾನದ ಕುರಿತು ಜಂಗ್‌ ಅವರು ಈಗಲೇ ಏನನ್ನೂ ಹೇಳಿಲ್ಲ. ಆದರೆ, ಒಂದು ವೇಳೆ ಮೋದಿ ಅವರಿಂದ ಯಾವುದೇ ಆಫ‌ರ್‌ ಸಿಗದಿದ್ದರೆ, ಆಪ್‌ಗೆ ಸೇರುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ ಎಂದು ಸುಳ್‌ ಸುದ್ದಿ ಮೂಲಗಳು ತಿಳಿಸಿವೆ.

Trending videos

Back to Top