CONNECT WITH US  

ಎಟಿಎಂ ಮಷೀನ್‌ಗಳು ಅಡಕೆ ಸುಲಿವ ಯಂತ್ರಗಳಾಗಿ ಪರಿವರ್ತನೆ

ಶಿವಮೊಗ್ಗ: ನಗದು ರಹಿತ ವಹಿವಾಟನ್ನು ಕೇಂದ್ರ ಸರ್ಕಾರ ಉತ್ತೇಜಿಸುತ್ತಿರುವುದರಿಂದ ಎಟಿಎಂಗಳಿಗೆ ಹಣ ಹಾಕುವುದು ಕಡಿಮೆಯಾಗಿದೆ. ಈ ಪರಿಣಾಮ ಸುಮಾರು ಅರ್ಧಕ್ಕೂ ಹೆಚ್ಚು ಎಟಿಎಂಗಳು ನಿರುಪಯುಕ್ತವಾಗುತ್ತವೆ. ಈ ಹಿನ್ನೆಲೆಯಲ್ಲಿ ಎಟಿಎಂ ಯಂತ್ರಗಳನ್ನೇ ಪರಿವರ್ತಿಸಿ, ಅದನ್ನು ಅಡಕೆ ಸುಲಿವ ಯಂತ್ರಗಳನ್ನಾಗಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ನಿರುಪಯೋಗಿ ಎಟಿಎಂ ಯಂತ್ರಗಳನ್ನು ಎಂಜಿನಿಯರ್‌ಗಳ ಸಹಾಯದಿಂದ ಪರಿವರ್ತಿಸಲಾಗುತ್ತಿದ್ದು, ಅಡಕೆ ಬೆಳೆವ ಪ್ರದೇಶಗಳಲ್ಲಿ ಅವುಗಳನ್ನು ಪರಿಶೀಲಿಸಲಾಗುವುದು. ಈ ಯಂತ್ರ ಅತ್ಯಾಧುನಿಕವಾಗಿದ್ದು, ಸ್ಕ್ರೀನ್‌ನಲ್ಲಿ ಎಷ್ಟು ಅಡಕೆ ಸುಲಿದಿದೆ ಎಂಬುದನ್ನೂ ತೋರಿಸುತ್ತದೆ. ಥೇಟ್‌ ಎಟಿಎಂ ಮಷೀನ್‌ ನಗದು ಪಡೆದ ಬಳಿಕ ರಸೀತಿ ಕೊಡುವಂತೆ ಅಡಕೆ ಸುಲಿದ ವಿವರಗಳನ್ನು ನೀಡುತ್ತದೆ. ಇನ್ನು ಒಂದೇ ತಿಂಗಳಲ್ಲಿ ಇದನ್ನು ಮೊದಲು ಶಿವಮೊಗ್ಗದಲ್ಲಿ ಪರೀಕ್ಷಿಸಲಾಗುವುದು. ವಿವಿಧ ರೀತಿಯ ಅಡಕೆ ಸುಲಿದು ಬದಲಾವಣೆ ಬೇಕಿದ್ದಲ್ಲಿ ಸುಧಾರಣೆ ತರಲಾಗುವುದು.

Tags: 

Trending videos

Back to Top