CONNECT WITH US  

ಕೇಂದ್ರದಿಂದ ಮನೆ ಮನೆಗೆ ನೋಟು ಎಣಿಸುವ ಯಂತ್ರ!

ನವದೆಹಲಿ: 500, 1000 ರೂ. ನೋಟು ನಿಷೇಧ ಬಳಿಕ 100 ರೂ. ನೋಟುಗಳನ್ನೇ ಇಟ್ಟುಕೊಂಡಿರುವವರ ಸಂಖ್ಯೆ ಹೆಚ್ಚಾಗಿದೆ. ದೊಡ್ಡ ಮೊತ್ತವಿದ್ದರೆ ಇದನ್ನು ಎಣಿಸಿಕೊಳ್ಳಲು ಕಷ್ಟವಾಗುತ್ತಿದೆ. ಜನರ ಈ ಕಷ್ಟವನ್ನು ಮನಗಂಡು ಕೇಂದ್ರ ಸರ್ಕಾರವೇ ಪ್ರತಿ ಮನೆಗೆ ನೋಟು ಎಣಿಸುವ ಯಂತ್ರಗಳನ್ನು ನೀಡಲು ಉದ್ದೇಶಿಸಿದೆ. ವಾರ್ಷಿಕ 2.5 ಲಕ್ಷ ಮೇಲ್ಪಟ್ಟು ಆದಾಯ ಹೊಂದಿದವರಿಗೆ ನೋಟು ಎಣಿಸುವ ಯಂತ್ರಗಳನ್ನು ಕಡಿಮೆ ಬೆಲೆಗೆ ನೀಡಲಾಗುತ್ತದೆ.

ಆಧಾರ್‌, ಪಾನ್‌ ನಂಬರ್‌ ಕೊಟ್ಟು, ಕೇವಲ 2 ಸಾವಿರ ಬೆಲೆಗೆ ಅತ್ಯಾಧುನಿಕ ನೋಟು ಎಣಿಸುವ ಯಂತ್ರಗಳನ್ನು ಪಡೆಯಬಹುದು. ಕೇಂದ್ರ ಸರ್ಕಾರದ ಸೂಚಿಸಿದ ಆಯ್ದ ಮಾರಾಟ ಕೇಂದ್ರಗಳಲ್ಲಿ ನೋಟು ಎಣಿಸುವ ಯಂತ್ರಗಳು ಲಭ್ಯವಿರಲಿವೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಸುಳ್‌ಸುದ್ದಿ ಮೂಲಗಳು ಹೇಳಿವೆ. 

ಇಂದು ಹೆಚ್ಚು ಓದಿದ್ದು

ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವ ರಮೇಶ ಜಾರಕಿಹೊಳಿ.

Nov 19, 2018 06:00am

ಬಾಗಲಕೋಟೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ ಬೆಂಕಿಗೆ ಆಹುತಿ.

Nov 19, 2018 06:00am

Trending videos

Back to Top