CONNECT WITH US  

ಎಟಿಎಂ ಮುಂದೆ ಅತಿ ಹೆಚ್ಚು ಹೊತ್ತು ನಿಂತವ್ರಿಗೆ ಬಹುಮಾನ!

ನವದೆಹಲಿ: ಡಿಜಿಟಲ್‌ ಪಾವತಿ ಮಾಡಿದವರಿಗೆ ಕೇಂದ್ರ ಸರ್ಕಾರ ಬಹುಮಾನ ಘೋಷಣೆ ಮಾಡಿದ ಬೆನ್ನಲ್ಲೇ ಎಟಿಎಂ ಮುಂದೆ ಅತಿ ಹೆಚ್ಚು ಕ್ಯೂ ನಿಂತವರಿಗೂ ಬಹುಮಾನ ನೀಡುವ ಯೋಜನೆಯನ್ನು ಪ್ರಕಟಿಸಿದೆ. ಇದಕ್ಕಾಗಿ ಕ್ಯೂ ನಿಂತವರು, ವಿಶೇಷ ಮೊಬೈಲ್‌ ಆ್ಯಪ್‌ ಬಳಸಿ ಎಷ್ಟು ಹೊತ್ತು ಕ್ಯೂ ನಿಂತಿದ್ದೇವೆ ಎಂದು ನಮೂದಿಸಿ, ಅದೃಷ್ಟದಾಟದಲ್ಲಿ ಭಾಗಿಯಾಗಬಹುದು.

ಎಟಿಎಂ ಮುಂದೆ ಅತಿ ಹೆಚ್ಚು ಹೊತ್ತು ಸಾಲಲ್ಲಿ ನಿಂತಿದ್ದವರನ್ನು "ದೇಶಭಕ್ತ'ರೆಂದು ಪರಿಗಣಿಸಿ, ಬಹುಮಾನ ಯೋಜನೆ ಪ್ರಕಟಿಸಲಾಗಿದೆ. 10 ಗಂಟೆ ಮೇಲ್ಪಟ್ಟು ಸಾಲಲ್ಲಿ ನಿಂತವರಿಗೆ 10 ಲಕ್ಷ ರೂ. ಗೆಲ್ಲುವ ಅವಕಾಶವಿದೆ. ದಿನದಲ್ಲಿ ಎಷ್ಟು ಹೊತ್ತು ನಗದಿಗಾಗಿ ನಿಂತಿದ್ದೇವೆ ಎಂಬುದನ್ನು ಇಬ್ಬರು ಸಾಕ್ಷಿಗಳೊಂದಿಗೆ ಆ್ಯಪ್‌ನಲ್ಲಿ ನಮೂದಿಸಬೇಕಾಗುತ್ತದೆ. ಜ.1ರಂದು ಇದರ ಡ್ರಾ ನಡೆಯಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಸುಳ್‌ಸುದ್ದಿಗೆ ಹೇಳಿವೆ. 

Trending videos

Back to Top