CONNECT WITH US  

ಜನಾರ್ದನ ಪೂಜಾರಿ ಬಾಯಿ ಮುಚ್ಚಿಸಲು ಪ್ರತ್ಯೇಕ ಘಟಕ!

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್‌ ಮುಖಂಡ ಜನಾರ್ದನ ಪೂಜಾರಿಯವರು ವಿರೋಧ ಪಕ್ಷಗಳಿಗಿಂತಲೂ ಹೆಚ್ಚಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ವಿವಿಧ ಕಾರಣಗಳಿಗೆ ಟೀಕಿಸುತ್ತಿದ್ದಾರೆ.

ಇದು ಕಾಂಗ್ರೆಸ್ಸಿಗರಿಗೆ ತಲೆನೋವು ತಂದಿದ್ದು, ಅವರ ಬಾಯು¾ಚ್ಚಿಸಲು ಪ್ರತ್ಯೇಕ ಘಟಕ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಪೂ.ಬಾ.ಮು.ಸ (ಪೂಜಾರಿ ಬಾಯಿ ಮುಚ್ಚಿಸುವ ಸಂಘ) ಹೆಸರಿನ ಪ್ರತ್ಯೇಕ ಘಟಕ ಬರಲಿದ್ದು, ಪೂಜಾರಿ ಅವರು ಟೀಕಿಸುವ ವೇಳೆ ಸರ್ಕಾರವನ್ನು ಸಮರ್ಥಿಸಿಕೊಳ್ಳಲಿದೆ. ಜೊತೆಗೆ ಪೂಜಾರಿ ಅವರ ಮನವೊಲಿಸುವುದು, ನಿರಂತರ ಅವರಿಗೆ ಸರ್ಕಾರದ ಒಳ್ಳೆಯ ವಿಚಾರ ಹೇಳುವುದು, ಅದನ್ನೂ ಕೇಳದಿದ್ದರೆ, ಅವರನ್ನು ದೂರದೂರಿಗೆ ಪ್ರವಾಸ ಕರೆದೊಯ್ಯುವುದು ಈ ಮೂಲಕ ಸರ್ಕಾರಕ್ಕೆ ನೆಮ್ಮದಿ ಸಿಗುವಂತೆ ಮಾಡುವುದು ಈ ಘಟಕದ ಉದ್ದೇಶವಾಗಿರಲಿದೆ. ಘಟಕದ ಪ್ರತಿ ಇಬ್ಬರು ಪೂಜಾರಿ ಅವರೊಂದಿಗೆ ನಿರಂತರ ಜತೆಗಿದ್ದು , ಅವರು ಸಾಧ್ಯವಾದಷ್ಟೂ ಸರ್ಕಾರ ವಿರುದ್ಧ ಕಡಿಮೆ ಹೇಳಿಕೆ ನೀಡುವಂತೆ ನೋಡಿಕೊಳ್ಳಲಿದ್ದಾರೆ ಎಂದು ಸುಳ್‌ಸುದ್ದಿ ಮೂಲಗಳು ಹೇಳಿವೆ.

Trending videos

Back to Top