CONNECT WITH US  

ಹೊಸ ವರ್ಷಕ್ಕೆ ಮದ್ಯಭಾಗ್ಯ

ಬೆಂಗಳೂರು: ಹೊಸ ವರ್ಷಾಚರಣೆ ಹತ್ತಿರ ಬರುತ್ತಿರುವಂತೆಯೇ, ರಾಜ್ಯ ಸರ್ಕಾರ ಹೊಸ ಭಾಗ್ಯ
ಯೋಜನೆಯೊಂದನ್ನು ಒಂದು ದಿನದ ಮಟ್ಟಿಗೆ ಕಲ್ಪಿಸಲಿದೆ. ಡಿಸೆಂಬರ್‌ 31ರ ರಾತ್ರಿ 8ರಿಂದ 10ರವರೆಗೆ ಈ ಯೋಜನೆ ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಕಲ್ಪಿಸಲಾಗುವುದು. ಎಪಿಎಲ್‌ ಚೀಟಿ ಹೊಂದಿದವರಿಗೆ 60 ಎಂ.ಎಲ್‌., ಬಿಪಿಎಲ್‌ ಹೊಂದಿದವರಿಗೆ 90 ಎಂ.ಎಲ್‌. ಮದ್ಯವನ್ನು ನೀಡಲಾಗುತ್ತದೆ. ಮದ್ಯ ಕುಡಿಯಲು ಬಂದವರು ಗುರುತಿನ ಚೀಟಿ ತರಬೇಕಾದ್ದು ಕಡ್ಡಾಯ. ಮದ್ಯ ಉಚಿತವಾಗಿದ್ದು, ಬಜ್ಜಿ, ಮಸಾಲೆ ಕಡಲೆ ಬೇಕಾದಲ್ಲಿ ದುಡ್ಡು ಪಾವತಿಸಬೇಕಾಗುತ್ತದೆ. 

ಹೊಸ ವರ್ಷಾಚರಣೆಯನ್ನು ಎಲ್ಲರೂ ಸಂಭ್ರಮದಿಂದ ಆಚರಿಸಬೇಕು ಮತ್ತು ಎಲ್ಲರಿಗೂ ಮದ್ಯದಂಗಡಿಗೆ
ಹೋಗಿ ದುಬಾರಿ ಮದ್ಯ ಸೇವಿಸಲು ಸಾಧ್ಯವಾಗುವುದಿಲ್ಲ. ಇದನ್ನು ಮನಗಂಡು ಸರ್ಕಾರ ವತಿಯಿಂದಲೇ ಈ
ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸುಳ್‌ಸುದ್ದಿ ಮೂಲಗಳು ಹೇಳಿವೆ. 

Trending videos

Back to Top