CONNECT WITH US  

100, 50 ಮುಖಬೆಲೆ ನೋಟು ಕೂಡ ನಿಷೇಧ!

ನವದೆಹಲಿ: ಹಳೇ 500, 1000 ರೂ. ನೋಟು ನಿಷೇಧಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಹೊಸ ವರ್ಷಕ್ಕೆ ಮತ್ತೂಂದು ಶಾಕ್‌ ಕೊಡಲಿದ್ದಾರೆ. ಶನಿವಾರ ರಾತ್ರಿ ಅವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದು, ಈ ವೇಳೆ 100, 50 ರೂ. ನೋಟುಗಳನ್ನು ರದ್ದು ಮಾಡುವ ನಿರ್ಧಾರ ಪ್ರಕಟಿಸಲಿದ್ದಾರೆ. ದೊಡ್ಡ ನೋಟುಗಳ ನಿಷೇಧ ಬಳಿಕ ಜನರು 100, 50 ರೂ. ನೋಟುಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಆರಂಭಿಸಿದ್ದಾರೆ. ಲಂಚ ಕೂಡ ಇದರಲ್ಲೇ ನೀಡಲಾಗುತ್ತದೆ. ಇದನ್ನು ತಪ್ಪಿಸಲು, ಈ ನೋಟು ಕೂಡ ನಿಷೇಧಿಸಲಿದ್ದಾರೆ. ಈ ನಿಷೇಧ ವಿಚಾರ ಪ್ರಧಾನಿ ಅವರು ಕಾರ್ಯಾಲಯದಲ್ಲಿ ನಡೆದಾಡುತ್ತಿರುವಾಗ ಕಿಸೆಯಿಂದ ಬಿದ್ದ ಪುಟ್ಟ ಭಾಷಣ ಚೀಟಿ ಕಸ ಗುಡಿಸುವವರಿಗೆ ಸಿಕ್ಕಿದ್ದು, ಮಾಹಿತಿ ಸೋರಿದೆ. ಇನ್ನು ನೋಟು ನಿಷೇಧ ಬಳಿಕ ಕೇಂದ್ರ ಸರ್ಕಾರ ಹೋಟೆಲ್‌ ಗಳಲ್ಲಿರುವ ರೀತಿಯ ಪ್ಲಾಸ್ಟಿಕ್‌ ಟೋಕನ್‌ ವಿತರಿಸಲಿದ್ದು, ನೋಟುಗಳ ಬದಲಿಗೆ ವ್ಯವಹಾರಕ್ಕೆ ಬಳಸಿಕೊಳ್ಳಬಹುದು. ಒಬ್ಬರಿಗೆ 4 ಟೋಕನ್‌ ನಿಗದಿ ಪಡಿಸಲಾಗಿದೆ. ಟೋಕನ್‌ ಅವಧಿ 50 ದಿನ ಎಂದು ಸುಳ್‌ಸುದ್ದಿ ಮೂಲ ಹೇಳಿವೆ.

Trending videos

Back to Top