CONNECT WITH US  

2017ಕ್ಕೆ ರಾಜಕಾರಣಿಗಳು, ಗಣ್ಯರ ರೆಸೊಲ್ಯೂಷನ್‌!

ನವದೆಹಲಿ: 2017ಕ್ಕೆ ರಾಜಕಾರಣಿಗಳು, ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳು ಹೊಸದಾಗಿ ರೆಸೊಲ್ಯೂಷನ್‌ ಕೈಗೊಂಡಿದ್ದಾರೆ. ಯಾರ್ಯಾರು ಯಾವ್ಯಾವ ರೆಸೊಲ್ಯೂಷನ್‌ ಕೈಗೊಂಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

„ ಮೋದಿ: ಮುಂದಿನ ವರ್ಷದಿಂದ ಪ್ರತಿ ತಿಂಗಳೂ ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತೇನೆ.

„ ರಾಹುಲ್‌ ಗಾಂಧಿ: ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರುತ್ತೇನೆ.

„ ಸಿದ್ದರಾಮಯ್ಯ: ಅಧಿವೇಶನ, ಸಭೆ ಸಮಾರಂಭಗಳಲ್ಲಿ ನಿದ್ದೆಗೆ ಜಾರುವುದಿಲ್ಲ. ಎಚ್ಚರವಾಗಿರುತ್ತೇನೆ.

„ ಸಲ್ಮಾನ್‌ ಖಾನ್‌: ಈ ವರ್ಷವೇ ಮದುವೆಯಾಗುತ್ತೇನೆ.

„ ಕೇಜ್ರಿವಾಲ್‌: ಮೋದಿ ವಿರುದ್ಧ ಆರೋಪ ಮಾಡುವುದನ್ನು ನಿಲ್ಲಿಸುತ್ತೇನೆ.

„ ಮುಲಾಯಂ ಸಿಂಗ್‌: ಪುತ್ರ ಅಖೀಲೇಶ್‌ ಯಾದವ್‌ ಜತೆ ಜಗಳವಾಡುವುದಿಲ್ಲ.

„ ಅರ್ನಾಬ್‌ ಗೋಸ್ವಾಮಿ: ಹೊಸ ಟೀವಿ ಚಾನಲ್‌ ನಲ್ಲಿ ಪ್ಯಾನಲ್‌ ಡಿಸ್ಕಷನ್‌ ಮಾಡೋದಿಲ್ಲ. ಯಾರನ್ನೂ ಬಯ್ಯೋದಿಲ್ಲ.

„ ಯಡಿಯೂರಪ್ಪ: ನಾನು ಮತ್ತು ಈಶ್ವರಪ್ಪ ಜತೆಯಾಗಿ ಚುನಾವಣಾ ಪ್ರಚಾರ ಮಾಡುತ್ತೇವೆ.

„ ರತನ್‌ ಟಾಟಾ: ಸೈರಸ್‌ ಮಿಸ್ತ್ರೀ  ಜತೆಗಿನ ಈ ವರ್ಷವೇ ಜಗಳಕ್ಕೆ ಅಂತ್ಯ ಹಾಡುತ್ತೇನೆ.

Trending videos

Back to Top