CONNECT WITH US  

ಜಟ್ಟಿ ಕಾಳಗ ನಡೆಸಿ ಎಸ್ಪಿ ಮುಖ್ಯಸ್ಥ ಹುದ್ದೆಗೆ ಆಯ್ಕೆ

ಲಕ್ನೋ: ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಸಮಾಜವಾದಿ ಪಕ್ಷದೊಳಗೆ ಕುಟುಂಬ ಕಲಹ ತಾರಕಕ್ಕೇರಿದ್ದು, ಪಕ್ಷದ ಮುಖ್ಯಸ್ಥ ಹುದ್ದೆಗೆ ಎಂದೂ ಇಲ್ಲದಂತೆ ಕಿತ್ತಾಟ ನಡೆದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಸ್ಥನ ಆಯ್ಕೆ ಮಾಡುವುದು ಕಷ್ಟಕರವೂ ಆಗಿದೆ. ಆದ್ದರಿಂದ ಪಕ್ಷದ ಕಾರ್ಯಕರ್ತರು, ಮುಲಾಯಂ ಅವರ ಇಷ್ಟವಾದ ಜಟ್ಟಿ ಕಾಳಗ ನಡೆಸಿ ಗೆದ್ದವರನ್ನು ಪಕ್ಷದ ಹುದ್ದೆಯಲ್ಲಿ ಕೂರಿಸಲು ತೀರ್ಮಾನಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಜಟ್ಟಿ ಕಾಳಗವನ್ನು ಲಕ್ನೋದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಅಖೀಲೇಶ್‌ ಯಾದವ್‌, ಶಿವ ಪಾಲ್‌ ಯಾದವ್‌, ಮುಲಾಯಂ ಸಿಂಗ್‌ ಯಾದವ್‌ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ. ಎರಡು ಬಾರಿ ಸ್ಪರ್ಧೆ ನಡೆಯಲಿದ್ದು, ಸೆಮಿಫೈನಲ್‌ ಆಗಿ ಫೈನಲ್‌ನಲ್ಲಿ ನಾಯ
ಕನ ಆಯ್ಕೆ ನಡೆಯಲಿದೆ. ಆದ್ದರಿಂದ ಸದ್ಯ ಮೂವರೂ ನಾಯಕರ ಬೆಂಬಲಿಗರು ನಾಯಕರಿಗೆ ಜಟ್ಟಿ ಕಾಳ ಗದ ಪಟ್ಟುಗಳ ಬಗ್ಗೆ ತರಬೇತಿ ಕೊಡುವುದರಲ್ಲಿ ನಿರತರಾಗಿದ್ದಾರೆ. ಜಟ್ಟಿ ಕಾಳಗಕ್ಕೆ ವೀಕ್ಷಕರಾಗಿ ಹಿರಿಯ ಕಾಂಗ್ರೆಸ್‌
ನಾಯಕರು ಆಗಮಿಸಲಿದ್ದಾರೆ. ಸೀಸಿಟೀವಿ ಅಳವಡಿಸಲಾಗುತ್ತಿದ್ದು, ಕಂಪ್ಯೂಟರೀಕೃತ ತೀರ್ಪನ್ನು ನೀಡಲಾ
ಗುವುದು. ಮೋಸಕ್ಕೆ ಅವಕಾಶವಿಲ್ಲ ಎಂದು ಸಮಾಜವಾದಿ ಪಕ್ಷದ ಮೂಲಗಳು ಸುಳ್‌ಸುದ್ದಿಗೆ ತಿಳಿಸಿವೆ.

Tags: 

Trending videos

Back to Top