CONNECT WITH US  

ಎಟಿಎಂ ಮುಂದೆ ನಿಂತವರಿಗೂ ಇನ್ನು ಲಕ್ಕಿ ಡಿಪ್‌!

ನವದೆಹಲಿ: ನಗದು ರಹಿತ ವ್ಯವಹಾರ ನಡೆಸಿದವರಿಗೆ ಕೇಂದ್ರ ಸರ್ಕಾರ ಅದೃಷ್ಟ ಬಹುಮಾನ ಯೋಜನೆ ಹೊರತಂದಿರುವ ಬೆನ್ನಲ್ಲೇ, ಎಟಿಎಂ ಮುಂದೆ ಸರತಿಯಲ್ಲಿನಿಂತವರಿಗೂ ಅದೃಷ್ಟ ಬಹುಮಾನ ಯೋಜನೆ ತರಲು ಉದ್ದೇಶಿಸಲಾಗಿದೆ. ಯೋಜನೆ ಅನ್ವಯ ಎಟಿಎಂ ಮುಂದೆ ಹಣ ಡ್ರಾ ಮಾಡಲು ಸರತಿಯಲ್ಲಿ ನಿಂತವರು ಅಲ್ಲೇ ಬಾಕ್ಸ್‌ನಲ್ಲಿರುವ ಚೀಟಿಯನ್ನು ಎತ್ತಿ, ಹೆಸರು, ಪಾನ್‌ ಸಂಖ್ಯೆ ನಮೂದಿಸಿ ಇನ್ನೊಂದು ಬಾಕ್ಸ್‌ಗೆ ಹಾಕಬೇಕು.

ಎಟಿಎಂ ಮುಂದೆ ತಾಸುಗಟ್ಟಲೆ ಸರತಿ ನಿಂತರೂ ಬೇಸರವಾಗಬಾರದು ಎಂಬ ನಿಟ್ಟಿನಲ್ಲಿ ಅದೃಷ್ಟ ಯೋಜನೆ ತರಲಾಗಿದೆ. ಗೆದ್ದವರಿಗೆ ಪ್ರಥಮ ಬಹುಮಾನವಾಗಿ ಉಚಿತವಾಗಿ ದೆಹಲಿ ಪ್ರವಾಸ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಮಾಡುವ ಅವಕಾಶವಿದೆ. ಎರಡನೇ ಬಹುಮಾನವಾಗಿ 10 ಸಾವಿರ ರೂ. ಮೊತ್ತಕ್ಕೆ ಉಚಿತ ಶಾಪಿಂಗ್‌ ಮಾಡುವ ಅವಕಾಶ, ಮೂರನೇ ಬಹುಮಾನವಾಗಿ ಮುಂದಿನ 10 ಬಾರಿ ಸರತಿಯಲ್ಲಿ ನಿಲ್ಲದೇ ನೇರ ಎಟಿಎಂಗೆ ಹೋಗಿ ಹಣ ಡ್ರಾ ಮಾಡಬಹುದಾದ ಅವಕಾಶ ನೀಡಲಾಗುತ್ತದೆ. ಪ್ರತಿ ವಾರ ಈ ಅದೃಷ್ಟ ಯೋಜನೆ ಡ್ರಾ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 


Trending videos

Back to Top