CONNECT WITH US  

ಅಪ್ಪನ ಜತೆ ಜಗಳವಾಡಲು ಅಖಿಲೇಶ್‌ಗೆ ಕಾಟ್ಜು  ಟ್ರೇನಿಂಗ್‌!

ಲಕ್ನೋ: ಉತ್ತರಪ್ರದೇಶದಲ್ಲಿ ತಮ್ಮ ಸಮಾಜವಾದಿ ಪಕ್ಷ ಮತ್ತೆ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾ| ಮಾರ್ಕಂಡೇಯ ಕಾಟ್ಜು  ಹೇಳಿರುವುದರಿಂದ ಅಖಿಲೇಶ್‌ ಯಾದವ್‌ಗೆ ಆನೆ ಬಲ ಬಂದಂತಾಗಿದೆ. ಹೀಗಾಗಿ ತಂದೆ ಮುಲಾಯಂ ಸಿಂಗ್‌ ಮತ್ತು ಚಿಕ್ಕಪ್ಪ ಶಿವಪಾಲ್‌ ಯಾದವ್‌ ಜತೆ ಜಗಳವಾಡುವುದಕ್ಕೆ ಅಖೀಲೇಶ್‌ ಯಾದವ್‌ ಅವರು ಕಾಟ್ಜು ನೆರವನ್ನು ಯಾಚಿಸಿದ್ದಾರೆ.

ವಿವಾದಿತ ಹೇಳಿಕೆಗಳನ್ನು ನೀಡುವುದು ಹೇಗೆ, ಜಗಳವಾಡಿ ಎದುರಾಳಿಗಳ ಬಾಯಿ ಮುಚ್ಚಿಸುವುದು ಹೇಗೆ, ಯಾವ ಸಂದರ್ಭದಲ್ಲಿ ಯಾವ ಹೇಳಿಕೆ ನೀಡಬೇಕು ಎಂಬ ವಿಷಯದಲ್ಲಿ ಕಾಟ್ಜು  ಅವರಿಗೆ ವಿಶೇಷ ಪ್ರಾವೀಣ್ಯವಿದೆ. ಅಖೀಲೇಶ್‌ಗೂ ಈಗ ಅದರ ಅಗತ್ಯವಿದೆ. ಹೀಗಾಗಿ ಅವರು ಕಾಟ್ಜು  ಅವರಿಂದ ತರಬೇತಿ ಪಡೆಯಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.


Trending videos

Back to Top