CONNECT WITH US  

ಈಶ್ವರಪ್ಪ-ಬಿಎಸ್‌ವೈಗೆ "ಕೂಡಿ ಬಾಳಿದರೆ ಸ್ವರ್ಗ' ತೋರಿಸಲು ಸಿದ್ಧತೆ!

ಬೆಂಗಳೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಹುಟ್ಟು,ಅದರ ಕಾರ್ಯಕ್ರಮ ಸಂಘಟನೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಸಡ್ಡು ಹೊಡೆದ ವಿಚಾರದಲ್ಲಿ ಹಿರಿಯ ನಾಯಕ ಈಶ್ವರಪ್ಪ-ಯಡಿಯೂರಪ್ಪ ಅವರ ಮಧ್ಯೆ ಶೀತಲ ಸಮರ ಮೇರೆ ಮೀರಿದೆ. ಇದು ಬಿಜೆಪಿ ಹೈಕಮಾಂಡ್‌ಗೆ ಚಿಂತೆಗೆ ಕಾರಣವಾಗಿದ್ದು, ಇಬ್ಬರನ್ನೂ ಒಂದಾಗಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ.

ಇದಕ್ಕಾಗಿ ಹೈಕಮಾಂಡ್‌ ಕನ್ನಡ ಚಿತ್ರ "ಕೂಡಿ ಬಾಳಿದರೆ ಸ್ವರ್ಗ ಸುಖ' ಚಿತ್ರವನ್ನು ಇಬ್ಬರೂ ನಾಯಕರಿಗೆ ತೋರಿಸಲು ಮುಂದಾಗಿದೆ. ಈ ಚಿತ್ರದಲ್ಲಿರುವ ನೀತಿಯನ್ನು ಅರಿತು ಇಬ್ಬರೂ ನಾಯಕರು ಹೊಂದಾಣಿಕೆಯಿಂದ ಮುಂದೆ ಹೋಗಲಿದ್ದಾರೆ ಎಂಬ ಆಶಾಭಾವನೆ ಇದೆ. ಬೆಂಗಳೂರಿನ ಮಲ್ಟಿಪ್ಲೆಕ್ಸ್‌ ಒಂದರಲ್ಲಿ ಈ ಚಿತ್ರ ತೋರಿಸಲಾಗುತ್ತಿದ್ದು, ಪಕ್ಷದ ಸಂಘಟನೆಗೆ ಶ್ರಮಿಸುವಂತೆ ಕಿವಿಮಾತು ಹೇಳಲಾಗುವುದು ಎಂದು ಹೈಕಮಾಂಡ್‌ ಮೂಲಗಳು ಸುಳ್‌ಸುದ್ದಿಗೆ ಹೇಳಿವೆ. 

Trending videos

Back to Top