CONNECT WITH US  

ಶ್ರೀಲಂಕಾದಲ್ಲಿ ಜಲ್ಲಿಕಟ್ಟು ಆಯೋಜನೆ:ತಮಿಳುನಾಡಿನಿಂದ ವಿಶೇಷ ವ್ಯವಸ್ಥೆ

ಚೆನ್ನೈ: ಈ ಬಾರಿಯಾದರೂ ಜಲ್ಲಿಕಟ್ಟು ಕ್ರೀಡೆ ಆಯೋಜಿಸಬಹುದು ಎಂದು ಕಾದು ಕುಳಿತಿದ್ದ ತಮಿಳುನಾಡಿನ ಜನರಿಗೆ ನಿರಾಶೆಯಾಗಿದೆ.ಸುಪ್ರೀಂಕೋರ್ಟ್‌ನ ಅನುಮತಿ ದೊರೆಯದೇ ಇರುವುದರಿಂದ ಈ ಬಾರಿ ಜಲ್ಲಿಕಟ್ಟು ಕ್ರೀಡೆಯನ್ನು ವಿದೇಶದಲ್ಲಿ ಆಯೋಜಿಸಲು ತಮಿಳುನಾಡು ಸರ್ಕಾರ ಮುಂದಾಗಿದೆ. ಇನ್ನು ಪೊಂಗಲ್‌ ಹಬ್ಬಕ್ಕೆ ಒಂದೇ ದಿನ ಮಾತ್ರ ಬಾಕಿ ಇರುವುದರಿಂದ ಹತ್ತಿರದ ದೇಶಗಳಾದ ಶ್ರೀಲಂಕಾ, ಮ್ಯಾನ್ಮಾರ್‌ ಮಾಲ್ಡೀವ್ಸ್‌ ಸರ್ಕಾರಗಳ ಜತೆ ಮಾತುಕತೆಯನ್ನೂ ನಡೆಸಲಾಗಿದ್ದು, ಜಲ್ಲಿಕಟ್ಟು ಕ್ರೀಡೆಯನ್ನು ತನ್ನ ದೇಶದಲ್ಲಿ ಆಯೋಜಿಸಲು ಶ್ರೀಲಂಕಾ ಸರ್ಕಾರ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಹಡಗು, ದೋಣಿ, ವಿಮಾನ ಹೀಗೆ ಲಭ್ಯವಿರುವ ಎಲ್ಲಾ ಸಾರಿಗೆಯ ಮೂಲಕ ಕ್ರೀಡಾ ಉತ್ಸಾಹಿಗಳನ್ನು ಮತ್ತು ಕ್ರೀಡೆಗೆ ಬಳಸುವ ಗೂಳಿಗಳನ್ನು ಶ್ರೀಲಂಕಾಗೆ ಸಾಗಿಸುವ ವ್ಯವಸ್ಥೆ ಕಲ್ಪಿಸಿದೆ.

ಒಂದು ವೇಳೆ ಶ್ರೀಲಂಕಾಕ್ಕೆ ಬರಲು ಸಾಧ್ಯವಾಗದೇ ಇದ್ದವರು ಟೀವಿಯಲ್ಲಿ ನೇರ ಪ್ರಸಾರದ ಮೂಲಕ ಜಲ್ಲಿಕಟ್ಟು ಕ್ರೀಡೆಯನ್ನು ವೀಕ್ಷಿಸಬಹುದುಗಿದೆ ಎಂದು ಸುಳ್‌ ಸುದ್ದಿ ಮೂಲಗಳು ತಿಳಿಸಿವೆ.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top