CONNECT WITH US  

ಕಪಿಲ್‌  ಶೋ ರೀತಿ ರಾಹುಲ್‌ರಿಂದ ಸಿಧು ಜತೆ ಕಾಮಿಡಿ ಶೋ ಆಯೋಜನೆ

ನವದೆಹಲಿ: ಪಂಜಾಬ್‌ ಚುನಾವಣೆಯಲ್ಲಿ ಮೋದಿ ಅವರ ಭಾಷಣದಿಂದ ಜನರ ಗಮನವನ್ನು ತಮ್ಮತ್ತ ಸೆಳೆಯಲು ರಾಹುಲ್‌ ಗಾಂಧಿ ಒಂದು ಸೂಪರ್‌ ಪ್ಲಾನ್‌ ರೂಪಿಸಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿರುವ ಕ್ರಿಕೆಟಿಗ ಮತ್ತು ನುರಿತ ರಾಜಕಾರಣಿ ನವಜೋತ್‌ ಸಿಂಗ್‌ ಸಿಧು ಅವರ ಜತೆಗೂಡಿ ಕಪಿಲ್‌ ಶರ್ಮಾ ಶೋ ರೀತಿಯಲ್ಲೇ, ಪಂಜಾಬ್‌ನ ಪ್ರತಿ ಜಿಲ್ಲೆಗಳಲ್ಲೂ ರಾಹುಲ್‌ ಕಾಮಿಡಿ ಶೋ
ಆಯೋಜನೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಧು ಭಾಷಣ ಮಾಡುವುದಿಲ್ಲ. ಬದಲಾಗಿ ಜನರ ಮಧ್ಯೆ ಅವರಿಗೊಂದು ಆಸನ ಕಲ್ಪಿಸಲಾಗುತ್ತದೆ. ರಾಹುಲ್‌ ಅವರು ಕಾರ್ಯಕ್ರಮದಲ್ಲಿ ಏನೇ ಮಾತನಾಡಿದೂ ಸಿಧು ಅವರು ಸಭೆಗೆ ಕೇಳಿಸುವಂತೆ ಗಹಗಹಿಸಿ ನಗಲಿದ್ದಾರೆ. ಸಿಧು ಅವರ ನಗೆಯಿಂದ ಪುಳಕಿತರಾದ ಜನರು ಮೋದಿ ಅವರ ಭಾಷಣ ಕೇಳುವ ಬದಲು ರಾಹುಲ್‌ ಶೋ ನೋಡಲು
ಮುಗಿಬೀಳಲಿದ್ದಾರೆ. ಇದು ರಾಹುಲ್‌ರ ಚುನಾವಣಾ ತಂತ್ರವಾಗಿದೆ ಎಂದು ಸುಳ್‌ ಸುದ್ದಿ ಮೂಲಗಳು ತಿಳಿಸಿವೆ.

Tags: 

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top