CONNECT WITH US  

ಮೋದಿಗೆ ಸಡ್ಡು:ಪಂಜಾಬ್‌ ಚುನಾವಣೆಯಲ್ಲಿ ಕೇಜ್ರಿವಾಲ್‌ ಪರ ಒಬಾಮಾ ಭಾಷಣ

ನವದೆಹಲಿ: ಪಂಜಾಬ್‌ ಚುನಾವಣೆಯನ್ನು ಶತಾಯಗತಾಯ ಗೆದ್ದೇ ತೀರಬೇಕು ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಪಣತೊಟ್ಟಿದ್ದಾರೆ. ತಮ್ಮ ಭಾಷಣ ಕೇಳಲು ಜನರು ಕಡಿಮೆ ಯಾಗುತ್ತಿರುವುದನ್ನು ಅರಿತಿರುವ ಅವರು ಅಮೆರಿಕದ ಮಾಜಿ ಅಧ್ಯಕ್ಷರಾ ಗುತ್ತಿರುವ ಬರಾಕ್‌ ಒಬಾಮಾ ಅವರನ್ನು ಭಾರತಕ್ಕೆ ಕರೆತಂದು ಪ್ರಚಾರ ಮಾಡಲು ನಿರ್ಧರಿಸಿದ್ದಾರೆ. ಅಮೆರಿಕ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಬಳಿಕ ಮನೆಯಲ್ಲಿ ಖಾಲಿ ಕೂರುವ ಬದಲು ಕೇಜ್ರಿವಾಲ್‌ ಪರ ಪ್ರಚಾರ ಮಾಡಲು ಒಬಾಮಾ ಕೂಡ ಒಪ್ಪಿಕೊಂಡಿದ್ದಾರೆ. ಹೀಗಾಗಿ ಇಷ್ಟು ದಿನ ಸ್ನೇಹಿತರಂತೆ ಇದ್ದ ಮೋದಿ ಅವರ ವಿರುದ್ಧ ಒಬಾಮಾ ಪ್ರಚಾರ ಮಾಡುವುದು ಬಹುತೇಕ ಖಚಿತವಾಗಿದೆ. ತಮ್ಮ ಭಾಷಣವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಒಬಾಮಾ ಹಿಂದಿಯಲ್ಲೇ ಭಾಷಣ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಅವರು ಹಿಂದಿಯನ್ನು ಕಲಿಯುತ್ತಿದ್ದಾರೆ ಎಂದು ಸುಳ್‌ ಸುದ್ದಿ ಮೂಲಗಳು ತಿಳಿಸಿವೆ.


Trending videos

Back to Top