CONNECT WITH US  

ಜಲ್ಲಿಕಟ್ಟು ಇತ್ಯರ್ಥಕ್ಕೆ ಪ್ರತ್ಯೇಕ ಕೋರ್ಟ್‌:ತಮಿಳರ ಒತ್ತಾಯ

ಚೆನ್ನೈ: ಜಲ್ಲಿಕಟ್ಟು ಕ್ರೀಡೆಗೆ ಸುಪ್ರೀಂಕೋರ್ಟ್‌ ಅನುಮತಿ ನೀಡದೇ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ, ಪ್ರಕರಣವನ್ನು ಇತ್ಯರ್ಥ ಪಡಿಸಲು ತಮಿಳುನಾಡಿನಲ್ಲಿಯೇ ಪ್ರತ್ಯೇಕ ಸುಪ್ರೀಂಕೋರ್ಟ್‌ ಸ್ಥಾಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ಜಲ್ಲಿಕಟ್ಟುವಿನ ಬಗ್ಗೆ ಮಾತ್ರ ವಿಚಾರಣೆ ಮಾಡಬೇಕು. ಪ್ರಾಣಿ ಹಿಂಸೆ ನೀಡಲಾಗುತ್ತಿದೆಯೇ ಎಂಬ ಬಗ್ಗೆ ಗೂಳಿಗಳನ್ನೇ ಸಾಕ್ಷಿಗಳನ್ನಾಗಿ ಪರಿಗಣಿಸಬೇಕು. ವಕೀಲರು ಕೇಳುವ ಪ್ರಶ್ನೆಗೆ ಗೂಳಿಗಳು ನೀಡುವ ಉತ್ತರವನ್ನು ಆಧರಿಸಿ, ತೀರ್ಪು ನೀಡಬೇಕು. ಗೂಳಿಗಳು ಸ್ವಯಂಪ್ರೇರಿತವಾಗಿ ಕೋರ್ಟ್‌ಗೆ ಹಾಜರಾಗಿ ಸಾಕ್ಷಿ ಹೇಳಲು ವ್ಯವಸ್ಥೆ ಕಲ್ಪಿಸಬೇಕು. ಅಗತ್ಯವಾದರೆ ಕೋರ್ಟ್‌ ಆವರಣದಲ್ಲೇ ಜಲ್ಲಿಕಟ್ಟು ಏರ್ಪಡಿಸಿ ಅದನ್ನು ವೀಕ್ಷಿಸಿ ತೀರ್ಪು ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ ಎಂದು ಸುಳ್‌ ಸುದ್ದಿ ಮೂಲಗಳು ತಿಳಿಸಿವೆ.

Trending videos

Back to Top