ಎಸ್ಪಿ- ಕಾಂಗ್ರೆಸ್ ಜೋಡಿಸಲು ಫೆವಿಕಾಲ್ ಬಳಸಲು ನಿರ್ಧಾರ!

ನವದೆಹಲಿ: ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಳ್ಳಲು ಮುಂದಾಗಿವೆ. ಆದರೆ, ಮೈತ್ರಿಗೆ ಮುನ್ನವೇ ಬಿರುಕು ಕಾಣಿಸಿಕೊಳ್ಳಲು ಆರಂಭವಾಗಿದ್ದರಿಂದ ಎರಡೂ ಪಕ್ಷಗಳನ್ನು ಪೆವಿಕಾಲ್ ನಿಂದ ಭದ್ರವಾಗಿ ಜೋಡಿಸಲು ಅಖೀಲೇಶ್ ಅವರು ಮುಂದಾಗಿದ್ದಾರೆ. ಇದಕ್ಕಾಗಿ ಸ್ವಲ್ಪವೂ ಜಗ್ಗದ ಅತ್ಯುತ್ತಮ ಗುಣಮಟ್ಟದ ಪೆವಿಕಾಲ್ ಅನ್ನು ಅಖೀಲೇಶ್ ಅವರು ತರಿಸಿದ್ದಾರೆ.
ಎರಡು ಪಕ್ಷಗಳನ್ನು ಜೋಡಿಸುವ ಕಾರ್ಯಕ್ಕೆ ಶೀಘ್ರವೇ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ಕೆ ರಾಹುಲ್ ಗಾಂಧಿ ಕೂಡ ಸಾಥ್ ನೀಡಿದ್ದಾರೆ. ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದರೆ ಯುಪಿಎ ಮೈತ್ರಿ ಪಕ್ಷಗಳನ್ನು ಪೆವಿಕಾಲ್ನಿಂದ ಜೋಡಿಸುವ ಕುರಿತು ರಾಹುಲ್ ಗಾಂಧಿ ಅವರು ಚಿಂತನೆ ನಡೆಸಿದ್ದಾರೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.