CONNECT WITH US  

 ರೈಲ್ವೆ ನಿಲ್ದಾಣದಲ್ಲೂ ಶಾರುಖ್‌ ಖಾನ್‌ರ ರಯೀಸ್‌ ಚಿತ್ರ ಪ್ರದರ್ಶನ

ಮುಂಬೈ: ರೈಲಿನಲ್ಲಿ ಸಂಚರಿಸಿ ಚಿತ್ರ ಪ್ರದರ್ಶನ ಮಾಡಿದ್ದಕ್ಕೆ ಜನರು ತಮ್ಮನ್ನು ಮುತ್ತಿಕೊಳ್ಳುತ್ತಿರುವುದರಿಂದ ಶಾರುಖ್‌ ಖಾನ್‌, ತಮ್ಮ ರಯೀಸ್‌ ಚಿತ್ರವನ್ನು ರೈಲ್ವೆ ಮತ್ತು ರೈಲ್ವೆ ನಿಲ್ದಾಣಗಳಲ್ಲೂ ಪ್ರದರ್ಶನ ಮಾಡಲು ನಿರ್ಧರಿಸಿದ್ದಾರೆ.

ಇದಕ್ಕಾಗಿ ಪ್ರತಿಯೊಂದು ರೈಲಿನಲ್ಲೂ ಒಂದು ಟೀವಿಯನ್ನು ಅಳವಡಿಸಲಾಗುತ್ತಿದ್ದು, ಶಾರುಕ್‌ ಖಾನ್‌ರ ಹೊಸ ಚಿತ್ರ ಪ್ರದರ್ಶನಗೊಳ್ಳಲಿದೆ. ಚಿತ್ರ ವೀಕ್ಷಣೆಗಾಗಿ ರೈಲ್ವೆ ಟಿಕೆಟ್‌ ಮೇಲೆ ಹೆಚ್ಚುವರಿ 10 ರೂ. ಶುಲ್ಕ ವಿಧಿಸಲಾಗುವುದು. ಈ ಕುರಿತಂತೆ ರೈಲ್ವೆ ಇಲಾಖೆಯ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಚಿತ್ರ ಪ್ರದರ್ಶನದಿಂದ ಬರುವ ಲಾಭವವನ್ನು ಲಾಭವನ್ನು ಸಮಾನಾಗಿ ಹಂಚಿಕೊಳ್ಳಲು ಇಬ್ಬರೂ ಸಮ್ಮತಿಸಿದ್ದಾರೆ. ಒಂದು ವೇಳೆ ರೈಲು ಮಿಸ್‌ ಆದವರಿಗೆ ರೈಲ್ವೆ ನಿಲ್ದಾಣದಲ್ಲೂ ಸಿನಿಮಾ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಸುಳ್‌ ಸುದ್ದಿ ಮೂಲಗಳು ತಿಳಿಸಿವೆ.
 

ಇಂದು ಹೆಚ್ಚು ಓದಿದ್ದು

Trending videos

Back to Top