CONNECT WITH US  

ಆ ದಿತಿ!

ಧೈರ್ಯಂ ನಂತರ ಹಿರಿತೆರೆಯಿಂದ ಮಾಯವಾಗಿದ್ದ ಅದಿತಿ ಇದೀಗ ಮತ್ತೆ ಹಿರಿತೆರೆಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಸಿಂಪಲ್‌ ಸುನಿ ನಿರ್ದೇಶನದ ಬಜಾರ್‌ ಎಂಬ ಚಿತ್ರದಲ್ಲಿ ಅದಿತಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿದ್ದು, ಮುಂದಿನ ತಿಂಗಳು ಚಿತ್ರ ಪ್ರಾರಂಭವಾಗಲಿದೆಯಂತೆ. ಆ ಚಿತ್ರದ ಮೂಲಕ ಅದಿತಿ ಮತ್ತೆ ಚಿತ್ರರಂಗಕ್ಕೆ ಬರಲಿದ್ದಾರೆ.

ಎಲ್ಲಾ ಸರಿ, ಇಷ್ಟು ದಿನ ಅದಿತಿ ಮಾಯವಾಗಿದ್ದೆಲ್ಲಿಗೆ ಎಂಬ ಪ್ರಶ್ನೆ ಬರುವುದು ಸಹಜ. ಇಂಥದ್ದೊಂದು ಪ್ರಶ್ನೆಯನ್ನು ಕಿರುತೆರೆಯ ವೀಕ್ಷಕರೆದುರು ಕೇಳಿಬಿಟ್ಟಿàರಿ ಜೋಕೆ. ಹಿರಿತೆರೆಯಿಂದ ಅದಿತಿ ದೂರವಿದ್ದರೂ, ಕಿರುತೆರೆಯಲ್ಲಿ ತೊಡಗಿಸಿಕೊಂಡಿದ್ದರು. ಕಲರ್ಸ್‌ ಸೂಪರ್‌ನಲ್ಲಿ ಪ್ರಸಾರವಾಗುತ್ತಿರುವ ನಾಗಕನ್ನಿಕೆ ಎಂಬ ಧಾರಾವಾಹಿಯಲ್ಲಿ ಅವರು ನಾಗಕನ್ನಿಕೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಹಿರಿತೆರೆಯಲ್ಲಿ ಯಾಕೆ ನಟಿಸುತ್ತಿಲ್ಲ ಎಂಬ ಪ್ರಶ್ನೆ, "ಧಾರಾವಾಹಿಯಲ್ಲಿ ಬಿಝಿಯಿದ್ದಿದ್ದರಿಂದ ನಟಿಸಲಾಗಲಿಲ್ಲ' ಎಂಬ ಸಮಜಾಯಿಷಿ ಬರಬಹುದು.

ಹಾಗೆ ನೋಡಿದರೆ, ಅದಿತಿ ಕನ್ನಡಿಗರಿಗೆ ಪರಿಚಯವಾಗಿದ್ದೇ ಕಿರುತೆರೆಯಿಂದ. ಗುಂಡ್ಯನಾ ಹೆಂಡ್ತಿ ಎಂಬ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಅದಿತಿ ಕಾಣಿಸಿಕೊಳ್ಳುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಡುತ್ತಾರೆ. ಗುಂಡ್ಯನಾ ಹೆಂಡ್ತಿ ಧಾರಾವಾಹಿ ಪ್ರಸಾರವಾಗುತ್ತಿರುವಾಗಲೇ ಅದಿತಿಗೆ ಒಂದಷ್ಟು ಸಿನಿಮಾಗಳಿಂದಲೂ ಅವಕಾಶಗಳು ಬಂದಿವೆ. ಆದರೆ, ಅದಿತಿ ಮಾತ್ರ ಒಪ್ಪಿಕೊಂಡಿರಲಿಲ್ಲ. ಹೀಗೆ ಸಿನಿಮಾದಿಂದ ಬಂದ ಅವಕಾಶಗಳನ್ನು ಮುಂದೆ ಹಾಕಿಕೊಂಡೇ ಬಂದ ಅದಿತಿ ಕೊನೆಗೂ ಒಂದು ಸಿನೆಮಾ ಮಾಡುವ ಮನಸ್ಸು ಮಾಡುತ್ತಾರೆ. ಅದಕ್ಕೆ ಕಾರಣ ಕಥೆ ಹಾಗೂ ಪಾತ್ರ. ಪಾತ್ರ ಕೇಳಿ ಥ್ರಿಲ್‌ ಆದ ಅದಿತಿ ಒಪ್ಪಿಕೊಂಡ ಸಿನೆಮಾ ಧೈರ್ಯಂ. ಅಜೇಯ್‌ ರಾವ್‌ ನಾಯಕರಾಗಿರುವ ಈ ಸಿನಿಮಾದ ನಾಯಕಿಗಾಗಿ ನಿರ್ದೇಶಕ ಶಿವತೇಜಸ್‌ ಹುಡುಕಾಟ ನಡೆಸುತ್ತಿದ್ದಾಗ, ಮೂರು ರೌಂಡ್‌ ಆಡಿಷನ್‌ನಲ್ಲಿ ಪಾಸಾಗಿ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗುತ್ತಾರೆ. ಚಿತ್ರ ಬಿಡುಗಡೆ ಯಾಯಿತಾದರೂ ಹೆಚ್ಚು ಸದ್ದು ಮಾಡಲಿಲ್ಲ. ಆ ಚಿತ್ರದ ಚಿತ್ರೀಕರಣವಾಗ ಬೇಕಾದರೇ, ಪ್ರೀತಿ ಪ್ರಾಪ್ತಿರಸ್ತು ಎಂಬ ಇನ್ನೊಂದು ಚಿತ್ರದಲ್ಲಿ ಅದಿತಿ ಹೆಸರು ಕೇಳಿಬಂದಿತ್ತು. ಆದರೆ, ಚಿತ್ರ ಸೆಟ್ಟೇರಲಿಲ್ಲ.

ಹೀಗಿರು ವಾಗಲೇ ಕಲರ್ಸ್‌ ಸೂಪರ್‌ನಲ್ಲಿ ನಾಗಕನ್ನಿಕೆ ಎಂಬ ಧಾರಾವಾಹಿ ಪ್ಲಾನ್‌ ನಡೆಯುತ್ತಿರುವಾಗಲೇ, ಧಾರಾವಾಹಿ ತಂಡದವರ ಕಣ್ಣಿಗೆ ಅದಿತಿ ಬಿದ್ದಿದ್ದಾರೆ. ಅಲ್ಲಿಂದ ಆಕೆಯ ಜೀವನದ ಇನ್ನೊಂದು ಮಜಲು ಆರಂಭವಾಗಿದೆ. ಈ ಮಧ್ಯೆ ಹಿರಿತೆರೆಗೆ ವಾಪಸ್ಸು ಬರಬೇಕು, ಒಂದಿಷ್ಟು ಚಿತ್ರಗಳಲ್ಲಿ ನಟಿಸಬೇಕು ಎಂದು ಅದಿತಿ ಆಸೆ ಪಡುತ್ತಿದ್ದರೂ, ಸೂಕ್ತ ಅವಕಾಶ ಮತ್ತು ವೇದಿಕೆಗಾಗಿ ಅವರು ಕಾಯುತ್ತಿದ್ದರು. ಹೀಗಿರುವಾಗಲೇ "ಚಮಕ್‌' ಮಾಡಿರುವ ಸುನಿ ಕಡೆಯಿಂದ, ಅದಿತಿಗೆ ಒಂದು ಆಫ‌ರ್‌ ಹೋಗಿದೆ. ಸುನಿ ಆಫ‌ರ್‌ ಒಪ್ಪಿರುವ ಅದಿತಿ ಮತ್ತೆ ವಾಪಸ್ಸು ಬರುವುದಕ್ಕೆ ಎದುರು ನೋಡುತ್ತಿದ್ದಾರೆ. ಹಾಗಾದರೆ, ಮುಂದಿನ ದಿನಗಳಲ್ಲಿ ಅದಿತಿ ಹಿರಿತೆರೆಯಲ್ಲಿ ಸಕ್ರಿಯವಾಗಿರುತ್ತಾರಾ ಎಂಬ ಪ್ರಶ್ನೆ ಬರಬಹುದು. ಅದಿತಿ ಬಜಾರ್‌ ಮೇಲೆ ಅವೆಲ್ಲಾ ಅವಲಂಬಿತವಾಗಿದೆ.


Trending videos

Back to Top