ಮಕ್ಕಳಿಗೆ ಅರಿವು ಮೂಡಿಸಿ
Team Udayavani, Dec 21, 2017, 4:54 PM IST
ನರಗುಂದ: ಈ ಜಗತ್ತನ್ನೇ ಸ್ವರ್ಗವನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಧರ್ಮಕ್ಕಿದೆ. ಅಂಥ ಧರ್ಮದ ವೈಚಾರಿಕತೆಯೊಂದಿಗೆ ಇಂದಿನ ಮಕ್ಕಳಿಗೆ ಜನನದಿಂದಲೇ ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಆಚಾರ- ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು
ಗುಳೇದಗುಡ್ಡ ಒಪ್ಪತ್ತೇಶ್ವರ ಮಠದ ಶ್ರೀ ಒಪ್ಪತ್ತೇಶ್ವರ ಸ್ವಾಮೀಜಿ ಕರೆ ನೀಡಿದರು.
ತಾಲೂಕಿನ ಕೊಣ್ಣೂರ ಸಮೀಪದ ಸುಕ್ಷೇತ್ರ ಗೋವನಕೊಪ್ಪ ಗ್ರಾಮದಲ್ಲಿ ಮಂಗಳವಾರ ಸಂಜೆ ಗುರು ಬ್ರಹ್ಮಾನಂದರ 80ನೇ ಜಾತ್ರಾ
ಮಹೋತ್ಸವ ಹಾಗೂ ಬ್ರಹ್ಮಾನಂದರ ಜೀವನ ಚರಿತ್ರೆ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಎಷ್ಟೆಲ್ಲ ಆಸ್ತಿ, ಅಂತಸ್ತು ಗಳಿಸಿದರೂ ಮನಸ್ಸು, ಆತ್ಮ ನೆಮ್ಮದಿ ಹೊಂದುವುದಿಲ್ಲ. ಯಾರಲ್ಲಿ ನೈಜ ನೆಮ್ಮದಿ, ಶಾಂತಿ ಇರುತ್ತವೆಯೋ ಅವರೇ ನಿಜವಾದ ದೇವಮಾನವರು. ಧರ್ಮದಿಂದ ನಡೆದರೆ ಮಾತ್ರ ಮನುಷ್ಯನ ಜೀವನ ಸಾರ್ಥಕತೆ ಪಡೆಯುವುದು ಎಂದರು.
ನರಸಾಪುರ ಹಿರೇಮಠದ ಮರುಳ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ಇಂದಿನ ಯಾಂತ್ರಿಕ, ತಾಂತ್ರಿಕ ಜೀವನಶೈಲಿಯಿಂದ ಯುವ ಜನತೆ ದಾರಿ ತಪ್ಪುತ್ತಿದ್ದಾರೆ. ಸಂಸ್ಕೃತಿ ಸಂಸ್ಕಾರ ಮಾಯವಾಗಿ ಯಾರಿಗೂ ಗೌರವ ನೀಡದೆ ಕ್ಷಣಿಕ ಸುಖದ ಹವನಿಕೆಯತ್ತ ಸಾಗುತ್ತಿರುವುದು ಕಳವಳಕಾರಿ ಎಂದು ವಿಷಾದಿಸಿದರು. ಜಗತ್ತು ಸಾಮಾನ್ಯವಲ್ಲ. ನಾಲ್ಕು ದಿನ ಬಾಳಿ ಬದುಕಿ ಎಲ್ಲವನ್ನು
ಇಲ್ಲೇ ಬಿಟ್ಟು ಮತ್ತೆ ಮರಳಿ ಮಣ್ಣು ಸೇರುವ ಈ ದೇಹಕ್ಕೆ ದುರಾಸೆ ಅಂಟಿಕೊಂಡಿದೆ. ಆ ದುರಾಸೆ ದೂರವಾಗಬೇಕಾದರೆ ಇಂಥ ಧರ್ಮ
ಕಾರ್ಯಗಳಲ್ಲಿ ಪಾಲ್ಗೊಂಡು ಜೀವನ ಸಾರ್ಥಕಗೊಳಿಸಬೇಕು ಎಂದು ಹೇಳಿದರು.
ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ನೇತೃತ್ವ, ವರ್ತಕ ಕಿಷ್ಟಣ್ಣ ಬಿಜಾಪುರ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕ ಆರ್.ಎಚ್. ಯಾವಗಲ್ಲ, ಎಸ್. ಉಮಾಪತಿ ಶಾಸ್ತ್ರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ